



ಕೂಡ್ಲಿಗಿ, 07 ಮಾರ್ಚ್ (ಹಿ.ಸ.)
ಆ್ಯಂಕರ್: ಮಗನ ಹುಟ್ಟುಹಬ್ಬದ ಅಂಗವಾಗಿ ಹಂಪಿ ಹಾಗೂ ಅಂಜನಾದ್ರಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲು ಬೆಂಗಳೂರಿನ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಾಷ್ಟಿಯ ಹೆದ್ದಾರಿ - 50ರ ಕೂಡ್ಲಿಗಿಯ ಅಡವಿ ಸೂರವ್ವನಹಳ್ಳಿ ಸಮೀಪ ಕಾರು ಶನಿವಾರ ಪಲ್ಟಿಯಾಗಿ, ಇಬ್ಬರು ಮೃತಪಟ್ಟು, ಇನ್ನಿಬ್ಬರು ಗಾಯಗೊಂಡು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರು ಬೆಂಗಳೂರಿನ ಸುಬ್ಬಣ್ಣಪಾಳ್ಯದ ನಾರಾಯಣಸ್ವಾಮಿ ಲೇ ಔಟ್ನ ಶ್ರೀನಿವಾಸರಾವ್ (70) ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇವರ ಪತ್ನಿ ರತ್ನಭಾಯಿ (65) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದಂಪತಿಗಳ ಮಗ ರೂಪೇಶ (37) ಕಾರು ಚಾಲನೆ ಮಾಡುತ್ತಿದ್ದು ಹಾಗೂ ಸೊಸೆ ಕವಿತಾಬಾಯಿ (33) ಅವರು ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತವು ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.
ಘಟನಾ ಸ್ಥಳಕ್ಕೆ ಕೂಡ್ಲಿಗಿ ಪೊಲೀಸರು ಮತ್ತು ಹೈವೇ ಪೆಟ್ರೋಲಿಂಗ್ ಪೊಲೀಸರ ತಂಡ ಭೇಟಿ ಮಾಡಿ, ಪರಿಶೀಲನೆ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್