ಅಸ್ಸಾಂ: ಸುಖೋಯ್-30 ಎಂಕೆಐ ಯುದ್ಧ ವಿಮಾನ ಪತನ ;ಇಬ್ಬರು ಪೈಲಟ್ಗಳ ದುರ್ಮರಣ
ಕರ್ಬಿ ಆಂಗ್ಲಾಂಗ್, 06 ಮಾರ್ಚ್ (ಹಿ.ಸ.): ಆ್ಯಂಕರ್:ಭಾರತೀಯ ವಾಯುಪಡೆಯ ಅತ್ಯಾಧುನಿಕ ಯುದ್ಧ ವಿಮಾನವಾದ ಸುಖೋಯ್ ಸು-30ಎಂಕೆಐ ಗುರುವಾರ ತಡ ರಾತ್ರಿ ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತರನ್ನು ಸ್ಕ್ವ
Death pilots


ಕರ್ಬಿ ಆಂಗ್ಲಾಂಗ್, 06 ಮಾರ್ಚ್ (ಹಿ.ಸ.):

ಆ್ಯಂಕರ್:ಭಾರತೀಯ ವಾಯುಪಡೆಯ ಅತ್ಯಾಧುನಿಕ ಯುದ್ಧ ವಿಮಾನವಾದ ಸುಖೋಯ್ ಸು-30ಎಂಕೆಐ ಗುರುವಾರ ತಡ ರಾತ್ರಿ ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಮೃತರನ್ನು ಸ್ಕ್ವಾಡ್ರನ್ ಲೀಡರ್ ಅನುಜ್ ಹಾಗೂ ಸಹ-ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಎಂದು ಗುರುತಿಸಲಾಗಿದೆ. ಪೂರ್ವೇಶ್ ಅವರು ಭಾರತೀಯ ವಾಯುಪಡೆಯಲ್ಲಿ ಫ್ಲೈಯಿಂಗ್ ನ್ಯಾವಿಗೇಟರ್ ಆಗಿದ್ದರು. ಅಪಘಾತದ ಬಳಿಕ ಇಬ್ಬರೂ ಮಾರಣಾಂತಿಕ ಗಾಯಗಳಿಂದ ಸಾವನ್ನಪ್ಪಿರುವುದಾಗಿ ವಾಯುಪಡೆ ಅಧಿಕೃತವಾಗಿ ದೃಢಪಡಿಸಿದೆ.

ವಾಯುಪಡೆಯ ಮಾಹಿತಿ ಪ್ರಕಾರ, ಯುದ್ಧ ವಿಮಾನವು ಅಸ್ಸಾಂನ ಜೋರ್ಹತ್ ವಾಯುನೆಲೆಯಿಂದ ಹಾರಾಟ ಆರಂಭಿಸಿದ ಸ್ವಲ್ಪ ಸಮಯದ ಬಳಿಕ ಸಂಪರ್ಕ ಕಡಿತಗೊಂಡಿತು. ನಂತರ ಅದು ಕರ್ಬಿ ಆಂಗ್ಲಾಂಗ್ ಜಿಲ್ಲೆಯ ರಂಗಖೇಲಾ ಪ್ರದೇಶದ ಚೋಕಿಹೋಲಾ ಸಮೀಪದ ನಿಲಿಪ್ ಬ್ಲಾಕ್ ಭಾಗದಲ್ಲಿರುವ ದೂರದ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿದೆ.

ಸಂಜೆ ಸುಮಾರು 7 ಗಂಟೆ ವೇಳೆಗೆ ದೊಡ್ಡ ಸ್ಫೋಟದಂತಹ ಶಬ್ದ ಕೇಳಿಬಂದಿದ್ದು, ಸುತ್ತಮುತ್ತಲಿನ ಬೆಟ್ಟಗಳಲ್ಲಿ ಅದರ ಪ್ರತಿಧ್ವನಿ ಮೂಡಿದ ಪರಿಣಾಮ ಗ್ರಾಮಸ್ಥರಲ್ಲಿ ಭೀತಿ ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟದ ನಂತರ ಬೆಟ್ಟಗಳಿಂದ ಹೊಗೆ ಏರುತ್ತಿರುವುದನ್ನೂ ಸ್ಥಳೀಯರು ಗಮನಿಸಿದ್ದಾರೆ.

ಸಂಪರ್ಕ ಕಡಿತವಾದ ಮಾಹಿತಿ ದೊರಕುತ್ತಿದ್ದಂತೆ ಜೋರ್ಹತ್‌ನಿಂದ ವಾಯುಪಡೆಯ ರಕ್ಷಣಾ ತಂಡ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಅಪಘಾತ ಸ್ಥಳ ದುರ್ಗಮವಾಗಿರುವುದರಿಂದ ತಂಡವು ಸ್ಥಳಕ್ಕೆ ತಲುಪಲು ಸುಮಾರು ನಾಲ್ಕು ಗಂಟೆಗಳ ಕಾಲ ಹಿಡಿದಿತು.

ಸ್ಥಳದಿಂದ ಇಬ್ಬರು ಪೈಲಟ್‌ಗಳ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ಕುರಿತು ವಾಯುಪಡೆ ತನಿಖೆ ಆರಂಭಿಸಿದ್ದು, ಮೃತ ಪೈಲಟ್‌ಗಳ ಕುಟುಂಬಗಳಿಗೆ ಸಂತಾಪ ಸೂಚಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande