
ಕೊಪ್ಪಳ, 31 ಮಾರ್ಚ್ (ಹಿ.ಸ.)
ಆ್ಯಂಕರ್: ವಿದ್ಯಾರ್ಥಿಗಳು ಒಳ್ಳೆಯ ಗುಣಗಳು ಹಾಗೂ ಗುರುಗಳಲ್ಲಿನ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಪ್ಪಳ ಪೊಲೀಸ್ ಉಪಾಧೀಕ್ಷಕ ಮುತ್ತಣ್ಣ ಸವರಗೋಳ ಕರೆ ನೀಡಿದರು.
ತಾಲೂಕಿನ ಇರಕಲ್ಲಗಡಾ - ಯಲಮಗೇರಿಯ ಈಶ್ವರ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಶಾಲೆಯನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲ‘ದ ಮಾತಲ್ಲ. ಆದರೆ ಈಶ್ವರ ಆಂಗ್ಲ ಮಾ‘್ಯಮ ಶಾಲೆಯನ್ನು 18 ವರ್ಷಗಳ ಹಿಂದೆ ತಟ್ಟಿಯಲ್ಲಿ ಆರಂಭಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡಿ, ಸ್ವಂತ ಜಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವ ಮೂಲಕ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಸಿದ ಕೀರ್ತಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಾಗರಾಜ ಗುಡಿ ಅವರಿಗೆ ಸಲ್ಲುತ್ತದೆ. ಅತ್ಯಂತ ಕಡಿಮೆ ಶುಲ್ಕ ಪಡೆದು ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಪಾಲಕರೊಂದಿಗೆ ಪ್ರೀತಿ, ವಿಶ್ವಾಸದಿಂದ ನಡೆದುಕೊಂಡು ಅವರ ನಂಬಿಕೆ ಗಳಿಸಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಗೆ ಶಾಲೆಯನ್ನು ಹಸಿರೀಕರಣ ಮಾಡಿ ಉತ್ತಮ ಪರಿಸರ ನಿರ್ಮಾಣ ಮಾಡಿದ್ದು ಹೆಮ್ಮೆಯ ಸಂಗತಿ. ಇಂಥಹ ಉತ್ತಮ ಶಾಲೆ ಇಲ್ಲಿ ಕಟ್ಟಿರುವುದು ಈ ‘ಾಗದ ಜನರ ಹಾಗೂ ವಿದ್ಯಾರ್ಥಿಗಳ ಸುದೈವವಾಗಿದೆ ಎಂದರು.
ಕೊಪ್ಪಳ ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ ಮಾತನಾಡಿ, ಶಿಕ್ಷಣಕ್ಕೆ ಮನುಷ್ಯನ ಬದುಕನ್ನು ಮಾತ್ರವಲ್ಲ ಎಲ್ಲಾ ರಂಗದಲ್ಲೂ ಮಹತ್ತರ ಬದಲಾವಣೆಯನ್ನು ತರುವ ಶಕ್ತಿ ಇದೆ. ಶಕ್ಷಣ ಅತ್ಯಂತ ಶಕ್ತಿಶಾಲಿ ಆಯು‘. ಅಂತಹ ಮಹತ್ತರವಾದ ಶಿಕ್ಷಣವನ್ನು ಈಶ್ವರ ಆಂಗ್ಲ ಮಾಧ್ಯಮ ಶಾಲೆ ನೀಡುತ್ತಿರುವುದು ಸಂತೋಷದ ಸಂಗತಿ. ಗ್ರಾಮೀಣ ಪ್ರದೇಶದ ಬಡವರ ಮಕ್ಕಳಿಗೂ ಕೂಡಾ ಇಂಗ್ಲೀಷ್ ಜ್ಞಾನ ಬರಬೇಕು, ಅವರು ಕೂಡಾ ಗುಣಮಟ್ಟದ ಶಿಕ್ಷಣ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಕಡಿಮೆ ಶುಲ್ಕ ಪಡೆದು ಶಿಕ್ಷಣ ಜೊತೆಗೆ ಸರ್ವ ರೀತಿಯ ಜ್ಞಾನಾರ್ಜನೆ ನೀಡುತ್ತಿರುವುದು ಈ ಶಾಲೆಯ ಹಿರಿಮೆಯಾಗಿದೆ. ಇಂತಹ ಸಂಸ್ಥೆಯಿಂದ ಈ ಬಾಗದ ಮಕ್ಕಳ ‘ವಿಷ್ಯ ಉಜ್ವಲವಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ಶಾಲೆಯ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದಪ್ಪ ನೀರಲೂಟಿ, ವೀರಬಸಪ್ಪ ಪಟ್ಟಣಶೆಟ್ಟಿ, ಪತ್ರಕರ್ತ ಜಗದೀಶ ಅಂಗಡಿ, ಕುಬೇರ ಮಜ್ಜಿಗಿ, ವೀರಣ್ಣ ಕಂಬಳಿ, ಯಲ್ಲಾಲಿಂಗ ಕತ್ತಿ, ಶಿವನಗೌಡ ಪೊಲೀಸ್ಪಾಟೀಲ್ ಸೇರಿದಂತೆ ಇತರರು ಇದ್ದರು.
ಶಾಲೆಯ ಸಂಸ್ಥಾಪಕ ಅಧ್ಯಕ್ಷ ನಾಗರಾಜ ಗುಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಬಿ.ಎಸ್. ಮೂಲಿ ನಿರೂಪಿಸಿದರು. ಶರಣಬಸವ ಸ್ವಾಗತಿಸಿದರು. ಅನುಶಾ ಎಂ.ಬಿ. ವಂದಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್