ಸಂಗೀತ ಅದ್ಬುತವಾದ ಶಕ್ತಿ - ದತ್ತು ಕಮ್ಮಾರ
ಕೊಪ್ಪಳ, 31 ಮಾರ್ಚ್ (ಹಿ.ಸ.) ಆ್ಯಂಕರ್: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಗಾನಾಮೃತ ಸಂಗೀತ (ರಿ) ಭಾಗ್ಯನಗರ ಅವರ ಸಹಯೋಗದಲ್ಲಿ ನೀಲಕಂಠೇಶ್ವರ ದೇವಾಸ್ಥಾನದ ಎದುರುಗಡೆಯ ಉದ್ಯಾನವನದಲ್ಲಿ `ಕಲಾಯಾತ್ರೆ’ಯನ್ನು ನಡೆಸಿತು. ಪತ್ರಕರ್ತ ದತ್ತು ಕಮ್ಮಾರ ಅವರು ಕಾರ್ಯಕ್ರಮ ಉದ್ಘಾಟಿಸಿ, ಸಂಗೀತ ನಿಂತ
ಸಂಗೀತ ಅದ್ಬುತವಾದ ಶಕ್ತಿ - ದತ್ತು ಕಮ್ಮಾರ


ಸಂಗೀತ ಅದ್ಬುತವಾದ ಶಕ್ತಿ - ದತ್ತು ಕಮ್ಮಾರ


ಸಂಗೀತ ಅದ್ಬುತವಾದ ಶಕ್ತಿ - ದತ್ತು ಕಮ್ಮಾರ


ಸಂಗೀತ ಅದ್ಬುತವಾದ ಶಕ್ತಿ - ದತ್ತು ಕಮ್ಮಾರ


ಕೊಪ್ಪಳ, 31 ಮಾರ್ಚ್ (ಹಿ.ಸ.)

ಆ್ಯಂಕರ್: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಗಾನಾಮೃತ ಸಂಗೀತ (ರಿ) ಭಾಗ್ಯನಗರ ಅವರ ಸಹಯೋಗದಲ್ಲಿ ನೀಲಕಂಠೇಶ್ವರ ದೇವಾಸ್ಥಾನದ ಎದುರುಗಡೆಯ ಉದ್ಯಾನವನದಲ್ಲಿ `ಕಲಾಯಾತ್ರೆ’ಯನ್ನು ನಡೆಸಿತು.

ಪತ್ರಕರ್ತ ದತ್ತು ಕಮ್ಮಾರ ಅವರು ಕಾರ್ಯಕ್ರಮ ಉದ್ಘಾಟಿಸಿ, ಸಂಗೀತ ನಿಂತ ನೀರಲ್ಲ. ಸಂಗೀತ ನಿರಂತರವಾಗಿ ಹರಿಯುವ ಶಕ್ತಿ. ಪುರಾತನ ಕಾಲದಿಂದಲೂ - ಭವಿಷ್ಯದಲ್ಲೂ ಸಂಗೀತಕ್ಕೆ ಮಹತ್ವವಿದೆ. ಶಕ್ತಿ ಇದೆ. ಮಕ್ಕಳ ಮತ್ತು ಜನಸಾಮಾನ್ಯರನ್ನು ತಪ್ಪುದಾರಿಗೆ ಎಳೆಯುತ್ತಿರುವ ಸಾಮಾಜಿಕ ಜಾಲಮಾಧ್ಯಮಗಳ ಪ್ರಭಾವದಲ್ಲಿ ಸಂಗೀತ ಕಲಿಕೆಗೆ ಮಕ್ಕಳು ಮತ್ತು ಪೋಷಕರು ಆಸಕ್ತಿ ತೋರಿಸಬೇಕು ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರಮೇಶ್ ಹ್ಯಾಟಿ ಅವರು, ಸಂಗೀತ ಜಗತ್ತಿನಲ್ಲಿಯೇ ಆದ್ಯತೆಯನ್ನು ಪಡೆದಿರುವ ವಿಶೇಷ ವಿದ್ಯೆ. ಪಂಡಿತ ಪುಟ್ಟರಾಜ ಗವಾಯಿಗಳು ಸಂಗೀತವನ್ನೇ ಉಸಿರಾಗಿಸಿಕೊಂಡವರು. ಅಂಧ, ಅನಾಥರ ಬಾಳಿಗೆ ಬೆಳಕಾದವರು. ಮಕ್ಕಳು ಸಂಗೀತದಲ್ಲಿ ಸಾಧನೆಯನ್ನು ಮಾಡಿದ್ದಾರೆ ಎಂದರು.

ಸಂಸ್ಥೆಯ ಅದ್ಯಕ್ಷರಾದ ವಿಜಯಲಕ್ಷ್ಮೀ ಮ್ಯಾಗಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಕೋಟ್ರೇಶ ಶೆಡ್ಮೀ, ಪಟ್ಟಣ ಪಂಚಾಯತ ಸದಸ್ಯರಾದ ಮಂಜುಳಾ ಮ್ಯಾಗಳಮನಿ ಮತ್ತಿತರರು ಉಪಸ್ಥಿತರಿದ್ದರು.

ಕಲಾ ವೃಂದದಲ್ಲಿ ರಾಘವೇಂದ್ರ ಗಂಗಾವತಿ ಅವರಿಂದ ತಬಲಾ ಸೋಲೋ, ಅನನ್ಯ ದೇಸಾಯಿ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಸ್ನೇಹ ಕೆ.ಎಂ. ಅವರಿಂದ ಸುಗಮ ಸಂಗೀತ, ಸ್ಪಂದನ ಅವರಿಂದ ದಾಸವಾಣಿ, ತಿಪ್ಪೇಶ್ ಹಿರೇಮಠ ಬೆಂಗಳೂರು ಅವರಿಂದ ಸುಗಮ ಸಂಗೀತ, ವಿಜಯಲಕ್ಮ್ಷೀ ಶ್ಯಾವಿ ಅವರಿಂದ ಜಾನಪದ ಗೀತೆಗಳು, ಅಪರ್ಣಾ ಹೆಗಡೆ ಹಾಗೂ ತಂಡ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ವಾದ್ಯವೃಂದದ ಕೀಬೋರ್ಡನಲ್ಲಿ ಶ್ರೀ ರಾಮಚಂದ್ರಪ್ಪ ಉಪ್ಪಾರ, ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ದೊಡ್ಡಮನಿ, ರಾಘವೇಂದ್ರ ಗಂಗಾವತಿ, ಗಿಟಾರ್ನಲ್ಲಿ ತಿಪ್ಪೇಶ ಹಿರೇಮಠ, ಡೋಲಕ್ ನಲ್ಲಿ ನಂದೀಶ್ ಹಿರೇಮಠ, ರಿದಂ ಪ್ಯಾಡನಲ್ಲಿ ಸಂಜನ್ ಬೆಲ್ಲದ, ತಾಳವಾದ್ಯದಲ್ಲಿ ಕೃಷ್ಣ ಸೊರಟೂರ ಮೆರುಗು ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande