ಜೈನ ಧರ್ಮದ ಅಹಿಂಸೆಯ ಸಂದೇಶವು ವಿಶ್ವಕ್ಕೆ ದಿಕ್ಕು: ಪ್ರಧಾನಿ ಮೋದಿ
ಗಾಂಧಿನಗರ, 31 ಮಾರ್ಚ್ (ಹಿ.ಸ.): ಆ್ಯಂಕರ್: ಪ್ರಸ್ತುತ ಜಾಗತಿಕ ಅಸ್ಥಿರತೆ ಮತ್ತು ಅಶಾಂತಿಯ ಸಂದರ್ಭದಲ್ಲಿ, ಜೈನ ಧರ್ಮದ ಅಹಿಂಸೆಯ ತತ್ವವು ಇಡೀ ಮಾನವಕುಲಕ್ಕೆ ಅತ್ಯಂತ ಪ್ರಸ್ತುತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್‌ನ ಗಾಂಧಿನಗರದಲ್ಲಿರುವ ಕೋಬಾ ತೀರ್ಥದಲ್ಲಿ ನಿರ್ಮಿಸಲಾದ
Pm


ಗಾಂಧಿನಗರ, 31 ಮಾರ್ಚ್ (ಹಿ.ಸ.):

ಆ್ಯಂಕರ್:

ಪ್ರಸ್ತುತ ಜಾಗತಿಕ ಅಸ್ಥಿರತೆ ಮತ್ತು ಅಶಾಂತಿಯ ಸಂದರ್ಭದಲ್ಲಿ, ಜೈನ ಧರ್ಮದ ಅಹಿಂಸೆಯ ತತ್ವವು ಇಡೀ ಮಾನವಕುಲಕ್ಕೆ ಅತ್ಯಂತ ಪ್ರಸ್ತುತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತ್‌ನ ಗಾಂಧಿನಗರದಲ್ಲಿರುವ ಕೋಬಾ ತೀರ್ಥದಲ್ಲಿ ನಿರ್ಮಿಸಲಾದ ಸಾಮ್ರಾಟ್ ಸಂಪ್ರತಿ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. “ಜಗತ್ತು ಇಂದಿನ ದಿನಗಳಲ್ಲಿ ಅಶಾಂತಿ ಮತ್ತು ಸಂಘರ್ಷಗಳಿಂದ ಕಂಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಜೈನ ಧರ್ಮದ ಅಹಿಂಸೆ ಮತ್ತು ಶಾಂತಿಯ ಸಂದೇಶವು ವಿಶ್ವಕ್ಕೆ ಮಾರ್ಗದರ್ಶನ ನೀಡಬಲ್ಲದು,” ಎಂದು ಹೇಳಿದರು.

ಮಹಾವೀರ ಅವರಿಗೆ ನಮನ ಸಲ್ಲಿಸಿದ ಮೋದಿ, ಅಹಿಂಸೆ, ಸತ್ಯ, ಅಸ್ತೇಯ ಮತ್ತು ಅಪರಿಗ್ರಹ ತತ್ವಗಳು ಇಂದಿನ ಜಗತ್ತಿಗೆ ಹೊಸ ದಿಕ್ಕನ್ನು ನೀಡಬಹುದು ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಸಂಪರ್ತೀ ಅವರ ಆಡಳಿತದ ಉದಾಹರಣೆಯನ್ನು ಉಲ್ಲೇಖಿಸಿದ ಪ್ರಧಾನಿ, ಸೇವಾ ಮನೋಭಾವದ ಮೂಲಕ ಅಹಿಂಸೆಯನ್ನು ಪ್ರಚಾರ ಮಾಡಿದ ಅವರ ಜೀವನ ಇಂದಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.

ಭಾರತದ ಪುರಾತನ ಜ್ಞಾನ ಪರಂಪರೆಯನ್ನು ನೆನಪಿಸಿದ ಮೋದಿ, ನಳಂದಾ ವಿಶ್ವವಿದ್ಯಾಲಯ ಮತ್ತು ತಕ್ಷಿಲಾ ವಿಶ್ವವಿದ್ಯಾಲಯಗಳ ನಾಶದಿಂದ ಅಮೂಲ್ಯ ಹಸ್ತಪ್ರತಿಗಳು ಕಳೆದುಹೋಗಿರುವುದನ್ನು ಉಲ್ಲೇಖಿಸಿದರು. ಸ್ವಾತಂತ್ರ್ಯದ ನಂತರವೂ ಈ ಪರಂಪರೆಯ ಸಂರಕ್ಷಣೆಗೆ ಅಗತ್ಯ ಗಮನ ಸಿಕ್ಕಿಲ್ಲ ಎಂದರು.

ಆದರೆ ಈಗ “ಜ್ಞಾನ ಭಾರತಂ ಮಿಷನ್” ಮುಂತಾದ ಯೋಜನೆಗಳ ಮೂಲಕ ಹಸ್ತಪ್ರತಿಗಳ ಪತ್ತೆ, ಸಂರಕ್ಷಣೆ ಮತ್ತು ಡಿಜಿಟಲೀಕರಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು. ಆಧುನಿಕ ತಂತ್ರಜ್ಞಾನ ಬಳಸಿ ಸ್ಕ್ಯಾನಿಂಗ್, ರಾಸಾಯನಿಕ ಸಂರಕ್ಷಣೆ ಮತ್ತು ಡಿಜಿಟಲ್ ಆರ್ಕೈವ್ ಸೃಷ್ಟಿ ಕಾರ್ಯಗಳು ನಡೆಯುತ್ತಿವೆ.

ಸಾಮ್ರಾಟ್ ಸಂಪ್ರತಿ ವಸ್ತುಸಂಗ್ರಹಾಲಯವು ಜೈನ ಧರ್ಮದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಒಟ್ಟುಗೂಡಿಸಿ ಪ್ರದರ್ಶಿಸುತ್ತಿದ್ದು, ಏಳು ಗ್ಯಾಲರಿಗಳ ಮೂಲಕ ಅಪರೂಪದ ಅವಶೇಷಗಳು, ಕಲಾಕೃತಿಗಳು ಮತ್ತು ಹಸ್ತಪ್ರತಿಗಳನ್ನು ಪರಿಚಯಿಸುತ್ತದೆ. ಇದು ಸಂಶೋಧಕರು ಹಾಗೂ ಪ್ರವಾಸಿಗರಿಗೆ ಭಾರತದ ನಾಗರಿಕತೆಯ ಸಮಗ್ರ ಅನುಭವವನ್ನು ನೀಡುವ ಕೇಂದ್ರವಾಗಲಿದೆ ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande