ಮಾ.29 ರಂದು ಚಿಲಕಮುಖಿ : ವಿದ್ಯುತ್ ವ್ಯತ್ಯಯ
ಕೊಪ್ಪಳ, 26 ಮಾರ್ಚ್ (ಹಿ.ಸ.) ಆ್ಯಂಕರ್ : ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ 110 ಕೆವಿ ಚಿಲಕಮುಖಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣೆ ಕೆಲಸದ ನಿಮಿತ್ತ ಮಾರ್ಚ್ 29 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 110 ಕೆವಿ ಚಿಲಕಮುಖಿ ಉಪಕೇಂದ್ರದ ಫೀಡರ
ಮಾ.29 ರಂದು ಚಿಲಕಮುಖಿ : ವಿದ್ಯುತ್ ವ್ಯತ್ಯಯ


ಕೊಪ್ಪಳ, 26 ಮಾರ್ಚ್ (ಹಿ.ಸ.)

ಆ್ಯಂಕರ್ : ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ 110 ಕೆವಿ ಚಿಲಕಮುಖಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣೆ ಕೆಲಸದ ನಿಮಿತ್ತ ಮಾರ್ಚ್ 29 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

110 ಕೆವಿ ಚಿಲಕಮುಖಿ ಉಪಕೇಂದ್ರದ ಫೀಡರ್ ಗಳಾದ ಎಫ್-1 ವೆಂಕಟಪೂರ ಐಪಿ, ಎಫ್-2 ಮೆತಗಲ ಐಪಿ, ಎಫ್-3 ಹಿರೆಸೂಳಿಕೇರಿ ಐಪಿ, ಎಫ್-5 ಶಿಡಗನಹಳ್ಳಿ ಐಪಿ, ಎಫ್-8 ಚಿಲಕಮುಖಿ ಐಪಿ, ಎಫ್-9 ಇರಕಲ್ಗಡಾ ಐಪಿ ಎಫ್-10 ಗೋಸಲದೊಡ್ಡಿ ಐಪಿ, ಎಫ್-4 ಹಾಸಗಲ್ ಎನ್.ಜೆ.ವೈ, ಎಫ್-7 ಕೊಡದಾಳ ಎನ್.ಜೆ.ವೈ, ಎಫ್-11 ಜಿನ್ನಾಪೂರ ಎನ್.ಜೆ.ವೈ. ಫೀಡರ್ಗಳ ವ್ಯಾಪ್ತಿಗೆ ಒಳಪಡುವ ಇರಕಲ್ಗಡಾ ಕಾರ್ಯ ಮತ್ತು ಪಾಲನಾ ಶಾಖೆಯ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು.

ಕಾಮಗಾರಿಯು ನಿಗದಿತ ಅವಧಿಗಿಂತ ಮೊದಲು ಪೂರ್ಣಗೊಂಡಲ್ಲಿ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಈ ಅವಧಿಯಲ್ಲಿ ಸಾರ್ವಜನಿಕರು ಯಾವುದೇ ವಿಧದ ವಿದ್ಯುತ್ ದುರಸ್ತಿ ಅಥವಾ ಸಂಬAಧಿತ ಕೆಲಸಗಳನ್ನು ಕೈಗೊಳ್ಳಬಾರದೆಂದು ಸೂಚಿಸಲಾಗಿದೆ. ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande