ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘ - ನಿರ್ಣಯ
ಕೊಪ್ಪಳ, 26 ಮಾರ್ಚ್ (ಹಿ.ಸ.) ಆ್ಯಂಕರ್ : ನಗರಸಭೆ ಸಂಕೀರ್ಣದ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ಬಲ್ಡೋಟ ಹಟಾವೋ ಕೊಪ್ಪಳ ಬಚಾವೋ 147ನೇ ದಿನದ ಧರಣಿ ಯಶಸ್ವಿಯಾಯಿತು. ಧರಣಿಯಲ್ಲಿ ಕಾರ್ಯಕಾರಿ ಮಂಡಳಿಯಲ್ಲಿ ಚರ್ಚೆ
ನಿರ್ಣಯ


ಕೊಪ್ಪಳ, 26 ಮಾರ್ಚ್ (ಹಿ.ಸ.)

ಆ್ಯಂಕರ್ : ನಗರಸಭೆ ಸಂಕೀರ್ಣದ ಮುಂದೆ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ಬಲ್ಡೋಟ ಹಟಾವೋ ಕೊಪ್ಪಳ ಬಚಾವೋ 147ನೇ ದಿನದ ಧರಣಿ ಯಶಸ್ವಿಯಾಯಿತು.

ಧರಣಿಯಲ್ಲಿ ಕಾರ್ಯಕಾರಿ ಮಂಡಳಿಯಲ್ಲಿ ಚರ್ಚೆ ನಡೆಸಿ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಾರ್ಖಾನೆ ಭಾದಿತ ರೈತರನ್ನು ಸಂಘಟಿಸಬೇಕು ಎಂದಾಯಿತು. ಸುದೀರ್ಘ ಕಾಲದಿಂದ ಮಾಲಿನ್ಯ ಮಾಡುತ್ತಾ ಬರುವ ಕಾರ್ಖಾನೆಗಳಿಗೆ ಯಾವುದೆ ಕಾರಣಕ್ಕೂ ಮುಂದುವರಿದ ತಂತ್ರಜ್ಞಾನ ಅಳವಡಿಸಿರಿ ಎಂದು ಯಾವ ಪಕ್ಷವೂ ಹೇಳಬಾರದು. ಯಾಕೆಂದರೆ ಎರಡು ದಶಕಗಳಿಂದ ಕಾರ್ಖಾನೆಗಳು ಹಳ್ಳಿ ಜನರ ಜೀವ ಹಿಂಡಿವೆ. ಕೆಂಪು ವಲಯ ಪಟ್ಟಿಯ ಕಾರ್ಖಾನೆಗಳು ಎಂದು ಗೊತ್ತಿದ್ದೂ ಸುಧಾರಿತ ತಂತ್ರಜ್ಞಾನದ ಕೊರತೆ ಎಂದು ಹೇಳಬಾರದೆಂದು ಬಹಿರಂಗ ಸಭೆಯಲ್ಲಿ ಚರ್ಚಿಸಲಾಯಿತು. ಹಳ್ಳಿಗಳಲ್ಲಿ ಮುಖ್ಯವಾಗಿ ಗಿಣಿಗೇರಿ, ಕನಕಾಪುರ, ಬೇವಿನಹಳ್ಳಿ, ಅಲ್ಲಾನಗರ, ಹಿರೇಬಗನಾಳ, ಕಾಸನಕಂಡಿ, ಚಿಕ್ಕಬಗನಾಳ, ಲಾಚನಕೇರಿ, ಕುಣಿಕೇರಿ, ಮುಂಡರಗಿ, ಕುಣಿಕೇರಿ ತಾಂಡಾ, ಹಾಲವರ್ತಿ ಮುಂತಾದ 20ಕ್ಕೂ ಹೆಚ್ಚಿನ ಹಳ್ಳಿಯಲ್ಲಿ 'ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘ' ವನ್ನು ಜಂಟಿ ಕ್ರಿಯಾ ವೇದಿಕೆಯ ಸಂಯೋಜನೆಯಲ್ಲಿ ಕಟ್ಟಲು ನಿರ್ಣಯ ಕೈಗೊಳ್ಳಲಾಯಿತು.

ಬಾಧಿತವಾಗುವ ಹಳ್ಳಿಗಳು ಸ್ವಯಂಪ್ರೇರಣೆಯಿಂದ ಮುಂದೆ ಬಂದು ಘಟಕ ಕಟ್ಟಿಕೊಳ್ಳಬೇಕು, 22 ಹಳ್ಳಿಗಳ ಜನರನ್ನು ಒಟ್ಟುಗೂಡಿಸಿ ಒಂದು ಸಂಘ ಮಾಡಿ, ಪ್ರತಿ ಗ್ರಾಮಕ್ಕೆ ಒಂದು ಘಟಕ ಮಾಡಲು ಸಭೆ ಸಮ್ಮತಿಸಿತು.

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಡಾ.ವೈ.ಬಿ. ರಡ್ಡೇರ, ಡಾ. ಬಸವರಾಜ ಪೂಜಾರ, ಮಹಿಳಾ ಮುಖಂಡರುಗಳಾದ ಕಾವ್ಯ ಪ್ರಸನ್ನ ಗಡಾದ, ಸರೋಜಾ ಬಾಕಳೆ, ವಿದ್ಯಾ ನಾಲ್ವಾಡ, ಪ್ರಮುಖರಾದ ಸಂಗಮೇಶ್ವರ ಪಾಟೀಲ್, ಶಂಭುಲಿಂಗಪ್ಪ ಹರಗೇರಿ, ಮಹೇಶ ಮನ್ನಾಪುರ, ರವಿ ಕಾಂತನವರ, ಎಸ್.ಬಿ. ರಾಜೂರು, ರಾಜಶೇಖರ ಏಳುಬಾವಿ, ಶರಣು ಶೆಟ್ಟರ್, ಯಮನೂರಪ್ಪ ಹಾಲಳ್ಳಿ ಬಸಾಪುರ, ಮುತ್ತುರಾಜ್ ತೋಟದ, ಮಹಾದೇವಪ್ಪ ಮಾವಿನಮಡು, ನಾಗರಾಜ ಕುಷ್ಟಗಿ ಲಾಚನಕೇರಿ, ಶಿವಪ್ಪ ಜಲ್ಲಿ, ವಿಜಯ ಮಹಾಂತೇಶ ಹಟ್ಟಿ, ಭೀಮಪ್ಪ ಯಲಬುರ್ಗಾ ಮುಂತಾದವರು ಇದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande