
ಬಳ್ಳಾರಿ, 26 ಮಾರ್ಚ್ (ಹಿ.ಸ.)
ಆ್ಯಂಕರ್ : ಬಳ್ಳಾರಿ ನಗರದ ಜೆಸ್ಕಾಂ ಉಪ-ವಿಭಾಗ 1 ಮತ್ತು 2ರ ವಿದ್ಯುತ್ ಗ್ರಾಹಕರ ಕುಂದುಕೊರತೆಗಳ ಸಭೆಯನ್ನು ಮಾ.27 ರಂದು ಮಧ್ಯಾಹ್ನ 03.30 ಗಂಟೆಗೆ ನಗರದ ಹೆಚ್.ಆರ್. ಗವಿಯಪ್ಪ ವೃತ್ತದ ಬಳಿಯಿರುವ ಜೆಸ್ಕಾಂ ವಲಯ ಕಚೇರಿಯ ಮೊದಲ ಮಹಡಿಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಜೆಸ್ಕಾಂ ನಗರ ವಿಭಾಗದ (ಕಾರ್ಯ ಮತ್ತು ಪಾಲನೆ) ಕಾರ್ಯನಿರ್ವಾಹಕ ಅಭಿಯಂತರರು (ಇಇ) ಅಧ್ಯಕ್ಷತೆ ವಹಿಸುವರು.
ಬಳ್ಳಾರಿ ನಗರದ ಜೆಸ್ಕಾಂ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ಈ ಸಭೆಯಲ್ಲಿ ಭಾಗವಹಿಸಿ ವಿದ್ಯುತ್ ಬಿಲ್, ಸಂಪರ್ಕ ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳಿಗೆ ಸಂಬ0ಧಿಸಿದ ತಮ್ಮ ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್