
ಬಾಗಲಕೋಟೆ, 26 ಮಾರ್ಚ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಬಾದಾಮಿ ತಾಲೂಕ ವ್ಯಾಪ್ತಿಯ ಕುಳಗೇರಿ ಚೆಕ್ ಪೋಸ್ಟ್ನಲ್ಲಿ ದಾಖಲೆ ಇಲ್ಲದ ₹8 ಲಕ್ಷ ನಗದು ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಕುಳಗೇರಿ ಚೆಕ್ ಪೋಸ್ಟ್ನಲ್ಲಿ ಆರ್.ಎಲ್. ನದಾಫ್ ಅವರ ನೇತೃತ್ವದ ಎಸ್ಎಸ್ಟಿ (ಸ್ಟಾಟಿಕ್ ಸರ್ವೇಲ್ಯಾನ್ಸ್ ಟೀಂ) ತಂಡ ವಾಹನ ತಪಾಸಣೆ ನಡೆಸುವ ವೇಳೆ ಕಾರೊಂದರಲ್ಲಿ ಈ ನಗದು ಹಣ ಪತ್ತೆಯಾಗಿದೆ.
ನಗದು ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ವಾಹನದಲ್ಲಿದ್ದವರು ವಿಫಲವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ₹8 ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆಂದು ಚುನಾವಣಾ ಅಧಿಕಾರಿಗಳು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande