ಬಾಗಲಕೋಟೆ ಉಪಚುನಾವಣೆ: ರಾಜಕೀಯ ಪೈಪೋಟಿ-ಸಹೋದರರ ಸವಾಲ್
ಬಾಗಲಕೋಟೆ, 26 ಮಾರ್ಚ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಅಣ್ಣ-ತಮ್ಮನ ನಡುವಿನ ರಾಜಕೀಯ ಪೈಪೋಟಿ ಜನರ ಗಮನ ಸೆಳೆಯುತ್ತಿದೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ವಿರುದ್ಧ ಅವರ ತಮ್ಮ ಮಲ್ಲಿಕಾರ್ಜುನ ಚರಂತಿಮಠ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸುತ್ತಿರುವುದು ಚುನಾವಣೆ
ಸಹೋದರ


ಬಾಗಲಕೋಟೆ, 26 ಮಾರ್ಚ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಅಣ್ಣ-ತಮ್ಮನ ನಡುವಿನ ರಾಜಕೀಯ ಪೈಪೋಟಿ ಜನರ ಗಮನ ಸೆಳೆಯುತ್ತಿದೆ.

ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ವಿರುದ್ಧ ಅವರ ತಮ್ಮ ಮಲ್ಲಿಕಾರ್ಜುನ ಚರಂತಿಮಠ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸುತ್ತಿರುವುದು ಚುನಾವಣೆಗೆ ವಿಶೇಷ ಕುತೂಹಲವನ್ನು ತಂದಿದೆ.

ಬಾಗಲಕೋಟೆ ನಗರದ ಹಳೆಪೇಟೆ, ಕುಂಭಾರ ಗಲ್ಲಿ ಮತ್ತು ಜೈನ್ ಪೇಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಇಬ್ಬರೂ ಸಹೋದರರು ಸಕ್ರಿಯವಾಗಿ ಪ್ರಚಾರ ನಡೆಸುತ್ತಿದ್ದು, ಚುನಾವಣಾ ಕಣ ಹೆಚ್ಚು ತೀವ್ರಗೊಂಡಿದೆ.

ಒಂದು ಕಡೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಭರ್ಜರಿ ಮೆರವಣಿಗೆಗಳ ಮೂಲಕ ಪ್ರಚಾರ ನಡೆಸುತ್ತಿದ್ದರೆ, ಮತ್ತೊಂದೆಡೆ ಮಲ್ಲಿಕಾರ್ಜುನ ಚರಂತಿಮಠ ಕಾಂಗ್ರೆಸ್ ಪರವಾಗಿ ತಮ್ಮ ಅಣ್ಣನ ವಿರುದ್ಧ ತೀವ್ರ ಪ್ರಚಾರ ನಡೆಸುತ್ತಿದ್ದಾರೆ.

ಇದರಿಂದಾಗಿ ಬಾಗಲಕೋಟೆ ರಾಜಕೀಯ ವಲಯದಲ್ಲಿ ಈ ಅಣ್ಣ-ತಮ್ಮರ ಪೈಪೋಟಿ ಪ್ರಮುಖ ಚರ್ಚೆಯ ವಿಷಯವಾಗುತ್ತಿದ್ದು, ಒಂದೇ ಕುಟುಂಬದ ಇಬ್ಬರು ನಾಯಕರು ವಿಭಿನ್ನ ಪಕ್ಷಗಳ ಪರವಾಗಿ ಎದುರು ಬಂದಿರುವುದು ಚುನಾವಣೆಗೆ ಹೊಸ ತಿರುವು ನೀಡಿದಂತಾಗಿದೆ. ಮತದಾರರ ಮನೋಭಾವದ ಮೇಲೆ ಇದರ ಪರಿಣಾಮ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande