ನೀರನ್ನು ಮಿತವಾಗಿ - ಹಿತವಾಗಿ ಬಳಸಿ
ಬಳ್ಳಾರಿ, 25 ಮಾರ್ಚ್ (ಹಿ.ಸ.) ಆ್ಯಂಕರ್ : ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ವಿಭಾಗವು ವಿಶ್ವ ಜಲ ದಿನವನ್ನು ಬುಧವಾರ ಆಚರಿಸಿತು. ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಜಿಬಿಆರ್ ಕಾಲೇಜಿನ ಅಧ್ಯಕ್ಷರು ಆಗಿರುವ ಸಿ. ಮೋಹನ
ನೀರನ್ನು ಮಿತವಾಗಿ - ಹಿತವಾಗಿ ಬಳಸಿ


ಬಳ್ಳಾರಿ, 25 ಮಾರ್ಚ್ (ಹಿ.ಸ.)

ಆ್ಯಂಕರ್ :

ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ವಿಭಾಗವು ವಿಶ್ವ ಜಲ ದಿನವನ್ನು ಬುಧವಾರ ಆಚರಿಸಿತು.

ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಜಿಬಿಆರ್ ಕಾಲೇಜಿನ ಅಧ್ಯಕ್ಷರು ಆಗಿರುವ ಸಿ. ಮೋಹನರೆಡ್ಡಿ ಅವರು ವಿಶ್ವ ಜಲ ದಿನಾಚರಣೆಗೆ ಚಾಲನೆ ನೀಡಿ, ನೀರನ್ನು ವೈಜ್ಞಾನಿಕವಾಗಿ – ಮಿತವಾಗಿ - ಹಿತವಾಗಿ ಬಳಕೆ ಮಾಡಬೇಕು ಎಂದು ಕರೆ ನೀಡಿದರು.

ನಾಡಗೌಡ ಮರಿಬಸವನಗೌಡ ಸ್ವತಂತ್ರ ಪಿ.ಯು.ಕಾಲೇಜ್ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಮುಂಡಾಸದ ಚನ್ನಬಸವರಾಜ, ಹೆಚ್.ಎಸ್.ಕೆ ಪಾಲಿಟೆಕ್ನಿಕ್ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪಲ್ಲೇದ ಪ್ರಭುಲಿಂಗ, ಎಚ್ಎಸ್ಕೆ ಪಾಲಿಟೆಕ್ನಿಕ್ನ ಆಡಳಿತ ಮಂಡಳಿಯ ಸದಸ್ಯರಾದ ಬಾಣಾಪುರ ಜಡೆಸಿದ್ದನಗೌಡ, ಚಂದ್ರಶೇಖರ ಪಾಶ್ಚಾಪುರ್, ಪ್ರಾಚಾರ್ಯರಾದ ಬಿ. ಶ್ರೀಶೈಲಗೌಡ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕಿ ಕುಮಾರಿ ಸ್ವಾತಿಕೆ.ಹೆಚ್ ಅವರು ಸ್ವಾಗತಿಸಿದರು. ಸಿವಿಲ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಉಮ್ಮೆಸಲ್ಮಾ ಅವರು ಕಾರ್ಯಕ್ರಮ ನಿರೂಪಿಸಿದರು. ಬಿ. ಸಂಜನಾ ಅವರು ವಂದನಾರ್ಪಣೆ ಸಲ್ಲಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande