
ಕೊಪ್ಪಳ, 25 ಮಾರ್ಚ್ (ಹಿ.ಸ.)
ಆ್ಯಂಕರ್ : ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ವ್ಯಾಪ್ತಿಯ 110ಕೆವಿ ಬೆಟಗೇರಾ ಮತ್ತು 33ಕೆವಿ ಅಳವಂಡಿ ಉಪಕೇಂದ್ರಗಳಲ್ಲಿ ನಾಲ್ಕನೇ ತ್ರೈಮಾಸಿಕ ತುರ್ತು ನಿರ್ವಹಣೆ ಕಾಮಗಾರಿಯ ಪ್ರಯುಕ್ತ ಮಾರ್ಚ್ 26ರ ಗುರುವಾರ ವಿದ್ಯುತ್ ವ್ಯತ್ಯಯವಾಗಲಿದೆ.
110ಕೆವಿ ಬೆಟಗೇರಾ ವ್ಯಾಪ್ತಿಯ 1 ಮೋರನಾಳ ಐ.ಪಿ, ಎಫ್-2 ಬೋಚನಹಳ್ಳಿ ಐ.ಪಿ, ಎಫ್-3 ಹನಕುಂಟಿ ಐ.ಪಿ, ಎಫ್-5 ತಿಗರಿ ಐ.ಪಿ, ಎಫ್-7 ನೀರಲಗಿ ಐ.ಪಿ, ಎಫ್-8 ಕಾತರಕಿ ಐ.ಪಿ, ಎಫ್-10 ಮತ್ತೂರ ಐ.ಪಿ, ಎಫ್-11 ಬಿಸರಳ್ಳಿ ಐ.ಪಿ, ಎಫ್-4 ಬೆಟಗೇರಿ ನಗರ ಎನ್.ಜೆ.ವೈ, ಎಫ್-6 ಬೆಟಗೇರಿ ಎನ್.ಜೆ.ವೈ, ಎಫ್-9 ಡಂಬ್ರಳ್ಳಿ ಎನ್.ಜೆ.ವೈ, ಹಾಗೂ 33ಕೆವಿ ಅಳವಂಡಿ ವ್ಯಾಪ್ತಿಯ ಎಫ್-1 ಭೈರಾಪೂರ ಐ.ಪಿ, ಎಫ್-3 ಹಲವಾಗಲಿ ಐ.ಪಿ, ಎಫ್-4 ಬೆಳಗಟ್ಟಿ ಐ.ಪಿ, ಎಫ್-5 ಕವಲೂರ ಐ.ಪಿ, ಎಫ್-2 ಅಳವಂಡಿ ಎನ್.ಜೆ.ವೈ, ಎಫ್-6 ಹೈದರನಗರ ಎನ್.ಜೆ.ವೈ. ಈ ಎಲ್ಲಾ ವ್ಯಾಪ್ತಿಯಲ್ಲಿ ಮಾ. 26ರ ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು.
ಕಾಮಗಾರಿಯು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಂಡಲ್ಲಿ ಯಾವುದೇ ಸಮಯದಲ್ಲೂ ವಿದ್ಯುತ್ ಸರಬರಾಜು ಪುನಃ ಪ್ರಾರಂಭಿಸಲಾಗುವುದು. ಈ ಅವಧಿಯಲ್ಲಿ ಸಾರ್ವಜನಿಕರು ಯಾವುದೇ ವಿಧದ ವಿದ್ಯುತ್ ದುರಸ್ತಿ ಅಥವಾ ಸಂಬಂಧಿತ ಕೆಲಸಗಳನ್ನು ಕೈಗೊಳ್ಳಬಾರದೆಂದು ಸೂಚಿಸಲಾಗಿದೆ. ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್