ಆಧುನಿಕ ಕೀರ್ತನೆಗಳು ಆಧ್ಯಾತ್ಮಿಕತೆಯ ಸ್ವರೂಪದ ಒಳಗಣ್ಣು ; ಕವಿ ಡಾ. ಶರಣಪ್ಪ ಗಬ್ಬೂರು
ಆಧುನಿಕ ಕೀರ್ತನೆಗಳು ಆಧ್ಯಾತ್ಮಿಕತೆಯ ಸ್ವರೂಪದ ಒಳಗಣ್ಣು ; ಕವಿ ಡಾ. ಶರಣಪ್ಪ ಗಬ್ಬೂರು
ಕೋಲಾರ ನಗರದ ಹೊರ ವಲಯದ ಆರ್ ಎಮ್ ಗೋಲ್ಡನ್ ಸಿಟಿಯಲ್ಲಿರುವ ಹನುಮ ಆಶ್ರಯ ಧ್ಯಾನ ಮಂದಿರ ದಲ್ಲಿ ಆತ್ಮಾನಂದ ಹಣತೆಗಳುಕೃತಿಯನ್ನು ಬಿಡುಗಡೆ ಮಾಡಿದರು.


ಕೋಲಾರ, ೨೫ ಮಾರ್ಚ್ (ಹಿ.ಸ):

ಆಂಕರ್ : ಅನುಭವ ಅನುಭಾವವಾದಾಗ ಆಧ್ಯಾತ್ಮಿಕ ಹಾದಿ ಸುಗಮವಾಗುತ್ತದೆ. ಕವಿ ಎಂದರೆ ತನ್ನ ಭಾವನೆಗಳು, ಆಲೋಚನೆಗಳು ಮತ್ತು ಕಲ್ಪನೆಗಳು ಎಂದು ಕವಿ ಡಾ. ಶರಣಪ್ಪ ಗಬ್ಬೂರು ಅಭಿಪ್ರಾಯಪಟ್ಟರು.

ನಗರದ ಹೊರವಲಯದ ಆರ್ ಎಮ್ ಗೋಲ್ಡನ್ ಸಿಟಿಯಲ್ಲಿರುವ ಹನುಮ ಆಶ್ರಯ ಧ್ಯಾನ ಮಂದಿರ ದಲ್ಲಿ ದಾಸ ಸಾಹಿತ್ಯ ಪರಿಷತ್ತು, ಮಾನವ ಅಭಿವೃದ್ಧಿ ಯೋಗ ಟ್ರಸ್ಟ್, ಅಭಿರಾಂ ಸೇವಾ ಟ್ರಸ್ಟ್, ಚುಟುಕು ಸಾಹಿತ್ಯ ಪರಿಷತ್ತು, ಸ್ವರ್ಣಭೂಮಿ ಫೌಂಡೇಶನ್, ಅಖಿಲ ಭಾರತ ಸಾಹಿತ್ಯ ಪರಿಷದ್ ನ ಸಂಯುಕ್ತಾಶ್ರಯದಲ್ಲಿ ನಡೆದ ಡಾ. ಪೋಸ್ಟ್ ನಾರಾಯಣಸ್ವಾಮಿ ರವರ ಆಧುನಿಕ ಸಂಕೀರ್ತನೆಗಳನ್ನೊಳಗೊಂಡ ಆತ್ಮಾನಂದ ಹಣತೆಗಳುಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಈ ಹಾದಿಯಲ್ಲಿ ಪೋಸ್ಟ್ ನಾರಾಯಣಸ್ವಾಮಿ ರವರು ಒಳಗೊಳ್ಳುತ್ತಲೇ ಬಂದಿದ್ದಾರೆ. ಜೀವನದ ಪ್ರತಿಯೊಂದು ಹಂತದಲ್ಲಿ ಅವರ ವಿಚಾರ ಶಕ್ತಿ ಬದಲಾಗುತ್ತಲೇ ಅನುಭಾವಿಯಾಗಿ ಕೀರ್ತನೆಗಳನ್ನು, ತತ್ವಪದಗಳಗಳನ್ನು ಬರೆಯುವುದಕ್ಕೆ ಅವರಿಗೆ ಸುಗಮವಾಗಿದೆ ಎಂದರು.

ಅಖಿಲ ಭಾರತ ಸಾಹಿತ್ಯ ಪರಿಷದ್ ಜಿಲ್ಲಾಧ್ಯಕ್ಷ ಟಿ ಸುಬ್ಬರಾಮಯ್ಯ ಮಾತಾನಾಡಿ ನಾರಾಯಣಸ್ವಾಮಿ ರವರು ಮೂಲತಃ ಭಜನೆಪದಗಳನ್ನು ಹಾಡುತ್ತಾ ಹಾಡುತ್ತಾ ಜೊತೆಗೆ ಬರೆಯುವುದನ್ನು ರೂಢಿಸಿಕೊಂಡು ಇಂದು ಅನೇಕ ಸಂಕೀರ್ತನೆಗಳನ್ನು, ತತ್ವ ಪದಗಳನ್ನು ರಚಿಸುತ್ತಾ ಕೈವಾರ ತಾತಯ್ಯನವರನ್ನು ನೆನಪಿಸುತ್ತಾ ಅವರ ಹಾದಿಯಲ್ಲಿ ಸಾಗುತ್ತಿರುವುದು ಹೆಮ್ಮೆ ಎನ್ನಿಸುತ್ತದೆ ಎಂದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ ನಾರಾಯಣಪ್ಪ ಮಾತಾನಾಡಿ ಕವಿ ಪೋಸ್ಟ್ ನಾರಾಯಣಸ್ವಾಮಿ ಅವರು ಹತ್ತು- ಹದಿನೈದು ವರ್ಷಗಳಿಂದ ಜಿಲ್ಲೆಗೆ ಹಾಡುಗಾರರಾಗಿ, ಕವಿಯಾಗಿ, ಪರಿಚಿತರಾಗಿ ಇಂದಿಗೂ ಬರೆಯುತ್ತಲೇ ಇದ್ದಾರೆ.ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ, ಇವರು ಸಾಮಾನ್ಯರಿಗೆ ತಲುಪುವ ಶೈಲಿಯಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ ಎಂದರು.

ಕೃತಿಕಾರ ಪೋಸ್ಟ್ ನಾರಾಯಣಸ್ವಾಮಿ ಮಾತಾನಾಡಿ ಇದುವರೆಗೂ ೧೨ ಕೃತಿಗಳನ್ನು ರಚಿಸಿ ಕೋಲಾರ ಜಿಲ್ಲೆಗೆ ಹೆಮ್ಮೆ ತರುವಂತ ಕಾರ್ಯದಲ್ಲಿ ತೊಡಗಿದ್ದೇನೆ. ನನ್ನ ದೈವೀ ಸ್ವರೂಪದ ಎಸ್ ಎಸ್ ವೈ ಗೂರೂಜಿಯಾದ ಪ್ರಭಾಕರ್ ಗುರೂಜಿಯವರ ಆಶೀರ್ವಾದದಿಂದ ಇವೆಲ್ಲವುಗಳನ್ನು ರಚಿಸಲು ಸಾಧ್ಯವಾಯಿತು. ಮನುಷ್ಯನ ಮೌಲ್ಯಗಳನ್ನು ಒಳಗೊಂಡ ಪ್ರಮುಖವಾದ ಕೃತಿಯಾಗಿದ್ದು ಇದರಲ್ಲಿ ಸರಳವಾದ ರೀತಿಯಲ್ಲಿ ಜನಸಾಮಾನ್ಯರಿಗೆ ನಿಟುಕುವ ನಿಟ್ಟಿನಲ್ಲಿ, ವಚನ, ಕೀರ್ತನ, ಭಜನೆಗಳಂತೆ ಸರಳವಾಗಿ ಬರೆದು ಈ ನಾಡಿಗೆ ಅರ್ಪಿಸುತ್ತಿದ್ದೇನೆ. ಜಿಲ್ಲೆಯ ಎಲ್ಲಾ ಕಲಾವಿದರು ನನ್ನ ಕೀರ್ತನೆಗಳನ್ನು ರಾಗ ಸಂಯೋಜನೆ ಮಾಡಿ ಹಾಡುತ್ತಿರುವುದು ಮನಸ್ಸಿಗೆ ಸಂತೋಷ ತರುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕೋಲಾರ ಸಿಂಹ ಪತ್ರಿಕೆಯ ವೆಂಕಟೇಶಪ್ಪ, ಅಪ್ಪಿ ನಾರಾಯಣಸ್ವಾಮಿ, ನಿವೃತ್ತ ಎಸ್ ಐ ರಮೇಶ್, ಎಸ್ ವೆಂಕಟರಮಣಪ್ಪ, ವೇಮಗಲ್ ಮೂರ್ತಿ, ಗೋಪಾಲಕೃಷ್ಣ, ಭಂಗವಾದಿ ಲಕ್ಷ್ಮೀದೇವಿ ಮುಂತಾದವರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande