
ಬಾಗಲಕೋಟೆ, 25 ಮಾರ್ಚ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ನಗರ ಆರಾಧ್ಯ ದೈವ ಮೋಟಗಿ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ನಂತರ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಹಾಗೂ ಮುಖಂಡರು ಪಾದಯಾತ್ರೆ ನಡೆಸಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ನಗರದ 5ನೇ, 6ನೇ ಹಾಗೂ 9ನೇ ವಾರ್ಡ್ಗಳಲ್ಲಿ ಪಾದಯಾತ್ರೆ ನಡೆಸಿದ ಬಿಜೆಪಿ ಕಾರ್ಯಕರ್ತರು ಮತದಾರರನ್ನು ಭೇಟಿ ಮಾಡಿ ಪಕ್ಷದ ಅಭ್ಯರ್ಥಿ ಪರವಾಗಿ ಬೆಂಬಲ ಕೋರಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ದೇವರಾಜ ಪಾಟೀಲ, ರಾಜು ರೇವಣಕರ್, ಕುಮಾರ ಯಳ್ಳಿಗುತ್ತಿ, ಶಿವಾನಂದ ಟವಳಿ, ಯಲ್ಲಪ್ಪ ಬೇಂಡಿಗೇರಿ, ದುಂಡಪ್ಪ ಏಳಮ್ಮಿ, ಮುತ್ತು ಗರಸಂಗಿ, ಮಾನೇಶ ಅಂಬಿಗೇರ, ನಾಗರಾಜ ಕಟ್ಟಿಮನಿ, ಶಂಕರ ಸಗರ, ಪ್ರೇಮಾ ಅಂಬಿಗೇರ, ಶಶಿಕಲಾ ಮಜ್ಜಗಿ, ರೇಖಾ ಕಲಬುರಗಿ, ಸ್ಮೀತಾ ಪವಾರ, ಭಾಗ್ಯಶ್ರೀ ಹಂಡಿ, ಶಾಂತಪ್ಪ ಬಾಡದ, ಶಂಕರ ಗಲಗ, ಶರಣಪ್ಪ ಕೆರೂರ, ಪರಶುರಾಮ ದಾವಣಗೇರಿ, ಸುರೇಶ ಮಜ್ಜಗಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande