
ವಿಜಯಪುರ, 23 ಮಾರ್ಚ್ (ಹಿ.ಸ.)
ಆ್ಯಂಕರ್ : ಆದ್ಯ ವಚನಕಾರ ಪರಮ ಪೂಜ್ಯ ದೇವರ (ಜೇಡರ) ದಾಸಿಮಯ್ಯ ಅವರ ಜಯಂತಿಯ ಅಂಗವಾಗಿ ಅವರಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿ ನಾಡಿನ ಜನತೆಗೆ ಶುಭಾಶಯಗಳನ್ನು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಕೋರಿದರು.
ದಾಸಿಮಯ್ಯ ಅವರ ವಚನಗಳಲ್ಲಿ ಆಧ್ಯಾತ್ಮ, ನೈಜ ಭಕ್ತಿ, ಕಾಯಕದ ಮಹತ್ವ ಹಾಗೂ ಮಾನವೀಯ ಮೌಲ್ಯಗಳು ಪ್ರತಿಫಲಿಸುತ್ತವೆ.
ಅವರ ಉಪದೇಶಗಳು ಸಾರ್ಥಕ ಬದುಕಿನ ದಾರಿ ದೀಪಗಳಾಗಿ ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande