ಉರ್ದು ಪತ್ರಿಕೋದ್ಯಮ ಕುರಿತು ರಾಜ್ಯಮಟ್ಟದ ಕಾರ್ಯಾಗಾರ
ಬೆಂಗಳೂರು, 21 ಮಾರ್ಚ್ (ಹಿ.ಸ.): ಆ್ಯಂಕರ್: ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ‘ಉರ್ದು ಪತ್ರಿಕೋದ್ಯಮ– ಪರಂಪರೆ, ಪ್ರಸ್ತುತ ಪರಿಸ್ಥಿತಿ ಮತ್ತು ಅವಕಾಶಗಳು’ ವಿಷಯದ ಕುರಿತು ರಾಜ್ಯಮಟ್ಟದ ಕಾರ್ಯಾಗಾರವನ್ನು ಇದೇ ಮಾರ್ಚ್ 25ರಂದು ಆಯೋಜಿಸಲಾಗಿದೆ. ಬೆಂಗಳೂರು ನಗರದ ಕೆಎಂಡಿಸಿ ಭವನ ಸಭಾಂಗಣದಲ್ಲಿ ಈ ಕ
Workshop


ಬೆಂಗಳೂರು, 21 ಮಾರ್ಚ್ (ಹಿ.ಸ.):

ಆ್ಯಂಕರ್:

ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ‘ಉರ್ದು ಪತ್ರಿಕೋದ್ಯಮ– ಪರಂಪರೆ, ಪ್ರಸ್ತುತ ಪರಿಸ್ಥಿತಿ ಮತ್ತು ಅವಕಾಶಗಳು’ ವಿಷಯದ ಕುರಿತು ರಾಜ್ಯಮಟ್ಟದ ಕಾರ್ಯಾಗಾರವನ್ನು ಇದೇ ಮಾರ್ಚ್ 25ರಂದು ಆಯೋಜಿಸಲಾಗಿದೆ.

ಬೆಂಗಳೂರು ನಗರದ ಕೆಎಂಡಿಸಿ ಭವನ ಸಭಾಂಗಣದಲ್ಲಿ ಈ ಕಾರ್ಯಾಗಾರ ನಡೆಯಲಿದ್ದು, ಉರ್ದು ಪತ್ರಿಕೋದ್ಯಮದ ಇತಿಹಾಸ, ಇಂದಿನ ಸ್ಥಿತಿ ಹಾಗೂ ಭವಿಷ್ಯದ ಅವಕಾಶಗಳ ಕುರಿತು ಚರ್ಚೆ ನಡೆಯಲಿದೆ.

ಕಾರ್ಯಾಗಾರದಲ್ಲಿ ಉರ್ದು ಭಾಷಾ ತಜ್ಞರು, ಪತ್ರಕರ್ತರು ಹಾಗೂ ಸಂಶೋಧಕರು ಭಾಗವಹಿಸುವ ನಿರೀಕ್ಷೆಯಿದ್ದು, ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಾದ ಮಾರ್ಗಸೂಚಿ ಮತ್ತು ಆಲೋಚನೆಗಳನ್ನು ರೂಪಿಸುವ ಉದ್ದೇಶ ಹೊಂದಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande