ವಿಜಯಪುರದಲ್ಲಿ ಬೇಗಂ ತಲಾಬ್ ಸಮೀಪ ‘ವಾಟರ್ ಪಾರ್ಕ್’ ಲೋಕಾರ್ಪಣೆ
ವಿಜಯಪುರ, 21 ಮಾರ್ಚ್ (ಹಿ.ಸ.) ಆ್ಯಂಕರ್ : ವಿಜಯಪುರ ನಗರದ ಬೇಗಂ ತಲಾಬ್ ಕೆರೆ ಸಮೀಪ ನಿರ್ಮಿಸಲಾದ ಸುಂದರ ವಾಟರ್ ಪಾರ್ಕ್ ಅನ್ನು ಇಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಲೋಕಾರ್ಪಣೆ ಮಾಡಿದರು. ಮಾಜಿ ಮೇಯರ್ ಸರ್ಜಾದಿ ಪೀರ್ ಮುಶರೀಫ್ ಅವರಿಂದ ನಿರ್ಮಿಸಲಾದ ಈ ವಾಟರ್ ಪಾರ್ಕ್ ಅನ್ನು
Mb Patil


Watre


ವಿಜಯಪುರ, 21 ಮಾರ್ಚ್ (ಹಿ.ಸ.)

ಆ್ಯಂಕರ್ : ವಿಜಯಪುರ ನಗರದ ಬೇಗಂ ತಲಾಬ್ ಕೆರೆ ಸಮೀಪ ನಿರ್ಮಿಸಲಾದ ಸುಂದರ ವಾಟರ್ ಪಾರ್ಕ್ ಅನ್ನು ಇಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಲೋಕಾರ್ಪಣೆ ಮಾಡಿದರು.

ಮಾಜಿ ಮೇಯರ್ ಸರ್ಜಾದಿ ಪೀರ್ ಮುಶರೀಫ್ ಅವರಿಂದ ನಿರ್ಮಿಸಲಾದ ಈ ವಾಟರ್ ಪಾರ್ಕ್ ಅನ್ನು ಉದ್ಘಾಟಿಸಿ, ಅವರಿಗೂ ಹಾಗೂ ಅವರ ತಂಡಕ್ಕೂ ಅಭಿನಂದನೆಗಳನ್ನು ತಿಳಿಸಿದರು.

ಈ ವಾಟರ್ ಪಾರ್ಕ್ನಲ್ಲಿ ವಿವಿಧ ರೀತಿಯ ಜಲಕ್ರೀಡೆ ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದು, ಕುಟುಂಬ ಸಮೇತ ಎಲ್ಲರೂ ಭೇಟಿ ನೀಡಿ ಮನರಂಜನೆ ಪಡೆಯಲು ಅನುಕೂಲವಾಗಲಿದೆ.

ವಿಶೇಷವಾಗಿ ಬೇಸಿಗೆಯ ಬಿಸಿಲಿನ ಸಮಯದಲ್ಲಿ ಮಕ್ಕಳಿಗೆ ಆಟವಾಡಲು ಮತ್ತು ಸಮಯ ಕಳೆಯಲು ಇದು ಉತ್ತಮ ಸ್ಥಳವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ನಗರದ ಜನರಿಗೆ ವಿಶ್ರಾಂತಿ ಹಾಗೂ ಮನರಂಜನೆಗಾಗಿ ಇಂತಹ ಸೌಲಭ್ಯಗಳು ಅಗತ್ಯವಾಗಿದ್ದು, ವಾಟರ್ ಪಾರ್ಕ್ ಸ್ಥಾಪನೆಯಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande