
ಬೆಂಗಳೂರು, 21 ಮಾರ್ಚ್ (ಹಿ.ಸ.):
ಆ್ಯಂಕರ್:
ಅರಣ್ಯವು ಜೀವಸಂಕುಲದ ಉಳಿವು ಮತ್ತು ವಿಕಸನಕ್ಕೆ ಆಧಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಶ್ವ ಅರಣ್ಯ ದಿನಾಚರಣೆ ಅಂಗವಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಕಾಡಿದ್ದರೆ ಮಾತ್ರವೇ ಉಸಿರಾಡಲು ಗಾಳಿ, ಉಣ್ಣಲು ಅನ್ನ, ಕುಡಿಯಲು ನೀರು ಎಲ್ಲವೂ ಲಭ್ಯ. ನಾವು ನೆಡುವ ಪ್ರತಿ ಗಿಡ, ಸಸ್ಯಗಳಿಗೆ ಎರೆಯುವ ನೀರು ನಮ್ಮ ಭವಿಷ್ಯದ ಹೂಡಿಕೆ.
ಗಿಡ - ಮರಗಳನ್ನು ಬೆಳೆಸುವ, ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಮೂಲಕ ನಮ್ಮ ಮೇಲಿರುವ ಪ್ರಕೃತಿಯ ಋಣವನ್ನು ತೀರಿಸೋಣ. ನಾವು ಬದುಕೋಣ, ಮುಂದಿನ ತಲೆಮಾರಿಗೂ ಸ್ವಸ್ಥ - ಸುಂದರ ಪರಿಸರವನ್ನು ಕೊಡುಗೆಯಾಗಿ ಬಿಟ್ಟುಹೋಗೋಣ.
ವಿಶ್ವ ಅರಣ್ಯ ದಿನವು ಮೂಡಿಸಿರುವ ಈ ಕಾಳಜಿಯು ನಮ್ಮ ನಿತ್ಯ ಬದುಕಿನ ಭಾಗವಾಗಲಿ.
ಹಸಿರಾಗಲಿ ಧರೆ, ಹಸನಾಗಲಿ ಬದುಕು ಎಂದಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa