ಗೋಲ್ಡ್ ಮೆಡಲ್ ಸಮೇತ ರಾಜ್ಯಕ್ಕೆ ಪ್ರಥಮ ರ್ಯಾಂಕ್: ಸಹನಾ ಕಾರ್ಕಳರಿಗೆ ಭವ್ಯ ಸನ್ಮಾನ
ಗದಗ, 21 ಮಾರ್ಚ್ (ಹಿ.ಸ.): ಆ್ಯಂಕರ್: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಹನಾ ಎ. ಕಾರ್ಕಳ ಅವರು ಎಲ್ ಎಲ್ ಎಂ ಪದವಿಯಲ್ಲಿ ಗೋಲ್ಡ್ ಮೆಡಲ್ ಸಮೇತ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿ ಗದಗ ಜಿಲ್ಲೆಯ ಹೆಮ್ಮೆ ಹೆಚ್ಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಉತ್ತರ ರಾಷ್ಟ್ರೀಯ ಸ್
Honour


ಗದಗ, 21 ಮಾರ್ಚ್ (ಹಿ.ಸ.):

ಆ್ಯಂಕರ್: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಹನಾ ಎ. ಕಾರ್ಕಳ ಅವರು ಎಲ್ ಎಲ್ ಎಂ ಪದವಿಯಲ್ಲಿ ಗೋಲ್ಡ್ ಮೆಡಲ್ ಸಮೇತ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿ ಗದಗ ಜಿಲ್ಲೆಯ ಹೆಮ್ಮೆ ಹೆಚ್ಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಉತ್ತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ವೇದಿಕೆ ವತಿಯಿಂದ ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

ಗದಗ ನಗರದಲ್ಲಿರುವ ಸಹನಾ ಕಾರ್ಕಳ ಅವರ ನಿವಾಸಕ್ಕೆ ಸಾಮರಸ್ಯ ವೇದಿಕೆಯ ಪದಾಧಿಕಾರಿಗಳು ಭೇಟಿ ನೀಡಿ, ಸಾಧಕಿಯ ಸಾಧನೆಯನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಪುಷ್ಪಗುಚ್ಛ ನೀಡಿ ಸನ್ಮಾನಿಸಿ, ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳತ್ತ ಮುನ್ನಡೆಯಲು ಶುಭ ಹಾರೈಸಿದರು. ಸಹನಾ ಅವರ ಈ ಸಾಧನೆ ಗದಗ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಪರಿಣಮಿಸಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಡಿಎಸ್ ಟಿಸಿ ಕಾಲೇಜಿನ ಪ್ರಾಚಾರ್ಯರು ಹಾಗೂ ಸಂಘದ ಪ್ರಮುಖರಾದ ಮಾರುತಿ ಕಟ್ಟಿಮನಿ ಅವರು, ಶ್ರಮ, ಸಂಕಲ್ಪ ಮತ್ತು ನಿರಂತರ ಅಧ್ಯಯನದಿಂದ ಯಾವುದೇ ಗುರಿಯನ್ನು ಸಾಧಿಸಬಹುದು ಎಂಬುದಕ್ಕೆ ಸಹನಾ ಕಾರ್ಕಳ ಉದಾಹರಣೆಯಾಗಿದ್ದಾರೆ ಎಂದು ಹೇಳಿದರು.

ಉತ್ತಮ ಸಂಸ್ಕಾರ, ಕುಟುಂಬದ ಬೆಂಬಲ ಮತ್ತು ಶಿಕ್ಷಕರ ಮಾರ್ಗದರ್ಶನ ದೊರೆತರೆ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲೂ ಸಾಧನೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು. “ಸಾಧನೆ ಯಾರೊಬ್ಬರ ಸ್ವತ್ತಲ್ಲ. ಅದನ್ನು ಸಾಧಿಸಲು ಛಲ, ಪರಿಶ್ರಮ ಮತ್ತು ಧೈರ್ಯ ಅಗತ್ಯ. ಸವಾಲುಗಳನ್ನು ಎದುರಿಸುವ ಮನೋಬಲ ಇದ್ದರೆ ಅವುಗಳನ್ನು ಸಾಧನೆಯ ಮೆಟ್ಟಿಲುಗಳನ್ನಾಗಿ ರೂಪಿಸಬಹುದು. ಸಹನಾ ಕಾರ್ಕಳ ಅವರ ಸಾಧನೆ ಇದೇ ಸಂದೇಶವನ್ನು ನೀಡುತ್ತದೆ” ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಾಮರಸ್ಯ ವೇದಿಕೆಯ ಪದಾಧಿಕಾರಿಗಳಾದ ಡಾ. ಉಮೇಶ ಹಾದಿ, ಡಾ. ಪ್ರಕಾಶ ಹೊಸಮನಿ, ರವಿಕಾಂತ ಅಂಗಡಿ, ಪ್ರೊ. ಹನುಮಂತ ಕಾಳೆ, ಪ್ರೊ. ಶಶಿಧರ ಕುರಿ, ಡಾ. ಅನಂತ ಎಸ್. ಕಾರ್ಕಳ ಹಾಗೂ ಶ್ರೀಮತಿ ಮಂಗಳಾ ಕಾರ್ಕಳ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಹನಾ ಕಾರ್ಕಳ ಅವರು ತಮ್ಮ ಸಾಧನೆ ಕುರಿತು ಮಾತನಾಡಿ, ಕುಟುಂಬದ ಬೆಂಬಲ, ಗುರುಗಳ ಮಾರ್ಗದರ್ಶನ ಮತ್ತು ನಿರಂತರ ಅಧ್ಯಯನವೇ ಈ ಸಾಧನೆಗೆ ಕಾರಣ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡುವ ಗುರಿ ಹೊಂದಿದ್ದಾಗಿ ಅವರು ಹೇಳಿದರು.

ಈ ಸನ್ಮಾನ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಉತ್ಸಾಹ ಮೂಡಿಸಿದ್ದು, ಉನ್ನತ ಶಿಕ್ಷಣದತ್ತ ಹೆಚ್ಚಿನ ಆಸಕ್ತಿ ತರುವಲ್ಲಿ ಸಹಾಯಕವಾಗಿದೆ. ಸಹನಾ ಕಾರ್ಕಳ ಅವರ ಸಾಧನೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದು, ಪರಿಶ್ರಮ ಮತ್ತು ಸಂಕಲ್ಪದಿಂದ ಯಶಸ್ಸು ಸಾಧ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande