ನ್ಯಾಯಮೂರ್ತಿ ನಾಗಮೋಹನ್ ದಾಸ್ ಒಳಮೀಸಲಾತಿ ವರದಿ ತಿರಸ್ಕರಿಸಲು ಒತ್ತಾಯ
ನ್ಯಾಯಮೂರ್ತಿ ನಾಗಮೋಹನ್ದಾಸ್ ಒಳಮೀಸಲಾತಿ ವರದಿ ತಿರಸ್ಕರಿಸಲು ಒತ್ತಾಯ
ನ್ಯಾಯಮೂರ್ತಿ ನಾಗಮೋಹನ್ದಾಸ್ ಒಳ ಮೀಸಲಾತಿಯನ್ನು ತಿರಸ್ಕರಿಸಲು ಒತ್ತಾಯಿಸಿ ಕೋಲಾರದಲ್ಲಿ ಬಲಗೈ ಸಮುದಾದಯ ಮುಖಂಡರ ಸಭೆ ನಡೆಯಿತು.


ಕೋಲಾರ, ೨೧ ಮಾರ್ಚ್ (ಹಿ.ಸ)

ಆ್ಯಂಕರ್ : ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಮಾ.೨೫ರಂದು ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಸಾವಿರಾರು ಬಲಗೈ ಸಮುದಾಯದವರು ಭಾಗವಹಿಸಬೇಕು ಎಂದು ದಮನಿತರ ಸೇವಾ ಸಮಿತಿ ರಾಜ್ಯ ಅಧ್ಯಕ್ಷ ಮೇಡಿಹಾಳ ಮುನಿಅಂಜಿನಪ್ಪ ಮನವಿ ಮಾಡಿದರು.

ನಗರದ ನಚಿಕೇತನ ನಿಲಯದ ಬುದ್ದ ಮಂದಿರದಲ್ಲಿ ಬಲಗೈ ಜಾತಿ ಸಮುದಾಯವರಿಂದ ವತಿಯಿಂದ ಮಾ.೨೫ ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಸಂಬ0ಧಿಸಿದ0ತೆ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ಅವೈಜ್ಞಾನಿಕ ವರದಿಯನ್ನು ಕೂಡಲೇ ತಿರಸ್ಕರಿಸಬೇಕು ಇಷ್ಟು ದಿವಸ ಹೊಲಯ ಹಾಗೂ ಮಾದಿಗರು ಸಹೋದರರೆಂದು ಭಾವಿಸಿದ್ದೆವು ಆದರೆ ಅವರ ಮನಸ್ಸುಗಳ ಮಧ್ಯೆ ಬೆಂಕಿ ಹಿಡುವ ಕೆಲಸವನ್ನು ಮಾಡಿದ್ದಾರೆ ಒಳಮೀಸಲಾತಿ ಆಯೋಗದ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ದರಕಾಸ್ತು ಸಮಿತಿ ಸದಸ್ಯ ಖಾದ್ರಿಪುರ ಬಾಬು ಮಾತನಾಡಿ ರಾಜ್ಯದಲ್ಲಿ ಸುಮಾರು ೩೦ ಲಕ್ಷ ಇದ್ದ ಬಲಗೈ ಸಮಾಜದ ಜನಸಂಖ್ಯೆಯನ್ನು ೨೪ ಲಕ್ಷಕ್ಕೆ ತಂದಿದ್ದಾರೆ ಒಳಮೀಸಲಾತಿ ಹಂಚಿಕೆ ಮುನ್ನೆಲೆಗೆ ಬಂದ ಮೇಲೆ ಅದು ಸುಳ್ಳೆಂಬುದು ಸಾಬೀತಾಗಿದೆ. ಸಮೀಕ್ಷೆ ಯಲ್ಲಿ ಹೊಲೆಯ ಜನಾಂಗದವರು ಸರಿಯಾಗಿ ಪಾಲ್ಗೊಳ್ಳದೇ ವ್ಯತ್ಯಾಸವಾಗಿದೆ. ಪ್ರಾದೇಶಿಕವಾರು ಭಿನ್ನಭಿನ್ನವಾಗಿ ಜಾತಿಯನ್ನು ನಮೂದಿಸಿ ತೊಂದರೆಗೆ ಸಿಲಿಕಿದ್ದಾರೆ ಇದು ಮಕ್ಕಳ ಭವಿಷ್ಯಕ್ಕೆ ಕಂಟಕವಾಗಿದೆ ಮುಂಬರುವ ಮಾರ್ಚ್ ೨೭ ರ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.

ಡಿಪಿಎಸ್ ಮುನಿರಾಜು, ದಲಿತ ಸೇನೆ ರಾಜ್ಯ ಅಧ್ಯಕ್ಷ ದಲಿತ ನಾರಾಯಣಸ್ವಾಮಿ, ಮತ್ತಿಕುಂಟೆ ಕೃಷ್ಣ, ಕರವೇ ಸೋಮಶೇಖರ್, ಅಪ್ಪಿ ನಾರಾಯಣಸ್ವಾಮಿ, ರಾಜಕುಮಾರ್ ಮಾತನಾಡಿದರು ಮುಖಂಡರಾದ ಚೇತನ್ ಬಾಬು, ನಾರಾಯಣಪ್ಪ, ಶ್ಯಾಮ್, ರತ್ನಮ್ಮ, ರಾಮಪುರ ಮುನಿರಾಜು, ನಾಗನಾಳ ಶಂಕರ್, ಬೊಟ್ಟು ರಾಜಪ್ಪ, ಡಿ.ಎಂ ಮುನಿರಾಜು ಸೇರಿದಂತೆ ಬಲಗೈ ಸಮುದಾಯದ ಹಲವಾರು ಮುಖಂಡರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande