ವೇಮಗಲ್ ಬೆಸ್ಕಾಂ ಕಚೇರಿ ಮೇಲ್ದರ್ಜೆಗೆ-ಉಪ ವಿಭಾಗವಾಗಿ ಪರಿವರ್ತನೆ
ವೇಮಗಲ್ ಬೆಸ್ಕಾಂ ಕಚೇರಿ ಮೇಲ್ದರ್ಜೆಗೆ-ಉಪ ವಿಭಾಗವಾಗಿ ಪರಿವರ್ತನೆ
ಕೋಲಾರ ತಾಲ್ಲೂಕಿನ ವೇಮಗಲ್ಗೆ ಬೆಸ್ಕಾಂ ಕಚೇರಿ


ಕೋಲಾರ, ೨೧ ಮಾರ್ಚ್ (ಹಿ.ಸ):

ಆ್ಯಂಕರ್: ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅವರ ಮನವಿಗೆ ಸ್ಪಂದಿಸಿರುವ ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್, ಬೆಸ್ಕಾಂ ಕೋಲಾರ ಗ್ರಾಮೀಣ ಉಪವಿಭಾಗವನ್ನು ವಿಭಜಿಸಿ ವೇಮಗಲ್ಗೆ ಬೆಸ್ಕಾಂ ಉಪ ವಿಭಾಗವನ್ನು ಮಂಜೂರು ಮಾಡುವ ಮೂಲಕ ಇಲ್ಲಿನ ಕಾರ್ಯಪಾಲನಾ ಘಟಕವನ್ನು ಮೇಲ್ದರ್ಜೆಗೇರಿಸಿ ಆದೇಶಿಸಿದ್ದಾರೆ.

ವೇಮಗಲ್,ನರಸಾಪುರ ಕೈಗಾರಿಕಾ ಪ್ರದೇಶವು ಬೆಳೆಯುತ್ತಿರುವ ಕೈಗಾರಿಕಾ ಸಮೂಹ ಪ್ರದೇಶದಲ್ಲಿ ಕೆಐಡಿಬಿ ಕೈಗಾರಿಕಾ ವಿನ್ಯಾಸ ಸ್ಥಾಪಿಸಿದೆ, ಹಲವಾರು ಜಾಗತೀಕ, ಭಾರತೀಯ ಪ್ರಮುಖ ಉತ್ಪಾದನಾ ಕಂಪನಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು,ಗ್ರಾಹರಿಗೆ ಗುಣಮಟ್ಟದ, ವಿಶ್ವಾಸಾರ್ಹ ವಿದ್ಯುತ್ ಸರಬರಾಜು ಕಾಪಾಡಿಕೊಳ್ಳಲು ಪ್ರತ್ಯೇಕ ಕಾರ್ಯನಿರ್ವಹಣೆಗೆ ಉಪ ವಿಭಾಗದ ಅಗತ್ಯತೆ ಕುರಿತು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸಚಿವ ಜಾರ್ಜ್ ಹಾಗೂ ಬೆಸ್ಕಾಂ ಎಂಡಿ ಶಿವಶಂಕರ್ ಅವರಿಗೆ ಮನವಿ ಮಾಡಿ ಮನವರಿಕೆ ಮಾಡಿಕೊಟ್ಟಿದ್ದರು.

ಈ ಹಿನ್ನಲೆಯಲ್ಲಿ ಸಚಿವರ ಆದೇಶದಂತೆ ಹಾಗೂ ಬೆಸ್ಕಾಂನ ೧೪೦ನೇ ನಿರ್ದೇಶಕ ಮಂಡಳಿ ಸಭೆಯ ನಿರ್ಣಯದಂತೆ ಬೆಸ್ಕಾಂ ಪ್ರಧಾನ ವ್ಯವಸ್ಥಾಪಕ ಡಾ.ಬಿ.ಆರ್.ದಯಾನಂದ್ ಆದೇಶ ಹೊರಡಿಸಿ, ಬೆಸ್ಕಾಂ ಕೋಲಾರ ಗ್ರಾಮೀಣ ಉಪವಿಭಾಗವನ್ನು ವಿಭಜಿಸಿ ವೇಮಗಲ್ ನೂತನ ಉಪವಿಭಾಗವನ್ನು ರಚಿಸಿದ್ದು, ಕಾರ್ಯ ಮತ್ತು ಪಾಲನ ಘಟಕ ಕ್ಯಾಲನೂರು, ನರಸಾಪುರ, ವೇಮಗಲ್ ಈ ಮೂರು ಘಟಕಗಳನ್ನು ಇದರ ವ್ಯಾಪ್ತಿಗೆ ತಂದು ಆದೇಶ ಹೊರಡಿಸಿದ್ದಾರೆ. ಈವರೆಗೂ ಸಹಾಯಕ ಇಂಜಿನಿಯರ್ ಹುದ್ದೆ ಹೊಂದಿದ್ದ ವೇಮಗಲ್ ಇನ್ನು ಮುಂದೆ ತಾಲ್ಲೂಕು ಕೇಂದ್ರದಲ್ಲಿರುವAತೆ ಕಾರ್ಯಪಾಲಕ ಅಭಿಯಂತರರ ಕಚೇರಿಯನ್ನು ಹೊಂದಲಿದ್ದು, ಮೇಲ್ದರ್ಜೆಗೆ ಏರಿಸಲಾಗಿದೆ. ನೂತನವಾಗಿ ರಚಿಸಿರುವ ವೇಮಗಲ್ ಉಪವಿಭಾಗಕ್ಕೆ ವಿವಿಧ ದಜೆಯ ಹುದ್ದೆಗಳ ವಿವರಗಳನ್ನು ಮಂಜೂರಾತಿ, ಸ್ಥಳಾತರಿಸುವ ಕುರಿತು ಮುಂದಿನ ಆದೇಶದಲ್ಲಿ ಪ್ರತ್ಯೇಕವಾಗಿ ತಿಳಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ನೂತನವಾಗಿ ಪ್ರಾರಂಭಿಸಲಾಗಿರುವ ಉಪವಿಭಾಗ ಕಚೇರಿಯ ದೈನಂದಿನ ನಿರ್ವಹಣೆಗಾಗಿ ಕಂಪ್ಯೂಟರ್ ಅಗತ್ಯತೆಯನ್ನು ಪರಿಶೀಲಿಸಿ ಒದಗಿಸುವಲ್ಲಿ ಸೂಕ್ತ ಕ್ರಮವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿರುವ ಅವರು, ೧೫ ದಿನದೊಳಗಾಗಿ ಉಪವಿಭಾಗ ಆರಂಭಿಸಲು ಸೂಚಿಸಲಾಗಿದೆ. ಉಪವಿಭಾಗಕ್ಕೆ ಅಗತ್ಯವಾದ ವಾಹನ ಸೌಲಭ್ಯ ಪಡೆಯಲು ಮತ್ತು ಸೂಕ್ತ ಕಟ್ಟಡ ವ್ಯವಸ್ಥೆಯನ್ನು ಒದಗಿಸಲು ಸಂಬಂಧಿಸಿದ ವೃತ್ತದ ಅಧೀಕ್ಷಕ ಇಂಜಿನಿಯರ್ ಕ್ರಮವಹಿಸಲು ಸೂಚಿಸಿದ್ದಾರೆ.ಹೊಸದಾಗಿ ರಚಿಸಲಾಗಿರುವ ಉಪ ವಿಭಾಗಗದ ಭೌಗೋಳಿಕ ವ್ಯಾಪ್ತಿಗೆ ಒಳಪಡುವ ಪ್ರದೇಶ, ಫೀಡರ್ಗಳು, ಪರಿವರ್ತಕಗಳು ಹಾಗೂ ಇತರೆ ವಿವಿರಗಳನ್ನೊಳಗೊಂಡ ಪ್ರತ್ಯೇಕ ಆದೇಶವನ್ನು ಸಂಬ0ಧಿಸಿದ ವಲಯದ ಮುಖ್ಯ ಇಂಜಿನಿಯರ್ ಹೊರಡಿಸುವರು ಎಂದು ತಿಳಿಸಿದ್ದಾರೆ.

ತಮ್ಮ ಮನವಿಗೆ ಸ್ಪಂದಿಸಿ ವೇಮಗಲ್ನ ಬೆಸ್ಕಾಂ ಸಹಾಯಕ ಇಂಜಿನಯರ್ ಕಚೇರಿಯನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಯಾಗಿ ಮೇಲ್ದರ್ಜೆಗೇರಿಸಲು ಸಹಕರಿಸಿದ್ದಕ್ಕಾಗಿ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶೇಷವಾಗಿ ಮಂಜೂರಾತಿಗೆ ಕಾರಣರಾದ ಇಂಧನ ಸಚಿವ ಕೆ.ಜೆ.ಜಾರ್ಜ್, ಬೆಸ್ಕಾಂ ಎಂಡಿ ಶಿವಶಂಕರ್ ಅವರಿಗೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಧನ್ಯವಾದ ಸಲ್ಲಿಸಿದ್ದಾರೆ. ವೇಮಗಲ್,ನರಸಾಪುರ ಕೈಗಾರಿಕಾ ವಲಯಗಳು ಅತಿ ವೇಗವಾಗಿ ಬೆಳೆಯುತ್ತಿದ್ದು, ಜನಸಂದಣಿ, ವಿದ್ಯುತ್ ಅಗತ್ಯತೆಯೂ ಹೆಚ್ಚಿದೆ, ಈ ಹಿನ್ನಲೆಯಲ್ಲಿ ಈ ಭಾಗದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ವೇಮಗಲ್ ಗೆ ಉಪ ವಿಭಾಗ ಮಂಜೂರು ಮಾಡಿದ್ದು, ಇದು ಈ ಭಾಗದ ವಿದ್ಯುತ್ ಸರಬರಾಜಿನಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸುಲಭವಾಗಲಿದೆ ಎಂದು ಸುದರ್ಶನ್ ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande