ಬಿಜೆಪಿಗೆ ಬಸವರಾಜ ಕಟಗೇರಿ, ಅರುಣ ಲೋಕಾಪುರ ಮರಳಿಕೆ: ಡಾ. ವೀರಣ್ಣ ಚರಂತಿಮಠ ಸ್ವಾಗತ
ಬಾಗಲಕೋಟೆ, 21 ಮಾರ್ಚ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಪ್ರಭಾವಿ ಮುಖಂಡರಾದ ಬಸವರಾಜ ಕಟಗೇರಿ ಹಾಗೂ ಅರುಣ ಲೋಕಾಪುರ ಅವರು ಇಂದು ಭಾರತೀಯ ಜನತಾ ಪಕ್ಷಕ್ಕೆ ಮರಳಿ ಸೇರ್ಪಡೆಗೊಂಡರು. ಪಕ್ಷದ ಹಿರಿಯ ನಾಯಕ ಡಾ. ವೀರಣ
ಬಿಜೆಪ


ಬಾಗಲಕೋಟೆ, 21 ಮಾರ್ಚ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಪ್ರಭಾವಿ ಮುಖಂಡರಾದ ಬಸವರಾಜ ಕಟಗೇರಿ ಹಾಗೂ ಅರುಣ ಲೋಕಾಪುರ ಅವರು ಇಂದು ಭಾರತೀಯ ಜನತಾ ಪಕ್ಷಕ್ಕೆ ಮರಳಿ ಸೇರ್ಪಡೆಗೊಂಡರು.

ಪಕ್ಷದ ಹಿರಿಯ ನಾಯಕ ಡಾ. ವೀರಣ್ಣ ಚರಂತಿಮಠ ಅವರು ಇಬ್ಬರು ಮುಖಂಡರನ್ನು ಆತ್ಮೀಯವಾಗಿ ಪಕ್ಷಕ್ಕೆ ಸ್ವಾಗತಿಸಿ, ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಪಕ್ಷದ ಸಂಘಟನೆ ಮತ್ತಷ್ಟು ಬಲವಾಗುವ ವಿಶ್ವಾಸ ವ್ಯಕ್ತಪಡಿಸಲಾಯಿತು.

ಬಾಗಲಕೋಟೆ ಕ್ಷೇತ್ರದಲ್ಲಿ ಉಪಚುನಾವಣೆಯ ಹಿನ್ನಲೆಯಲ್ಲಿ ವಿವಿಧ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಹೆಚ್ಚಾಗಿದ್ದು, ಪ್ರಮುಖ ಮುಖಂಡರ ಸೇರ್ಪಡೆಗಳಿಂದ ಬಿಜೆಪಿ ಸಂಘಟನೆ ಇನ್ನಷ್ಟು ಬಲಗೊಳ್ಳಲಿದೆ ಎಂದು ನಾಯಕರು ಅಭಿಪ್ರಾಯಪಟ್ಟರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande