ಮಾ.26 ರಂದು ಹನುಮಸಾಗರದಲ್ಲಿ ಅಪ್ರೆಂಟಿಶಿಪ್ ಮೇಳ
ಕೊಪ್ಪಳ, 20 ಮಾರ್ಚ್ (ಹಿ.ಸ.) ಆ್ಯಂಕರ್ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಕಾರದಲ್ಲಿ ಹನುಮಸಾಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಮಾ.26 ರಂದು ಬೆಳಿಗ್ಗೆ 9.30 ಗಂಟೆಗೆ ಪ್ರತಿಷ್ಠಿತ ವಿವಿಧ ಕಂಪನಿಗಳ ವತಿಯಿಂದ ಅಪ್ರೆಂಟಿಶಿಪ್ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ 18 ರಿ
ಮಾ.26 ರಂದು ಹನುಮಸಾಗರದಲ್ಲಿ ಅಪ್ರೆಂಟಿಶಿಪ್ ಮೇಳ


ಕೊಪ್ಪಳ, 20 ಮಾರ್ಚ್ (ಹಿ.ಸ.)

ಆ್ಯಂಕರ್ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಕಾರದಲ್ಲಿ ಹನುಮಸಾಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಮಾ.26 ರಂದು ಬೆಳಿಗ್ಗೆ 9.30 ಗಂಟೆಗೆ ಪ್ರತಿಷ್ಠಿತ ವಿವಿಧ ಕಂಪನಿಗಳ ವತಿಯಿಂದ ಅಪ್ರೆಂಟಿಶಿಪ್ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಆಸಕ್ತ 18 ರಿಂದ 24 ವರ್ಷ ವಯೋಮಿತಿ ಹೊಂದಿರುವ ಐ.ಟಿ.ಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಬಯೋಡೆಟಾ, ಎಸ್.ಎಸ್.ಎಲ್.ಸಿ ಮೂಲ ಅಂಕಪಟ್ಟಿ, ಐಟಿಐ ಮೂಲ ಅಂಕಪಟ್ಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಇತ್ತೀಚಿನ 4 ಭಾವಚಿತ್ರಗಳೊಂದಿಗೆ ಮೇಳದಲ್ಲಿ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9591533759, 9663236441, 9945310045 ಗೆ ಸಂಪರ್ಕಿಸಬಹುದು ಎಂದು ಹನುಮಸಾಗರ ಐಟಿಐ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande