ಕೊಪ್ಪಳ ವಿವಿಯ ಅಂತರ್ ಕಾಲೇಜು ಖೋಖೋ ಚಾಂಪಿಯನ್
ಕೊಪ್ಪಳ , 18 ಮಾರ್ಚ್ (ಹಿ.ಸ.): ಆ್ಯಂಕರ್ : ಕೊಪ್ಪಳ ವಿಶ್ವವಿದ್ಯಾಲಯ ಆಯೋಜಿಸಿದ್ದ ಕೊಪ್ಪಳದ ಮಹಿಳೆಯರ ಖೋಖೋ ಪಂದ್ಯಾಟವು ಎಸ್.ಕೆ.ಎನ್.ಜಿಸರಕಾರಿ ಪ್ರಥಮ ದರ್ಜೆ ಕಾಲೇಜು, ಗಂಗಾವತಿಯಲ್ಲಿ ನಡೆಯಿತು. ಸದರಿ ಸ್ಪರ್ಧೆಯಲ್ಲಿ ಕೊಪ್ಪಳದ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಖೋಖೋ
ಕೊಪ್ಪಳ ವಿವಿಯ ಅಂತರ್ ಕಾಲೇಜು ಖೋಖೋ ಚಾಂಪಿಯನ್


ಕೊಪ್ಪಳ , 18 ಮಾರ್ಚ್ (ಹಿ.ಸ.):

ಆ್ಯಂಕರ್ : ಕೊಪ್ಪಳ ವಿಶ್ವವಿದ್ಯಾಲಯ ಆಯೋಜಿಸಿದ್ದ ಕೊಪ್ಪಳದ ಮಹಿಳೆಯರ ಖೋಖೋ ಪಂದ್ಯಾಟವು ಎಸ್.ಕೆ.ಎನ್.ಜಿಸರಕಾರಿ ಪ್ರಥಮ ದರ್ಜೆ ಕಾಲೇಜು, ಗಂಗಾವತಿಯಲ್ಲಿ ನಡೆಯಿತು.

ಸದರಿ ಸ್ಪರ್ಧೆಯಲ್ಲಿ ಕೊಪ್ಪಳದ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಖೋಖೋ ತಂಡ ಪ್ರಥಮ ಸ್ಥಾನ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸದರಿ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಆರ್ ಮರೇಗೌಡ ಮತ್ತು ಶ್ರೀ ಗವಿಸಿದ್ಧೇಶ್ವರ ಟ್ರಸ್ಟಿನ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರಾದ ಡಾ. ಚನ್ನಬಸವ, ಕಾಲೇಜಿನ ದೈಹಿಕ ನಿರ್ದೇಶಕರಾದ ಶ್ರೀ ವಿನೋದ ಸಿ. ಮುದಿನ ಬಸನಗೌಡರ ಹಾಗೂ ಕಾಲೇಜಿನ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande