ಬಳ್ಳಾರಿ - ವಿಜಯನಗರಕ್ಕೆ ತಲಾ 100 ಕೆಂಪು, 20 ಎಸಿ ಬಸ್ಗಳನ್ನು ನೀಡಿರಿ : ವೈ.ಎಂ. ಸತೀಶ್
ಬೆಂಗಳೂರು, 18 ಮಾರ್ಚ್ (ಹಿ.ಸ.) ಆ್ಯಂಕರ್: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ತಲಾ 100 ಕೆಂಪು ಬಸ್ಗಳನ್ನು ಮತ್ತು ತಲಾ 20 ಎಸಿ ಬಸ್ಗಳನ್ನು ನೀಡಬೇಕು ಎಂದು ಬಳ್ಳಾರಿ - ವಿಜಯನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು, ಶಾಸಕರಾದ ವೈ.ಎಂ. ಸತೀಶ್ ಅವರು ಕೋರಿದ್ದಾರೆ. ಸಾರಿಗೆ ಮತ್ತು ಮುಜರಾಯಿ ಸಚಿವರ
ಬಳ್ಳಾರಿ - ವಿಜಯನಗರಕ್ಕೆ ತಲಾ 100 ಕೆಂಪು, 20 ಎಸಿ ಬಸ್ಗಳನ್ನು ನೀಡಿರಿ : ವೈ.ಎಂ. ಸತೀಶ್


ಬೆಂಗಳೂರು, 18 ಮಾರ್ಚ್ (ಹಿ.ಸ.)

ಆ್ಯಂಕರ್: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ತಲಾ 100 ಕೆಂಪು ಬಸ್ಗಳನ್ನು ಮತ್ತು ತಲಾ 20 ಎಸಿ ಬಸ್ಗಳನ್ನು ನೀಡಬೇಕು ಎಂದು ಬಳ್ಳಾರಿ - ವಿಜಯನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು, ಶಾಸಕರಾದ ವೈ.ಎಂ. ಸತೀಶ್ ಅವರು ಕೋರಿದ್ದಾರೆ.

ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ವೈ.ಎಂ. ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿ, ಕಲ್ಯಾಣ ಕರ್ನಾಟಕಕ್ಕೆ ಮಾರ್ಚ್ 2026ರ ನಂತರ 56 ವಿವಿಧ ಪ್ರೀಮಿಯಂ ಬಸ್ಗಳ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ 2025-26 ರಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 400 ಬಸ್ಗಳನ್ನು ಖರೀದಿಸ ಕ್ರಮ ಕೈಗೊಳ್ಳಲಾಗಿದೆ ಎಂದರು.

ಆಗ, ವೈ.ಎಂ. ಸತೀಶ್ ಅವರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪಟ್ಟಣ - ನಗರ ಪ್ರದೇಶಗಳಿಗೆ ನಿತ್ಯ ಬಂದು ಹೋಗಲು ಸಾಕಷ್ಟು ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಕಾಳಜಿಗಾಗಿ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಅನುಕೂಲಕ್ಕಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗೆ ತಲಾ 100 ಕೆಂಪು ಬಸ್ಗಳನ್ನು ನೀಡಿದಲ್ಲಿ ಸಾಕಷ್ಟು ಅನುಕೂಲ ಆಗಲಿದೆ. ಇಲ್ಲವಾದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ನಿತ್ಯ ಬಸ್ಗಳಲ್ಲಿ ಪ್ರಯಾಣಿಸುವುದು ಕಷ್ಟಕರವಾಗುತ್ತಿದೆ ಎಂದು ವಿವರಿಸಿದರು.

ಆಗ, ಸಚಿವರಾದ ರಾಮಲಿಂಗಾರೆಡ್ಡಿ ಅವರು, 2023-24ರ ಪೂರ್ವದ ನಾಲ್ಕು ವರ್ಷ ಸರ್ಕಾರ ಹೊಸ ಬಸ್ಗಳನ್ನು ಖರೀದಿಸಿಲ್ಲ. 2016 ರಲ್ಲಿ ನಾನು ಸಾರಿಗೆ ಇಲಾಖೆಯ ಸಚಿವನಾಗಿದ್ದಾಗ ನಡೆದಿದ್ದ ನೇಮಕಾತಿ, ಈಗ ನಡೆದಿದೆ. ಸತತವಾಗಿ ನಾಲ್ಕು ವರ್ಷಗಳ ಕಾಲ ಬಸ್ಗಳ ಖರೀದಿ ಮಾಡದ ಕಾರಣ ಬಸ್ಗಳ ಸ್ಥಿತಿ ಹದಗೆಟ್ಟಿದೆ. ಮುಂದಿನ ದಿನಗಳಲ್ಲಿ ಖರೀದಿ ಮಾಡುತ್ತಿರುವ ಬಸ್ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಳ್ಳಾರಿ - ವಿಜಯನಗರ ಜಿಲ್ಲೆಗಳಿಗೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಅಲ್ಲದೇ, ಕೇಂದ್ರ ಸರ್ಕಾರದ ಷರತ್ತು - ನಿಯಮಳಿಗೆ ಬದ್ಧವಾಗಿ 15 ವರ್ಷ ಹಳೆಯ ಬಸ್ಗಳನ್ನು ರೀಫರ್ಬಿಷ್ಮೆಂಟ್ ಮಾಡಿ - ತಾಂತ್ರಿಕವಾಗಿ ನವೀಕರಿಸಿ ರಸ್ತೆಯಲ್ಲಿ ಓಡಾಡಿಸಲಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ 26 ಸಾವಿರ ಬಸ್ಗಳು ಸಂಚರಿಸುತ್ತಿವೆ. ಬಳ್ಳಾರಿ - ವಿಜಯನಗರ ಜಿಲ್ಲೆಯ ಬಸ್ಗಳ ತಾಂತ್ರಿಕ ವ್ಯವಸ್ಥೆಗೆ ಸರಿಪಡಿಸಲು ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande