ತಾಯಂದಿರರಲ್ಲಿ ಕುಟುಂಬ ಪ್ರಜ್ಞೆಯನ್ನು ಗಟ್ಟಿಗೊಳಿಸಲು ಉಡಿ ತುಂಬುವ ಕಾರ್ಯ : ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು
ಹೊಸಪೇಟೆ, 27 ಫೆಬ್ರವರಿ (ಹಿ.ಸ.) : ಆ್ಯಂಕರ್ : ತಾಯಂದಿರಲ್ಲಿ ಕುಟುಂಬದ ಪ್ರಜ್ಞೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಧಾರ್ಮಿಕ ಜವಾಬ್ದಾರಿಯನ್ನು ಕೊಟ್ಟೂರು ಸ್ವಾಮಿ ಮಠವು ನಿರ್ವಹಿಸುತ್ತಿದೆ ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ. ಶ
ತಾಯಂದಿರರಲ್ಲಿ ಕುಟುಂಬ ಪ್ರಜ್ಞೆಯನ್ನು ಗಟ್ಟಿಗೊಳಿಸಲು ಉಡಿ ತುಂಬುವ ಕಾರ್ಯ


ತಾಯಂದಿರರಲ್ಲಿ ಕುಟುಂಬ ಪ್ರಜ್ಞೆಯನ್ನು ಗಟ್ಟಿಗೊಳಿಸಲು ಉಡಿ ತುಂಬುವ ಕಾರ್ಯ


ತಾಯಂದಿರರಲ್ಲಿ ಕುಟುಂಬ ಪ್ರಜ್ಞೆಯನ್ನು ಗಟ್ಟಿಗೊಳಿಸಲು ಉಡಿ ತುಂಬುವ ಕಾರ್ಯ


ಹೊಸಪೇಟೆ, 27 ಫೆಬ್ರವರಿ (ಹಿ.ಸ.) :

ಆ್ಯಂಕರ್ : ತಾಯಂದಿರಲ್ಲಿ ಕುಟುಂಬದ ಪ್ರಜ್ಞೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಧಾರ್ಮಿಕ ಜವಾಬ್ದಾರಿಯನ್ನು ಕೊಟ್ಟೂರು ಸ್ವಾಮಿ ಮಠವು ನಿರ್ವಹಿಸುತ್ತಿದೆ ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಶ್ರೀ ಜಗದ್ಗುರು ಕೊಟ್ಟೂರೇಶ್ವರ ಜಾತ್ರ ಮಹೋತ್ಸವ -26 ರ ಸರ್ವಧರ್ಮ ಸಮನ್ವಯ ಮಹಾ ರಥೋತ್ಸವದಲ್ಲಿ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳ ನಾಲ್ಕನೇ ಪುಣ್ಯಸ್ಮರಣೋತ್ಸವ ಹಾಗೂ 1111 ಮುತ್ತೈದೆಯರಿಗೆ ಉಡಿ ತುಂಬುವ ಸಮಾರಂಭ ನೇತೃತ್ವವಹಿಸಿ ಶುಕ್ರವಾರ ಅವರು ಆಶೀರ್ವಾದ ಮಾಡಿದರು.

ತಾಯಂದಿರರು ಗಟ್ಟಿಯಾಗಿ ಇರಬೇಕು. ತಾಯಂದಿರರು ಕುಟುಂಬದ ಶಕ್ತಿಯೂ ಹೌದು, ದೈವ ಸ್ವರೂಪಿಗಳೂ ಹೌದು. ತಾಯಿ ಕುಟುಂಬಕ್ಕೆ ದೀಪದಂತೆ ಬೆಳಕು ನೀಡುತ್ತಾರೆ. ಈ ನಿಟ್ಟಿನಲ್ಲಿ ಉಡಿ ತುಂಬುವ ಕಾರ್ಯಕ್ರಮ ಸಾಕಷ್ಟು ಮಹತ್ವವನ್ನು ಮತ್ತು ಸಾರ್ಥಕತೆಯನ್ನು ಪಡೆದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮರಿಯಮ್ಮನಹಳ್ಳಿಯ ಶ್ರೀ ಗುರುಪಾದದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ಪ್ರತಿಯೊಂದು ದೈವ ಸಂಕಲ್ಪದಂತೆ ನಡೆಯುತ್ತದೆ. ಡಾ. ಸಂಗನಬಸವ ಮಹಾಸ್ವಾಮಿಗಳು ಸಮಾಜದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಆದರ್ಶದ ಬದುಕು ನಡೆಸಿ,ಎಲ್ಲಿಯೂ ಇಲ್ಲದ ಸರ್ವಧರ್ಮದ ಸಮನ್ವಯ ರಥೋತ್ಸವವನ್ನು ಪ್ರಾರಂಭಿಸಿದರು. ಗುರು - ವಿರಕ್ತರನ್ನು ಒಗ್ಗೂಡಿಸುವ ಮೂಲಕ ಸಮಾಜವನ್ನು ಒಂದಾಗಿಸಿದರು ಎಂದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದ, ಕೊಟ್ಟೂರು ಸ್ವಾಮಿ ಮಠಕ್ಕೆ ಸಾಮಾಜಿಕ ಕಳಕಳಿ ಇದೆ. ಉಡಿ ತುಂಬುವುದು ಸಮಾಜವನ್ನು ಒಗ್ಗೂಡಿಸುವ ಕೆಲಸ ನಡೆದಿದೆ ಎಂದರು.

ಗದಗ ಡೋಣಿಯ ಶಶಿಧರ ಶಾಸ್ತ್ರಿಗಳು ಹಿರೇಮಠ ಅವರು ಮುತ್ತೈದೆಯರಿಗೆ ಉಡಿ ತುಂಬುವುದರ ಮಹತ್ವದ ಕುರಿತು ವಿವರಿಸಿದರು.

ಹೊಸಪೇಟೆ ತಹಸೀಲ್ದಾರರಾದ ಶ್ರೀಮತಿ ಶೃತಿ ಮಳ್ಳಪ್ಪಗೌಡರ, ಹೊಸಪೇಟೆ ಅಕ್ಕನ ಬಳಗದ ಗೌರಮ್ಮ, ಮುಖಂಡರಾದ ಗೊಗ್ಗ ಚನ್ನಬಸರಾಜು, ಸಾಲಿ ಸಿದ್ದಯ್ಯ ಸ್ವಾಮಿ, ಕೋರಿಶೆಟ್ಟಿ ಲಿಂಗಪ್ಪ, ಕೆ. ರವಿಶಂಕರ, ತಾರಿಹಳ್ಳಿ ಮಂಜುನಾಥ, ಮಂಜುನಾಥ, ಎಚ್.ವಿ. ಶರಣಸ್ವಾಮಿ, ಸಾಲಿ ಬಸವರಾಜ್ ಹಾಗೂ ವಿವಿಧ ಮಠಾಧಿಪತಿಗಳು, ಗಣ್ಯರು ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ 1111 ಮುತ್ತೈದೆಯರಿಗೆ ಉಡಿ ತುಂಬಿ ಶುಭ ಹಾರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಉಮಾ ಮಹೇಶ್ವರ ರೋಟರಿ ಸಂಸ್ಥೆಯ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು.

ಎಚ್.ಎಂ. ವಿದ್ಯಾವತಿ ಮತ್ತು ಸಿ.ಎಸ್. ಶರಣಯ್ಯ ಅವರು ಕಾರ್ಯಕ್ರಮ ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande