



ಹೊಸಪೇಟೆ, 27 ಫೆಬ್ರವರಿ (ಹಿ.ಸ.)
ಆ್ಯಂಕರ್ : ಶ್ರೀ ಜಗದ್ಗುರು ಕೊಟ್ಟೂರೇಶ್ವರ ಜಾತ್ರ ಮಹೋತ್ಸವ -26 ರ ಸರ್ವಧರ್ಮ ಸಮನ್ವಯ ಮಹಾ ರಥೋತ್ಸವದ ಅಂಗವಾಗಿ ಫೆಬ್ರವರಿ 25, 26 ಮತ್ತು 27 ರಂದು ಮಠದಲ್ಲಿ ಯುವ ಕಲಾವಿದರ ರಾಜ್ಯಮಟ್ಟದ ಚಿತ್ರಕಲಾ ಶಿಬಿರ ಯಶಸ್ವಿಯಾಗಿ ನೆರವೇರಿತು.
ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕವಿತಾ ಎಸ್. ಮನ್ನಿಕೇರಿ ಅವರು ಬಣ್ಣ ಹಚ್ಚುವ ಮೂಲಕ ಚಾಲನೆ ನೀಡಿದ್ದರು.
ಕಲಾವಿಸ್ತಾರ ತಂಡದ ನೇತಾರ ಬಾಣದ ದೀಪಕ್ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯಮಟ್ಟದ ಈ ಶಿಬಿರದಲ್ಲಿ, ವಿಶ್ವೇಶ್ವರ ಪಟಗಾರ, ಯಮನೂರ್ ಸಾಬ್, ಈಶ್ವರಯ್ಯ ಮಠಪತಿ, ಕೆ.ಟಿ. ಶಿವಪ್ರಸಾದ್, ಪ್ರವೀಣ್ ಮನೋಹರ್ ಗಾಯಕರ, ಪ್ರೀತಂ
ಖಾನ್ ಪೇಟ್, ಪವನ್ ಕೆ. ಅಂಕಲಕೋಟಿ, ವಿನ್ಯಾಸ್ ಕಾಟೇನಹಳ್ಳಿ, ಪರಶುರಾಮ, ಕಲ್ಮೇಶ್ ಬಡಿಗೇರ್ ಅವರು ಶ್ರೀಮಠದ ಇತಿಹಾಸ ಮತ್ತು ಶ್ರೀಗಳ ಕುರಿತು ನೈಜ ಚಿತ್ರಗಳು ರಚಿಸಿ, ಕಲಾಸಕ್ತರ ಮನಸೂರೆಗೊಂಡರು.
ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು, ಕಲಾವಿದರು ಏಕಾಗ್ರತೆ ಸೃಜನಶೀಲತೆ ಮತ್ತು ಕೌಶಲ್ಯವನ್ನು ಪ್ರದರ್ಶನ ಮಾಡಿ, ಕಲಾಸಕ್ತರನ್ನು ತಮ್ಮತ್ತ ಸೆಳೆದಿರುವುದು ಶ್ಲಾಘನೀಯ ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್