

ಬಳ್ಳಾರಿ, 27 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರ 51 ನೇ ಜನ್ಮದಿನವನ್ನು ನಗರದ ಕಂಟೋನ್ಮೆಂಟ್ ಪ್ರದೇಶದ ಶಾಂತಿಧಾಮದಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ) ಬಣ ಜಿಲ್ಲಾ ಘಟಕದಿಂದ ಹುಟ್ಟು ಹಬ್ಬವನ್ನು ಸಿಹಿ ಮತ್ತು ಹಣ್ಣು ವಿತರಿಸಿ ಆಚರಿಸಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರು ಹಾಗು ಮಾಜಿ ಜಿಪಂ ಸದಸ್ಯ ಎ. ಮಾನಯ್ಯ ಅವರು ಮಾತನಾಡಿ, ಸಚಿವ ಸಂತೋಷ್ ಲಾಡ್ ಅವರು ರಾಜ್ಯದಲ್ಲಿ ಬಡವರ ಪರ ಕಾಳಜಿ ವಹಿಸಿ, ಅಧಿಕಾರ ಇದ್ದರೂ ಇಲ್ಲದಿದ್ದರೂ ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಬಡವರ ಪರವಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಬಡವರ ಸೇವೆ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಗಾದೆಪ್ಪ ಕಾಂಗ್ರೆಸ್ ಮುಖಂಡ ಕೆ.ಎಸ್.ಎಲ್. ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಸರಗು ನಾಗರಾಜ, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಸಿ. ನರಸಪ್ಪ ದಲಿತ ಮುಖಂಡರುಗಳಾದ ಎಪಿಎಂಸಿ ಮಾಜಿ ಅಧ್ಯಕ್ಷ ಸರಗು ನಾಗರಾಜ್, ವಿಜುಕುಮಾರ್ ಸಂಗನಕಲ್ಲು, ಕೊಳಗಲ್ಲು ಮಲ್ಲಯ್ಯ, ಹೆಚ್.ಅಂಜನೇಯ, ಬಿ.ರಮೇಶ್, ಟಿ.ಎಂ.ಎರ್ರಿಸ್ವಾಮಿ, ಜಿ.ಪಂಪಾಪತಿ, ಹೆಚ್.ಶಂಕರ್ ಬಾಪೂಜಿ ನಗರ ಗಂಗಾಧರ ವೇಣಿ ವೀರಾಪುರ, ದುರ್ಗಾದಾಸ್ ಡಿ, ಬತ್ರಿ ಮಹೇಶ್, ಭೀಮಾಶಂಕರ್, ಹನುಂಮತ, ರಾಜಣ್ಣ, ತಿರುಮಲ, ಕುಡುತಿನಿ ಹನುಂಮತ, ಗಾದಿಲಿಂಗ ಹರಗಿನದೋಣಿ, ಗಂಗಾಧರ ಚೇಳ್ಳಗುರ್ಕಿ, ಹಲಕುಂದಿ ಶೇಷಪ್ಪ, ಸೋಮಸಮುದ್ರದ ತಿಪ್ಪಯ್ಯ, ಎತ್ತಿನಬೂದಿಹಾಳ್ ಹನುಂಮತ, ಉಪೇಂದ್ರ, ಸುರೇಂದ್ರ ಇಬ್ರಾಹಿಂಪುರ, ಸಿದ್ಧಾರ್ಥ, ಸಾಗರ್, ಮಣಿಕಂಠ, ಪೃಥ್ವಿ, ಬೆಂಜಿ ಸೇರಿದಂತೆ ಮತ್ತಿತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್