
ವಿಜಯಪುರ, 27 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಧಾರವಾಡದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಲ್ ಕುಮಾರಸ್ವಾಮಿ ಬೆಂಬಲ ಸೂಚಿಸಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಪ್ರತಿಭಟನೆ ಮಾಡುವ ಹಕ್ಕು ವಿದ್ಯಾರ್ಥಿಗಳಿಗೆ ಇದೆ. ವಿದ್ಯಾರ್ಥಿಗಳು ಬಡವರು, ಮಧ್ಯಮ ವರ್ಗದವರು ಇದ್ದಾರೆ. ವಯಸ್ಸು ಆದ್ಮೇಲೆ ಸರ್ಕಾರಿ ಉದ್ಯೋಗ ಸಿಗಲ್ಲ. ಆದ್ರೇ, ಸರ್ಕಾರ ಮಾತ್ರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಸಿದ್ದರಾಮಯ್ಯ ಟ್ವಿಟರ್ನಲ್ಲಿ 2.84 ಲಕ್ಷ ಉದ್ಯೋಗ ಖಾಲಿ ಇದಾವೆ ಎಂದಿದ್ದರು, ಯಾವುದೇ ನೊಟಿಫಿಕನ್ಸ್ ಕರೆದಿಲ್ಲ. ಸಮಾವೇಶಗಳಲ್ಲಿ ಕೇವಲ ಗ್ಯಾರಂಟಿ ಜಪ ಮಾಡುತ್ತಾರೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande