ಮಾರ್ಚ್ 11ರಂದು ಎನ್.ಐ.ಇ.ಎಲ್.ಐ.ಟಿ ನೇಮಕಾತಿ ಸಂದರ್ಶನ
ಚಿತ್ರದುರ್ಗ, 27 ಫೆಬ್ರವರಿ (ಹಿ.ಸ.): ಆ್ಯಂಕರ್: ಚಿತ್ರದುರ್ಗ ನಗರದ ಹಳೆ ಬೆಂಗಳೂರು ರಸ್ತೆಯಲ್ಲಿರುವ ಜಿ.ಟಿ.ಟಿ.ಸಿ ಕಟ್ಟಡದಲ್ಲಿರುವ ಎನ್.ಐ.ಇ.ಎಲ್.ಐ.ಟಿ(ನ್ಯಾಷಿನಲ್ ಇನ್ಸಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫರಮೇಷನ್ ಟೆಕ್ನಾಲಜಿ) ಎಕ್ಸ್ಟೆನ್ಶನ್ ಕೇಂದ್ರದಲ್ಲಿ ಇದೇ ಮಾರ್ಚ್ 11ರಂದು ಬೆಳಿ
ಮಾರ್ಚ್ 11ರಂದು ಎನ್.ಐ.ಇ.ಎಲ್.ಐ.ಟಿ ನೇಮಕಾತಿ ಸಂದರ್ಶನ


ಚಿತ್ರದುರ್ಗ, 27 ಫೆಬ್ರವರಿ (ಹಿ.ಸ.):

ಆ್ಯಂಕರ್:

ಚಿತ್ರದುರ್ಗ ನಗರದ ಹಳೆ ಬೆಂಗಳೂರು ರಸ್ತೆಯಲ್ಲಿರುವ ಜಿ.ಟಿ.ಟಿ.ಸಿ ಕಟ್ಟಡದಲ್ಲಿರುವ ಎನ್.ಐ.ಇ.ಎಲ್.ಐ.ಟಿ(ನ್ಯಾಷಿನಲ್ ಇನ್ಸಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫರಮೇಷನ್ ಟೆಕ್ನಾಲಜಿ) ಎಕ್ಸ್ಟೆನ್ಶನ್ ಕೇಂದ್ರದಲ್ಲಿ ಇದೇ ಮಾರ್ಚ್ 11ರಂದು ಬೆಳಿಗ್ಗೆ 09 ಗಂಟೆಗೆ ಒಪ್ಪಂದದ ಆಧಾರದ ಮೇಲೆ ಎರಡು ಬೋಧಕ ಹುದ್ದೆಗಳಿಗೆ ನೇರ ನೇಮಕಾತಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ.

ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ, ಐಟಿ ವಿಷಯದಲ್ಲಿ ಬಿಇ, ಬಿ-ಟೆಕ್, ಸ್ನಾತಕೋತ್ತರ ಪದವಿ, ಎಂ.ಸಿ.ಎ. ಅಥವಾ ಬಿಸಿಎ ಪದವಿಗಳಲ್ಲಿ ವಿದ್ಯಾರ್ಹತೆ ಹೊಂದಿರುವವರು, ಇತ್ತೀಚಿನ ಬಯೋಡೇಟಾ, ವಿದ್ಯಾಭ್ಯಾಸದ ಸ್ವಯಂ-ದೃಢೀಕೃತ ಪ್ರತಿ ಹಾಗೂ ಎಲ್ಲಾ ಮೂಲ ದಾಖಲೆಗಳ ಒಂದು ಸೆಟ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಆಸಕ್ತರು ಆಡಳಿತಾಧಿಕಾರಿ ಡಾ.ರಾಣಾಶರ್ಮಾ ಮೊಬೈಲ್ ಸಂಖ್ಯೆ 9864020005 ಹಾಗೂ 9995427802 ಕರೆ ಮಾಡಬಹುದು. ವೆಬ್ಸೈಟ್ www.nielit.gov.in/calicut ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande