
ಬೆಂಗಳೂರು, 27 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ವಿರುದ್ಧ ಸಂಸದ ತೇಜಸ್ವಿ ಸೂರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿದೇಶಿ ಗುಪ್ತಚರ ಒಳಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವುದರಿಂದ ಹಿಡಿದು ವಿದೇಶಿ ಶಕ್ತಿಗಳೊಂದಿಗೆ ಸಂಪರ್ಕ ಕಾಪಾಡಿಕೊಂಡಿರುವುದು ಹಾಗೂ ತುರ್ತು ಪರಿಸ್ಥಿತಿಯ ಮೂಲಕ ಪ್ರಜಾಪ್ರಭುತ್ವವನ್ನು ಹಿಗ್ಗಾಮುಗ್ಗ ಮಾಡಿದ ಆರೋಪಗಳನ್ನು ಅವರು ಉಲ್ಲೇಖಿಸಿದ್ದಾರೆ.
“ಶ್ರೀಮತಿ ಇಂದಿರಾ ಅವರು ತಮ್ಮ ವಿದೇಶಿ ಸ್ನೇಹಿತರ ನೆರಳಿನಲ್ಲಿ ಭಾರತ ಮೂರನೇ ಜಗತ್ತಿನ ರಾಷ್ಟ್ರವಾಗಿ ಉಳಿಯುವಂತೆ ನೋಡಿಕೊಂಡರು” ಎಂದು ತೇಜಸ್ವಿ ಸೂರ್ಯ ಟೀಕಿಸಿದ್ದಾರೆ.
ಇಂದಿರಾ ಗಾಂಧಿ ತಮ್ಮ ವಿದೇಶಿ ಸ್ನೇಹಿತರಿಗಾಗಿ ದೇಶದ ಸಾರ್ವಭೌಮತ್ವವನ್ನು ಪಣಕ್ಕಿಟ್ಟರು ಎಂಬುದಾಗಿ ಅವರು ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa