
ವಿಜಯಪುರ, 27 ಫೆಬ್ರವರಿ (ಹಿ.ಸ.) :
ಆ್ಯಂಕರ್ : ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದಗಣಿಯ ಮುಖ್ಯದ್ವಾರ ಬಳಿ ಅಪಾಯಕಾರಿ ಸ್ಫೋಟಕಗಳು ಪತ್ತೆಯಾಗಿದ್ದು ಕಾರ್ಮಿಕರು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.
ಸ್ಫೋಟಕ್ಕೆ ಬಳಸುವ 15ಕ್ಕೂ ಹೆಚ್ಚು ಮದ್ದುಗಳ ಕಾಟ್ರಿಜ್ಗಳು ಚಿನ್ನದ ಗಣಿ ಕಂಪನಿ ಗೇಟ್ ಬಳಿ ಮುಖ್ಯ ರಸ್ತೆಯಲ್ಲಿ ಪತ್ತೆಯಾಗಿವೆ. ಸ್ಫೋಟಕ ವಸ್ತುಗಳು ಯಾರಿಗೆ ಸೇರಿದ್ದು ತಿಳಿದು ಬಂದಿಲ್ಲ. ಹಟ್ಟಿ ಚಿನ್ನದ ಗಣಿ ಭದ್ರತಾ ಸಿಬ್ಬಂದಿ, ಅಧಿಕಾರಿಗಳು ಹಾಗೂ ಪೊಲೀಸರು ಈಗ ಅಲರ್ಟ್ ಆಗಿದ್ದಾರೆ. ಸ್ಥಳಕ್ಕೆ ಹಟ್ಟಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಪಲ್ಸರ್ ಬೈಕ್ ನಲ್ಲಿ ಹೊರಟಿದ್ದ ಸವಾರರು ಮದ್ದುಗಳ ಕಾಟ್ರಿಜ್ಗಳನ್ನು ಬೀಳಿಸಿಕೊಂಡು ಹೋಗಿದ್ದಾರೆ ಅಂತ ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಅಪಾಯಕಾರಿ ಸ್ಫೋಟಕಗಳನ್ನ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೇ ಬೈಕ್ನಲ್ಲಿ ಸಾಗಿಸುತ್ತಿದ್ದ ಬಗ್ಗೆ ಅನುಮಾನಗಳು ಮೂಡಿವೆ.
ಭದ್ರತಾ ದೃಷ್ಟಿಯಿಂದ ಜಿಲ್ಲೆಯ ಸೂಕ್ಷ್ಮ ಪ್ರದೇಶವಾದ ಹಟ್ಟಿ ಚಿನ್ನದ ಗಣಿ ದ್ವಾರದ ಬಳಿ ಮದ್ದುಗಳು ಪತ್ತೆಯಾಗಿದ್ದರಿಂದ ಪೊಲೀಸರು ಪರಿಶೀಲನೆ ಚುರುಕುಗೊಳಿಸಿದ್ದಾರೆ.
ಹಟ್ಟಿ ಚಿನ್ನದ ಗಣಿಯಲ್ಲಿ ಚಿನ್ನದ ಗಣಿಗಾರಿಕೆಗೆ ಬಳಸುವ ಮದ್ದು, ಖಾಸಗಿ ಕಲ್ಲು ಕ್ವಾರೆಗಳಲ್ಲಿ ಕಲ್ಲು ಗಣಿಗಾರಿಕೆಗೆ ಬಳಸುವ ಮದ್ದು. ಯಾರು ಎಲ್ಲಿಗೆ ಸಾಗಿಸುತ್ತಿದ್ದರು ಅನ್ನೋ ಬಗ್ಗೆ ತನಿಖೆ ಆರಂಭಗೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande