
ಕೊಪ್ಪಳ, 27 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕೃಷಿ ಇಲಾಖೆ ಹಾಗೂ ಅಲುಮಿನಿ ಅಸೋಶಿಯೆಷನ್-ಕೃಷಿ ವಿಶ್ವ ವಿದ್ಯಾಲಯ, ಹೆಬ್ಬಾಳ, ಬೆಂಗಳೂರು ಇವರ ವತಿಯಿಂದ “ಶ್ರೇಷ್ಠ ಕೃಷಿಕ-ಸಮಗ್ರ ಕೃಷಿ ಪದ್ಧತಿ” ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಧ್ಯಕ್ಷರು, ಪ್ರಶಸ್ತಿ ಹಾಗೂ ಸನ್ಮಾನ ಸಮಿತಿ, ಅಲುಮಿನಿ ಅಸೋಶಿಯೆಷನ್-ಕೃಷಿ ವಿಶ್ವ ವಿದ್ಯಾಲಯ, ಹೆಬ್ಬಾಳ, ಬೆಂಗಳೂರು ಇವರು, ಕರ್ನಾಟಕ ರಾಜ್ಯದಲ್ಲಿ ಸುಸ್ಥಿರ ಕೃಷಿಯ ಬೆಳವಣಿಗಾಗಿ “ಸಮಗ್ರ ಕೃಷಿ ಪದ್ಧತಿ’’ ಯನ್ನು ಉತ್ತೇಜಿಸುವ ಸಲುವಾಗಿ 2025-26ನೇ ಸಾಲಿಗೆ ರೈತರಿಂದ ಅರ್ಜಿಗಳನ್ನು ಆಹ್ವಾನಿಸಿರುತ್ತಾರೆ. ಕೊಪ್ಪಳ ಜಿಲ್ಲೆಯ ಅರ್ಹ ರೈತರು, ಅಲುಮಿನಿ ಅಸೋಶಿಯೆಷನ್-ಕೃಷಿ ವಿಶ್ವ ವಿದ್ಯಾಲಯ, ಹೆಬ್ಬಾಳ, ಬೆಂಗಳೂರು ರವರು ನಿಗದಿಪಡಿಸಿರುವ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಮಾರ್ಚ್ 16ರ ಒಳಗೆ ಸಲ್ಲಿಸಬಹುದಾಗಿದೆ. ಪ್ರಶಸ್ತಿಯ ಮೊತ್ತವು ರೂ. 25,000 ಗಳು ಇರುತ್ತದೆ. ಅರ್ಜಿ ನಮೂನೆಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಂಪರ್ಕಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ: The Secretary, Alumni Association, UAS Convention Centre Hebbal,
Banglore-560024, 560024, ಈ ವಿಳಾಸಕ್ಕೆ ಜಿಲ್ಲೆಯ ಆಸಕ್ತ ರೈತರು ಅರ್ಜಿ ಸಲ್ಲಿಸಬೇಕೆಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್