

ಬಳ್ಳಾರಿ, 27 ಫೆಬ್ರವರಿ (ಹಿ.ಸ.) :
ಆ್ಯಂಕರ್ : ನಗರದ ಹೊರ ವಲಯದಲ್ಲಿ ಇರುವ ಖಾಸಗಿ ಶಾಲೆಯಲ್ಲಿ ಮಾದಕ ಪದಾರ್ಥಗಳ ಸೇವನೆ ಮತ್ತು ಪೂರೈಕೆ ನಡೆಯಿತ್ತಿದೆ ಎಂದು ಆರೋಪಿಸಿ ಎಬಿಬಿಪಿ ಕಾರ್ಯಕರ್ತರು ಶಾಲೆಯಲ್ಲಿ ಗಲಾಟೆ ಮಾಡಿ, ಹೂಕುಂಡಗಳನ್ನು ಧ್ವಂಸ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಸುಮನ್ ಡಿ. ಪನ್ನೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಬಿವಿಪಿಯ 20 ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ ಶಾಲೆಯ ಆವರಣಕ್ಕೆ ಬಂದು, ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಶಾಲೆ ಮತ್ತು ಕಾಲೇಜಿನಲ್ಲಿ ಮಾದಕ ಪದಾರ್ಥಗಳ ಸೇವನೆ ಮತ್ತು ಮಾರಾಟ ನಡೆದಿದ್ದರೂ ಆಡಳಿತ ಮಂಡಳಿ ಕಣ್ಣುಮುಚ್ಚಿ ಕುಳುತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯು ಪ್ರತಿಭಟನಾಕಾರರ ಜೊತೆ ಮಾತನಾಡದ ಕಾರಣ, ಸಂಸ್ಥೆಯಲ್ಲಿ ಪ್ರವೇಶ ಮಾಡಿ, ಹೂ ಕುಂಡಗಳನ್ನು, ಇನ್ನಿತರ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಅಲ್ಲದೇ, ಕಾಲೇಜು ವಿದ್ಯಾರ್ಥಿನಿಯರ ಸ್ಕಟ್9 ವಿನ್ಯಾಸ ಬದಲಾಯಿಸಬೇಕು. ವಿದ್ಯಾರ್ಥಿನಿಯರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಗಲಾಟೆ ಮಾಡಿದ್ದಾರೆ. ಹಾಗೂ ಸಂಸ್ಥೆಯ ಆವರಣದಲ್ಲಿ ಗೋ ಮೂತ್ರವನ್ನು ಸಿಂಪಡನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದಿದ್ದಾರೆ.
ಕಾಂಗ್ರೆಸ್ ಖಂಡನೆ
ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಪರೀಕ್ಷೆಗಳು ನಡೆಯಿತ್ತಿರುವಾಗ ಎಬಿವಿಪಿ ಕಾರ್ಯಕರ್ತರು ಸಾಕ್ಷಿಗಳು ಇಲ್ಲದೇ ಆರೋಪ ಮಾಡಿ, ಗಲಾಟೆ ಮಾಡಿರುವುದು ಖಂಡನೀಯ ಎಂದು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ ಅವರು ಖಂಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್