ನ್ಯಾಯವಾದಿ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ಪ್ರತಿಭಟನೆ
ವಿಜಯಪುರ, 25 ಫೆಬ್ರವರಿ (ಹಿ.ಸ.) : ಆ್ಯಂಕರ್ : ವಿಜಯಪುರ ಬಾರ್ ಅಸೋಸಿಯೇಷನ್ ಸದಸ್ಯ ನ್ಯಾಯವಾದಿ ಎಂ.ಎಂ. ಇಂಡಿಕರ್ ಅವರ ಮೇಲೆ ಫೆ. 24, 2026ರಂದು ರಾತ್ರಿ ಕೊಲೆಗೆ ಯತ್ನಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಗೆ ಸಂಘ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಈ ಘಟನೆಗೆ ವಿರೋಧ ವ್ಯಕ್ತಪಡಿಸಿ ವಿಜಯಪುರ ನ್
ನ್ಯಾಯವಾದಿ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ಪ್ರತಿಭಟನೆ


ವಿಜಯಪುರ, 25 ಫೆಬ್ರವರಿ (ಹಿ.ಸ.) :

ಆ್ಯಂಕರ್ : ವಿಜಯಪುರ ಬಾರ್ ಅಸೋಸಿಯೇಷನ್ ಸದಸ್ಯ ನ್ಯಾಯವಾದಿ ಎಂ.ಎಂ. ಇಂಡಿಕರ್ ಅವರ ಮೇಲೆ ಫೆ. 24, 2026ರಂದು ರಾತ್ರಿ ಕೊಲೆಗೆ ಯತ್ನಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಗೆ ಸಂಘ ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಈ ಘಟನೆಗೆ ವಿರೋಧ ವ್ಯಕ್ತಪಡಿಸಿ ವಿಜಯಪುರ ನ್ಯಾಯವಾದಿಗಳ ಸಂಘವು ನ್ಯಾಯಾಲಯ ಹಾಗೂ ಕಂದಾಯ ಇಲಾಖೆಯ ಎಲ್ಲಾ ನ್ಯಾಯಾಲಯಗಳ ಕಾರ್ಯಚಟುವಟಿಕೆಗಳಿಂದ ದೂರ ಉಳಿದು ವಿಜಯಪುರ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿತು. ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

ಸಂಘದ ಪ್ರಕಟಣೆಯಲ್ಲಿ, ನ್ಯಾಯವಾದಿ ಎಂ.ಎಂ. ಇಂಡಿಕರ್ ಅವರ ಮೇಲೆ ನಡೆದ ಕೊಲೆ ಯತ್ನ ಮತ್ತು ಮಾರಣಾಂತಿಕ ಹಲ್ಲೆಗೆ ಪ್ರಯತ್ನಿಸಿದ ಆರೋಪಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವು ಮಾಡಲಾಗಿದೆ.

ನ್ಯಾಯಾಂಗ ವೃತ್ತಿಯ ಭದ್ರತೆ ಮತ್ತು ಗೌರವ ಕಾಪಾಡಲು ಸಂಬಂಧಪಟ್ಟವರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಂಘವು ಒತ್ತಾಯಿಸಿತು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande