
ಕಲಬುರಗಿ, 25 ಫೆಬ್ರವರಿ (ಹಿ.ಸ.):
ಆ್ಯಂಕರ್:
ಕಲಬುರಗಿ ಹಾಗೂ ನೆರೆಯ ಜಿಲ್ಲೆಗಳ ರೋಗಿಗಳಿಗೆ ಅತ್ಯಾಧುನಿಕ ಮೂಳೆ ಮತ್ತು ಬೆನ್ನುಮೂಳೆ ಚಿಕಿತ್ಸೆಯನ್ನು ಒದಗಿಸುತ್ತಿರುವ ನಾರಾಯಣ ಹೆಲ್ತ್ ಸಿಟಿ ಸಾಧನೆ ಕಳೆದ ಮೂರು ವರ್ಷಗಳಲ್ಲಿ 10,000 ಮೂಳೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಆಸ್ಪತ್ರೆಯ ಆರ್ಥೊಪೆಡಿಕ್ಸ್ ವಿಭಾಗವು ರೋಬೋಟಿಕ್ ನೆರವಿನ ನ್ಯಾವಿಗೇಷನ್, ಸುಧಾರಿತ ಇಮೇಜಿಂಗ್, ನ್ಯೂರೋ ಮಾನಿಟರಿಂಗ್ ಹಾಗೂ 3ಡಿ-ಪ್ರಿಂಟೆಡ್ ಕಸ್ಟಮೈಸ್ ಇಂಪ್ಲಾಂಟ್ ತಂತ್ರಜ್ಞಾನಗಳ ನೆರವಿನಿಂದ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಇಂಪ್ಲಾಂಟ್ ಸಡಿಲಿಕೆ ಹಾಗೂ ಮೆಟಲೋಸಿಸ್ ಸಮಸ್ಯೆಯಿಂದ ಬಳಲುತ್ತಿದ್ದ 70 ವರ್ಷದ ವ್ಯಕ್ತಿಗೆ ಹಂತ ಹಂತವಾಗಿ ಮರು-ಶಸ್ತ್ರಚಿಕಿತ್ಸೆ ನಡೆಸಿ ಕೀಲಿನ ಪುನರ್ನಿರ್ಮಾಣ ಮಾಡಲಾಗಿದೆ.
ಹುಟ್ಟಿನಿಂದಲೂ ತೀವ್ರ ಸ್ಕೋಲಿಯೊಸಿಸ್ ಸಮಸ್ಯೆಯಿಂದ ಬಳಲುತ್ತಿದ್ದ 13 ವರ್ಷದ ಬಾಲಕಿಗೆ ರೋಬೋಟಿಕ್ ತಂತ್ರಜ್ಞಾನದ ಮೂಲಕ ಬೆನ್ನುಮೂಳೆ ತಿದ್ದುಪಡಿ ಶಸ್ತ್ರಚಿಕಿತ್ಸೆ ನಡೆಸಿ, ಶಸ್ತ್ರಚಿಕಿತ್ಸೆಯ ಎರಡನೇ ದಿನವೇ ನಡೆಯುವಂತಾಗಿರುವುದು ಗಮನಾರ್ಹ. ಜೊತೆಗೆ ಅಪರೂಪದ ‘ಈವಿಂಗ್ಸ್ ಸಾರ್ಕೋಮಾ’ ಮೂಳೆ ಕ್ಯಾನ್ಸರ್ ಪ್ರಕರಣದಲ್ಲೂ ಲಿಂಬ್-ಸಾಲ್ವೇಜ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ.
ಈ ಕುರಿತು ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್ಥೊಪೆಡಿಕ್ಸ್ ವಿಭಾಗದ ಹಿರಿಯ ಸಲಹೆಗಾರ ಡಾ. ಸುಮನ್ ಎಂ. ಬೈರೇಗೌಡ, ತಂತ್ರಜ್ಞಾನ ಮತ್ತು ವೈದ್ಯಕೀಯ ಪರಿಣತಿಯ ಸಮನ್ವಯದಿಂದ ಉತ್ತಮ ಫಲಿತಾಂಶ ಸಾಧಿಸಲಾಗುತ್ತಿದೆ ಎಂದರು. ಬೆನ್ನುಮೂಳೆ ತಜ್ಞ ಡಾ. ವಿನು ರಾಜ್ ನಿಖರತೆ ಹಾಗೂ ಸುರಕ್ಷತೆಗೆ ರೋಬೋಟಿಕ್ ತಂತ್ರಜ್ಞಾನ ಮಹತ್ವದ್ದೆಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ನಾರಾಯಣ ಹೆಲ್ತ್ ಸಿಟಿಯ ಆರ್ಥೋಪೆಡಿಕ್ಸ್ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ಸುಮನ್ ಎಂ ಬೈರೇಗೌಡ, ನಾರಾಯಣ ಹೆಲ್ತ್ ಸಿಟಿಯ ಆರ್ಥೋಪೆಡಿಕ್ಸ್ ವಿಭಾಗದ ಬೆನ್ನು ಮೂಳೆಯ ಕನ್ಸಲ್ಟೆಂಟ್ ಡಾ. ವಿನು ರಾಜ್, ನಾರಾಯಣ ಹೆಲ್ತ್ ಸಿಟಿಯ ಆರ್ಥೋಪೆಡಿಕ್ ಸೆಂಟರ್ ನ ವಿಭಾಗದ ಮುಖ್ಯಸ್ಥರು ಡಾ. ಉತ್ಕರ್ಷ್ ಅಗರ್ವಾಲ್, ಮಾರ್ಕೆಟಿಂಗ್ ಮ್ಯಾನೇಜರ್ಗಳಾದ ವಿಶಾಲ್ ಸಿರ್ಸಿ, ಹನುಮಂತೇಗೌಡ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಗೋಪಾಲ್ ಎ ಆರ್ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa