ಕುಸುಮ ಸಂಜೀವಿನಿ ಕಾರ್ಯಕ್ರಮ: ಸಾರ್ಥಕತೆಯ ಭಾವ: ದಿನೇಶ್ ಗುಂಡೂರಾವ್
ಬೆಂಗಳೂರು, 25 ಫೆಬ್ರವರಿ (ಹಿ.ಸ.): ಆ್ಯಂಕರ್: ಬೆಂಗಳೂರಿನ ಯು ಆರ್ ರಾವ್ ಸಭಾಭವನದಲ್ಲಿ ನಡೆದ ಕುಸುಮ ಸಂಜೀವಿನಿ (ಹಿಮೋಫೀಲಿಯಾ) ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಮಾತನಾಡಿದರು. ಹಿಮೋಪಿಲಿಯಾ ರೋಗಕ್ಕೆ ತುತ್ತಾದವರಿಗೆ ಉಚಿತ ಔಷಧ ವ್ಯವಸ್ಥೆ ಮಾಡುವ ತೀ
Dgr


ಬೆಂಗಳೂರು, 25 ಫೆಬ್ರವರಿ (ಹಿ.ಸ.):

ಆ್ಯಂಕರ್:

ಬೆಂಗಳೂರಿನ ಯು ಆರ್ ರಾವ್ ಸಭಾಭವನದಲ್ಲಿ ನಡೆದ ಕುಸುಮ ಸಂಜೀವಿನಿ (ಹಿಮೋಫೀಲಿಯಾ) ಕಾರ್ಯಕ್ರಮದಲ್ಲಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಮಾತನಾಡಿದರು.

ಹಿಮೋಪಿಲಿಯಾ ರೋಗಕ್ಕೆ ತುತ್ತಾದವರಿಗೆ ಉಚಿತ ಔಷಧ ವ್ಯವಸ್ಥೆ ಮಾಡುವ ತೀರ್ಮಾನದಿಂದ ಮನಸ್ಸಿಗೆ ಸಾರ್ಥಕತೆಯ ಭಾವ ಇದೆ. ರಕ್ತ ಹೆಪ್ಪುಗಟ್ಟುವಿಕೆಯ ಅಪರೂಪದ ಈ ರೋಗ ಸಾಮಾನ್ಯವಾಗಿ ಪುರುಷರಲ್ಲಿಯೇ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಮಹಿಳೆಯರಲ್ಲಿ ಪರಿಣಾಮ ಕಡಿಮೆ, ಆದರೆ ಅವರು ವಾಹಕರಾಗುತ್ತಾರೆ (ಮಕ್ಕಳಿಗೆ ಅನುವಂಶೀಯವಾಗಿ ಬರುತ್ತದೆ). ರಾಜ್ಯದಲ್ಲಿ 2600 ರೋಗಿಗಳಿದ್ದಾರೆ. ಎಲ್ಲರಿಗೂ ಸಕಾಲದಲ್ಲಿ ಚಿಕಿತ್ಸೆ ಪಡೆಯಲು ಕಷ್ಟವಾಗುತ್ತಿತ್ತು. ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳು ಸರಿಯಾಗಿ ಓದಲು, ಅಟವಾಡಲು ಸಾಧ್ಯವಾಗದೆ ಸಮಾಜದ ಮುಖ್ಯವಾಹಿನಿಯಿಂದ ವಿಮುಖರಾಗಿದ್ದರು. ಇದಕ್ಕೆ ಶಾಸ್ವತವಾಗಿ ಕಡಿಮೆ ಮಾಡಲು ಚಿಕಿತ್ಸೆ ಇಲ್ಲ. ಈವರೆಗೆ ವಾರಕ್ಕೆ 2-3 ಬಾರಿ ರಕ್ತನಾಳಗಳಿಗೆ ಜೀವನಪರ್ಯಂತ ಇಂಜೆಕ್ಷನ್ ನೀಡಲಾಗುತ್ತಿತ್ತು. ಚಿಕ್ಕಮಕ್ಕಳಲ್ಲಿ ರಕ್ತನಾಳಗಳಿಗೆ ನೀಡುವುದು ಸವಾಲಾಗಿತ್ತು. ಈಗ ವಿಜ್ಞಾನ ಲೋಕದ ಹೊಸ ಆವಿಷ್ಕಾರದ ಪಲವಾಗಿ ಏಕಕ್ಲೋನಲ್ ಪ್ರತಿಕಾಯ

ಲಭ್ಯವಾಗಿದೆ. ಇದನ್ನು ಚರ್ಮದ ಅಡಿಯಲ್ಲಿ ನೀಡಲಾಗುತ್ತಿದ್ದು, ರೋಗಿಗಳಲ್ಲಿ ದೈಹಿಕ ವಿರೂಪಗಳು, ಅಂಗವೈಕಲ್ಯತೆಯನ್ನು ಇದು ತಡೆಯುತ್ತದೆ. ಇದನ್ನು ಮಿರಾಕಲ್ಸ್ ಆಫ್ ಮಾಡರ್ನ್ ಸೈನ್ಸ್ ಎಂದೇ ನಾನು ಹೇಳುತ್ತೇನೆ. ತಿಂಗಳಿಗೆ ಒಂದಿ ಇಂಜೆಕ್ಷನ್ ಪಡೆದು ಜನಸಾಮಾನ್ಯರಂತೆ ಬದುಕು ನಡೆಸಲು ಇದು ಸಹಾಯಕ. ಈಗಾಗಲೇ 200 ರೋಗಿಗಳಿಗೆ ಇದನ್ನು ನೀಡಿ ಪರೀಕ್ಷಿಸಲಾಗಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ರೂ 45,55,55,973 ಗಳನ್ನು ಮಂಜೂರು ಮಾಡಿದ್ದು, ಇದರಲ್ಲಿ ರೂ 17 ಕೋಟಿಯನ್ನು ಹೊಸ ಔಷಧಿಗಾಗಿ ಬಳಸುತ್ತಿದ್ದೇವೆ. ಪ್ರತಿ ರೋಗಿಗೆ ಒಂದು ವರ್ಷಕ್ಕೆ ಸುಮಾರು ರೂ 5 ಲಕ್ಷ ವೆಚ್ಚಮಾಡಲಾಗುತ್ತದೆ.

ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಅನುಕೂಲಕ್ಕಾಗಿ 108 ಆಂಬುಲನ್ಸ್ ಅನ್ನು ಸಹ ಉಚಿತವಾಗಿ ಒದಗಿಸಲಾಗುತ್ತದೆ. ಹೊಸ ಔಷಧ ಎಮಿಝಮಾಬ್ (ರೋಶ್ ಫಾರ್ಮಾ ಇಂಡಿಯಾ) ಮತ್ತು ಅಂಬುಲನ್ಸ್ ಸೇವೆಯನ್ನು ಉಚಿತವಾಗಿ ನೀಡುವುದರೊಂದಿಗೆ ಹಿಮೋಫಿಲಿಯಾ ರೋಗಿಗಳಿಗೆ ಸಾಮಾಜಿಕ ಬದುಕನ್ನು, ಗುಣಮಟ್ಟದ ಜೀವನ ನಡೆಸಲು ಸಹಕಾರಿಯಾಗುತ್ತದೆ.

ಕಾರ್ಯಕ್ರಮದಲ್ಲಿ ರಾಜ್‌ವಿಂದರ್ (ರಾಜಿ) ಮೆಹ್ವಾನ್, ಎಂಡಿ ಮತ್ತು ಸಿಇಒ, ರೋಶ್ ಫಾರ್ಮಾ ಇಂಡಿಯಾ, ಪ್ರಮರೂಪ್ ಅಳ್ವಾ ಹಿಮೋಪಿಲಿಯಾ ಸೋಸೈಟಿ ಇಂಡಿಯಾ ಅಧ್ಯಕ್ಷರು ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande