ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಕಾಮಗಾರಿ ಮುಂದುವರಿಕೆ
ನ್ಯಾಯಾಲಯದ ತಡೆಯಾಜ್ಞೆ ದಿಕ್ಕರಿಸಿ ಕಾಮಗಾರಿ ಮುಂದುವರಿಕೆ
ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಕೋಲಾರ ತಾಲ್ಲೂಕಿನ ಕೆಂದಟ್ಟಿ ಗ್ರಾಮದಲ್ಲಿ ಅಕ್ರಮವಾಗಿ ಕಾಮಗಾರಿ ನಡೆಯುತ್ತಿದೆ.


ಕೋಲಾರ, ೨೫ ಫೆಬ್ರವರಿ (ಹಿ.ಸ) :

ಆ್ಯಂಕರ್ : ನ್ಯಾಯಾಲಯದ ತಡೆಯಾಜ್ಞೆ ನಡುವೆಯೂ ಬೇರೊಂದು ಖಾತೆ ಸಂಖ್ಯೆಯ ಜಮೀನು ಮಾಲೀಕ ಮತ್ತೋಂದು ಜಮೀನಿನ ಚೆಕ್ ಬಂದಿ ಬದಲಿಸಿ ಮನೆ ಕಟ್ಟಲು ಮುಂದಾಗಿದ್ದು ಈ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಸ್ಥಳೀಯ ಪಂಚಾಯ್ತಿಗೂ ಮಾಹಿತಿ ನೀಡಲಾಗಿದೆ ಆದರೆ ಯಾರೂ ಸ್ಪಂಧಿಸುತ್ತಿಲ್ಲ ಎಂದು ತಮಗಾಗಿರೋ ಅನ್ಯಾಯಕ್ಕೆ ನ್ಯಾಯ ಒದಗಿಸಿ ರಕ್ಷಣೆ ನೀಡುವಂತೆ ಮಾಧ್ಯಮಗಳ ಮುಂದೆ ಖಾತೆದಾರ ಸೈಯದ್ ಅಳಲು ತೋಡಿಕೊಂಡಿದ್ದಾನೆ.

ಕೋಲಾರ ತಾಲ್ಲೂಕಿನ ಕೆಂದಟ್ಟಿ ಗ್ರಾಮದ ಖಾತೆ ಸಂಖ್ಯೆ ೫/೪ರಲ್ಲಿ ೩೦*೪೦ ಜಾಗ ಮೃತ ನೂರುಲ್ಲಾ ಎಂಬುವವರದ್ದಾಗಿದ್ದು ಪಂಚಾಯ್ತಿಯಲ್ಲಿ ಎಲ್ಲಾ ರೀತಿಯ ದಾಖಲೆಗಳನ್ನು ಹೊಂದಿದ್ದಾರೆ ಪ್ರಸ್ತುತ ಅವರ ಮಗ ಸೈಯದ್ ತಮ್ಮ ಜಾಗದಲ್ಲಿ ನಡೆಯುತ್ತಿರುವ ಕಾಮಗಾರಿ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲಾಗಿದೆ. ಆದರೆ ಖಾತೆ ಸಂಖ್ಯೆ ೩/೩ರ ಜಾಗದ ಮಾಲೀಕ ಜೋಹಾರ್ ತಾಜ್ ರ ತಮ್ಮಂದಿರು ದೌರ್ಜನ್ಯದಿಂದ ಮೃತ ನೂರುಲ್ಲಾ ರವರ ಜಾಗವನ್ನು ಸ್ವಚ್ಚಗೊಳಿಸಿ ಕಟ್ಟಡ ಕಾಮಗಾರಿ ಪ್ರಾರಂಭಿಸಲು ಮುಂದಾಗಿದ್ದಾರೆ.

ಈ ಬಗ್ಗೆ ನ್ಯಾಯಾಲಯದ ತಡೆಯಾಜ್ಞೆ ತಂದಿರುವ ಸೈಯದ್ ವಿರುದ್ಧ ಜೋಹಾರ್ ತಾಜ್ ತಮ್ಮಂದಿರಾದ ಆರೀಫ್ ಮತ್ತು ಜಾವೀದ್ ಕೊಲೆ ಬೆದರಿಕೆ ಹಾಗೂ ದೌರ್ಜನ್ಯ ನಡೆಸಿ ಸ್ಥಳಕ್ಕೆ ಬಾರದಂತೆ ಎಚ್ಚರಿಕೆ ನೀಡಿದ್ದಾರೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆಯಲ್ಲಿ ಕಳೆದ ವಾರದ ಹಿಂದೆ ಸೈಯದ್ ದೂರು ನೀಡಿದ್ದು ಸ್ಥಳಕ್ಕೆ ಬೇಟಿ ನೀಡಿದ ಪೊಲೀಸರು ನಾಮಕಾವಸ್ತೆಗೆ ಎಚ್ಚರಿಕೆ ನೀಡಿ ವಾಪಸ್ ಬಂದಿದ್ದಾರೆ. ಆದರೆ ಜೋಹಾರ್ ತಾಜ್ ತಮ್ಮಂದಿರು ನೇರವಾಗಿ ಸೈಯದ್ಗೆ ಧಮ್ಕಿ ಹಾಕಿ ಸ್ಥಳದಲ್ಲಿ ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಿದ್ದಾರೆ.

ತಮ್ಮ ತಾತನವರ ಜಾಗದಲ್ಲಿ ಬೇರೆಯವರು ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. ಈ ಬಗ್ಗೆ ಪಂಚಾಯ್ತಿ ಹಾಗೂ ಪೊಲೀಸರಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ರಾತ್ರೋರಾತ್ರಿ ಕಾಮಗಾರಿ ನಡೆಸುತ್ತಿದ್ದಾರೆ. ಪ್ರಶ್ನಿಸಲು ಹೋದಲ್ಲಿ ಹಲ್ಲೆಗೆ ಮುಂದಾಗುತ್ತಿದ್ದು ತಮಗೆ ರಕ್ಷಣೆ ಹಾಗೂ ನ್ಯಾಯ ಒದಗಿಸಬೇಕೆಂದು ಸೈಯದ್ ಮನವಿ ಮಾಡಿದ್ದಾರೆ.

ಚಿತ್ರ : ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಕೋಲಾರ ತಾಲ್ಲೂಕಿನ ಕೆಂದಟ್ಟಿ ಗ್ರಾಮದಲ್ಲಿ ಅಕ್ರಮವಾಗಿ ಕಾಮಗಾರಿ ನಡೆಯುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande