ಜನಸೇವಾ ವಿದ್ಯಾಕೇಂದ್ರ ಶಾಲೆ : ಮಾ.8 ರಂದು ಪ್ರವೇಶ ಪರೀಕ್ಷೆ
ಕೊಪ್ಪಳ, 25 ಫೆಬ್ರವರಿ (ಹಿ.ಸ.) : ಆ್ಯಂಕರ್ : ಜನಸೇವಾ ವಿದ್ಯಾಕೇಂದ್ರ ಚೆನ್ನೇನಹಳ್ಳಿ ಶ್ರೀ ರಾಮಕೃಷ್ಣ ಮಾದರಿ ಶಾಲೆಯಲ್ಲಿ 5 ನೇ ತರಗತಿ ಕನ್ನಡ ಮಾಧ್ಯಮ ಮತ್ತು 8 ನೇ ತರಗತಿ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಿಗೆ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಯನ್ನು ಮಾರ್ಚ್ 8 ರಂದು ನಡೆಸಲಾಗುವುದು. 5 ನೇ ತರಗ
ಜನಸೇವಾ ವಿದ್ಯಾಕೇಂದ್ರ ಶಾಲೆ : ಮಾ.8 ರಂದು ಪ್ರವೇಶ ಪರೀಕ್ಷೆ


ಕೊಪ್ಪಳ, 25 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಜನಸೇವಾ ವಿದ್ಯಾಕೇಂದ್ರ ಚೆನ್ನೇನಹಳ್ಳಿ ಶ್ರೀ ರಾಮಕೃಷ್ಣ ಮಾದರಿ ಶಾಲೆಯಲ್ಲಿ 5 ನೇ ತರಗತಿ ಕನ್ನಡ ಮಾಧ್ಯಮ ಮತ್ತು 8 ನೇ ತರಗತಿ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಿಗೆ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಯನ್ನು ಮಾರ್ಚ್ 8 ರಂದು ನಡೆಸಲಾಗುವುದು.

5 ನೇ ತರಗತಿ ಪರೀಕ್ಷೆಗೆ ಡೈಸ್ ಕೋಡ್: 29200100303 ಹಾಗೂ 8 ನೇ ತರಗತಿ ಪರೀಕ್ಷೆಗೆ ಡೈಸ್ ಕೋಡ್: 29200129902 ಇದ್ದು, ಪ್ರವೇಶ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮಾರ್ಚ್ 6 ರೊಳಗೆ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಸಲ್ಲಿಸಲು ಸೂಚಿಸಿದೆ.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಮತ್ತು ಆಯಾ ತಾಲೂಕಿನ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ/ಯಲಬುರ್ಗಾ/ಗಂಗಾವತಿ/ಕುಷ್ಟಗಿ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande