ವಿದ್ಯಾವಂತರು ಸಮಾಜಕ್ಕೆ ಸೇವೆ ಸಲ್ಲಿಸಬೇಕು : ಸಂಸದ ಈ. ತುಕಾರಾಂ
ಬಳ್ಳಾರಿ, 25 ಫೆಬ್ರವರಿ (ಹಿ.ಸ.) : ಆ್ಯಂಕರ್ : ವಿದ್ಯೆ ಯಾರೊಬ್ಬರ ಆಸ್ತಿ ಅಲ್ಲ, ವಿದ್ಯಾವಂತರು ಸಮಾಜಕ್ಕೆ ಆಸ್ತಿಯಾಗಿ ಸೇವೆ ಸಲ್ಲಿಸಬೇಕು ಎಂದು ಸಂಸದರಾದ ಈ. ತುಕಾರಾಂ ಅವರು ತಿಳಿಸಿದ್ದಾರೆ. ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶುದ್ಧ ಕುಡಿಯುವ
ವಿದ್ಯಾವಂತರು ಸಮಾಜಕ್ಕೆ ಸೇವೆ ಸಲ್ಲಿಸಬೇಕು : ಸಂಸದ ಈ. ತುಕಾರಾಂ


ವಿದ್ಯಾವಂತರು ಸಮಾಜಕ್ಕೆ ಸೇವೆ ಸಲ್ಲಿಸಬೇಕು : ಸಂಸದ ಈ. ತುಕಾರಾಂ


ವಿದ್ಯಾವಂತರು ಸಮಾಜಕ್ಕೆ ಸೇವೆ ಸಲ್ಲಿಸಬೇಕು : ಸಂಸದ ಈ. ತುಕಾರಾಂ


ವಿದ್ಯಾವಂತರು ಸಮಾಜಕ್ಕೆ ಸೇವೆ ಸಲ್ಲಿಸಬೇಕು : ಸಂಸದ ಈ. ತುಕಾರಾಂ


ವಿದ್ಯಾವಂತರು ಸಮಾಜಕ್ಕೆ ಸೇವೆ ಸಲ್ಲಿಸಬೇಕು : ಸಂಸದ ಈ. ತುಕಾರಾಂ


ಬಳ್ಳಾರಿ, 25 ಫೆಬ್ರವರಿ (ಹಿ.ಸ.) :

ಆ್ಯಂಕರ್ : ವಿದ್ಯೆ ಯಾರೊಬ್ಬರ ಆಸ್ತಿ ಅಲ್ಲ, ವಿದ್ಯಾವಂತರು ಸಮಾಜಕ್ಕೆ ಆಸ್ತಿಯಾಗಿ ಸೇವೆ ಸಲ್ಲಿಸಬೇಕು ಎಂದು ಸಂಸದರಾದ ಈ. ತುಕಾರಾಂ ಅವರು ತಿಳಿಸಿದ್ದಾರೆ.

ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ, ಕೈಗಾರಿಕೆಗಳಲ್ಲಿ ರೋಬೋಟಿಕ್ಸ್ ಬಳಕೆಯ ಕಾರ್ಯಗಾರ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ಬೋಧಕರು ಬರೆದಿದರುವ ಪುಸ್ತಕಗಳನ್ನು ಬುಧವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಜೀವನಕ್ಕೆ ಅನ್ನ, ನೀರು ಮತ್ತು ಹಣ ಅವಶ್ಯಕತೆ. ಆಹಾರ, ನೀರು ಮತ್ತು ಹಣ ಬಂದ ಮೇಲೆ ಸಮಾಜಕ್ಕೆ ಪ್ರತಿಯೊಬ್ಬರೂ ಸೇವೆ ಸಲ್ಲಿಸಬೇಕು. ವಿದ್ಯಾರ್ಥಿ ಜೀವನ ಮತ್ತು ಯೌವ್ವನದಲ್ಲಿ ಕಂಡ ಕನಸುಗಳನ್ನು ನನಸಾಗಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ಪೋಷಕರು ವಿದ್ಯಾರ್ಥಿಗಳ ಕುರಿತು ಕಾಣುತ್ತಿರುವ ಕನಸುಗಳನ್ನು ನನಸಾಗಿಸಬೇಕು ಎಂದರು.

ಎಪ್ಸಿಲಾನ್ ಕಾರ್ಬನ್ ಕಂಪನಿಯ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಆನಂದ ಕುಮಾರ್ ಅವರು ಅತಿಥಿಗಳಾಗಿ, ಪ್ರತಿಭಾನ್ವಿತರು ಪ್ರತಿಭೆಯನ್ನು ಪ್ರದರ್ಶನ ಮಾಡಲು ಸೂಕ್ತವಾದ ಅವಕಾಶಗಳಿವೆ. ಪ್ರತಿಯೊಬ್ಬರೂ ಕೌಶಲ್ಯವಂತರು ಮತ್ತು ಪ್ರತಿಭಾನ್ವಿತರಾಗಬೇಕು ಎಂದರು.

ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಣೇಕಲ್ ಮಹಾಂತೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಅರವಿಂದ ಪಾಟೀಲ್, ಖಜಾಂಚಿಗಳಾದ ಬೈಲುವದ್ದಿಗೇರಿ ಏರ್ರಿಸ್ವಾಮಿ, ಕೈಗಾರಿಕೆಗಳಲ್ಲಿ ರೋಬೋಟಿಕ್ಸ್ ಬಳಕೆ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಕಿರಣ್ ಕಶ್ಯಪ್. ಎಂ,, ಸುದೀಪ್, ಕಾಲೇಜಿನ ಅಡಳಿತ ಮಂಡಳಿಯ ಅಧ್ಯಕ್ಷರಾದ ಪಲ್ಲೇದ ಪ್ರಭುಲಿಂಗ, ಅಡಳಿತ ಮಂಡಳಿಯ ಸದಸ್ಯರಾದ ಬಾಣಾಪುರ ಜಡಿ ಸಿದ್ದನಗೌಡ, ಚಂದ್ರಶೇಖರ ಪಾಶ್ಚಾಪುರ್ ಅವರು ವೇದಿಕೆಯಲ್ಲಿದ್ದರು.

ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರುಗಳಾದ ಶ್ರೀಮತಿ ನಳಿನಿ ಮತ್ತು ಟಿ. ಹೇಮಂತ್ ಕುಮಾರ್ ಬರೆದಿರುವ `ಡಿಪೆÇ್ಲೀಮಾ ಅ-25’ ಪಠ್ಯಪುಸ್ತಕಗಳನ್ನು ಈ ಸಂದರ್ಭದಲ್ಲಿ ಗಣ್ಯರು ಬಿಡುಗಡೆ ಮಾಡಿದರು.

ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಬಿ. ಶ್ರೀಶೈಲಗೌಡ ಅವರು ವೇದಿಕೆಯಲ್ಲಿದ್ದರು.

ಉಪನ್ಯಾಸಕರಾದ ಕುಮಾರಿ ಹಿಮಬಿಂದು ಪ್ರಾರ್ಥನೆ ಸಲ್ಲಿಸಿದರು. ಉಪನ್ಯಾಸಕ ಟಿ. ಹೇಮಂತ್ಕುಮಾರ್ ಅವರು ಸ್ವಾಗತ ಕೋರಿದರು. ಶ್ರೀಮತಿ ಉಮ್ಮೆ ಸಲ್ಮಾ ಅವರು ಕಾರ್ಯಕ್ರಮ ನಿರೂಪಿಸಿದರು. ಎಸ್. ನಾಗರಾಜ್ ಅವರು ವಂದನಾರ್ಪಣೆ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande