ಬಳ್ಳಾರಿ ಮಹಾನಗರ ಪಾಲಿಕೆ: ನಿವೇಶನ ಖರೀದಿ ಮಾಡದಂತೆ ಸೂಚನೆ
ಬಳ್ಳಾರಿ, 25 ಫೆಬ್ರವರಿ (ಹಿ.ಸ.): ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಬಳ್ಳಾರಿ ತಾಲ್ಲೂಕಿನ ವ್ಯಾಪ್ತಿಯ ಅಂದ್ರಾಳ್ ಗ್ರಾಮದ ಸರ್ವೆ ನಂ:101/ಎ ರಲ್ಲಿ ಸಾರ್ವಜನಿಕರು ನಿವೇಶನಗಳನ್ನು ಖರೀದಿ ಮಾಡದಂತೆ ಪಾಲಿಕೆಯ ಉಪ ಆಯುಕ್ತರು (ಕಂದಾಯ) ತಿಳಿಸಿದ್ದಾರೆ. ಅಂದ್ರಾಳ್ ಗ್ರಾಮದ ಸರ್ವೆ ನಂ:1
ಬಳ್ಳಾರಿ ಮಹಾನಗರ ಪಾಲಿಕೆ: ನಿವೇಶನ ಖರೀದಿ ಮಾಡದಂತೆ ಸೂಚನೆ


ಬಳ್ಳಾರಿ, 25 ಫೆಬ್ರವರಿ (ಹಿ.ಸ.):

ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಬಳ್ಳಾರಿ ತಾಲ್ಲೂಕಿನ ವ್ಯಾಪ್ತಿಯ ಅಂದ್ರಾಳ್ ಗ್ರಾಮದ ಸರ್ವೆ ನಂ:101/ಎ ರಲ್ಲಿ ಸಾರ್ವಜನಿಕರು ನಿವೇಶನಗಳನ್ನು ಖರೀದಿ ಮಾಡದಂತೆ ಪಾಲಿಕೆಯ ಉಪ ಆಯುಕ್ತರು (ಕಂದಾಯ) ತಿಳಿಸಿದ್ದಾರೆ.

ಅಂದ್ರಾಳ್ ಗ್ರಾಮದ ಸರ್ವೆ ನಂ:101/ಎ ರ ಆಸ್ತಿಯು ಕರ್ನಾಟಕ ಸರ್ಕಾರದ ಮಾಲೀಕತ್ವದಲ್ಲಿರುವ ಸರ್ಕಾರಿ ಜಮೀನಾಗಿದ್ದು, ದುರುಗಣ್ಣ ತಂದೆ ಸಣ್ಣ ದುರುಗಪ್ಪ, ವಾರ್ಡ್ ನಂ:09, ರಾಮ ನಗರ, ಪೋಲಿ ಮಾರೆಮ್ಮ ಗುಡಿ ಹತ್ತಿರ, ಅಂದ್ರಾಳ್ ಬಳ್ಳಾರಿ ಇವರು ಬಳ್ಳಾರಿ ಮಹಾನಗರ ಪಾಲಿಕೆಯಿಂದ 2025 ರ ಮೇ ಮತ್ತು ಜೂನ್ ತಿಂಗಳಲ್ಲಿ ನಮೂನೆ-2ಎ ಅನಧಿಕೃತ ಬಿ-ಖಾತಾ ಪಡೆದು ಮಾರಾಟ ಮಾಡುವ ಕಾರ್ಯದಲ್ಲಿ ನಿರತರಾಗಿರುವುದು ಕಂಡುಬಂದಿದೆ.

ಹಾಗಾಗಿ ಸರ್ವೆ ನಂಬರ್ ನಲ್ಲಿರುವ ಯಾವುದೇ ನಿವೇಶನವನ್ನು ಸಾರ್ವಜನಿಕರು ಖರೀದಿಸಬಾರದು. ಒಂದುವೇಳೆ ಯಾವುದೇ ಸಾರ್ವಜನಿಕರು ಆ ಸರ್ವೆ ನಂಬರ್ ನ ನಿವೇಶನವನ್ನು ಖರೀದಿಸಿದಲ್ಲಿ ಪಾಲಿಕೆಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande