
ಕೋಲಾರ, ೨೫ ಫೆಬ್ರವರಿ (ಹಿ.ಸ) :
ಆ್ಯಂಕರ್ : ಬೆಂಗಳೂರು ಉತ್ತರ ವಿವಿಯ ೨೦೨೬ ನೇ ವರ್ಷದ ಕ್ಯಾಲೆಂಡರಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಕುಲಪತಿ ಪ್ರೊ ಬಿ.ಕೆ.ರವಿ, ಕುಲಸಚಿವರಾದ ಸಿ.ಎನ್.ಶ್ರೀಧರ್ ಬಿಡುಗಡೆ ಮಾಡಿದರು.
ಕ್ಯಾಲೆಂಡರ್ ಬಿಡುಗಡೆ ಮಾಡಿ ಶುಭ ಕೋರಿದ ಸಚಿವ ಎಂ.ಸಿ.ಸುಧಾಕರ್, ಬಯಲು ಸೀಮೆಯ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸ್ಥಾಪಿತವಾಗಿರುವ ಬೆಂಗಳೂರು ಉತ್ತರ ವಿವಿಯನ್ನು ರಾಜ್ಯಕ್ಕೆ ಮಾದರಿಯಾಗುವಂತೆ ಮುನ್ನಡೆಸಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ನಡುವಿನ ಜಂಗಮಕೋಟೆ ಸಮೀಪ ವಿವಿ ನೂತನ ಕಟ್ಟಡಗಳು,ಕ್ಯಾಂಪಾಸ್ ಕಾಮಗಾರಿಗಳ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡ ಸಚಿವರು, ಆದಷ್ಟು ಶೀಘ್ರ ಕಾಮಗಾರಿ ಮುಗಿಸಿ, ಅಲ್ಲಿಗೆ ಸ್ಥಳಾಂತರಗೊಳ್ಳಲು ಕ್ರಮವಹಿಸಿ ಎಂದು ಸೂಚಿಸಿದರು.
ಕುಲಪತಿ ಪ್ರೊ.ಬಿ.ಕೆ.ರವಿ ವಿವಿಯಿಂದ ಕಾಮಗಾರಿಯ ಪ್ರಗತಿಗೆ ಕೈಗೊಂಡಿರುವ ಕ್ರಮಗಳು, ಶೈಕ್ಷಣಿಕ ಚಟುವಟಿಕೆಗಳು ಸೇರಿದಂತೆ ವಿವಿಯ ಕಾರ್ಯಕ್ರಮಗಳ ಪ್ರಗತಿಯ ಕುರಿತು ಸಚಿವರೊಂದಿಗೆ ಮಾಹಿತಿ ಹಂಚಿಕೊAಡರು.
ಈ ಸಂದರ್ಭದಲ್ಲಿ ವಿವಿಯ ಕುಲಸಚಿವ ಸಿ.ಎನ್.ಶ್ರೀಧರ್ ಹಾಜರಿದ್ದರು.
ಚಿತ್ರ :ಬೆಂಗಳೂರು ಉತ್ತರ ವಿವಿಯ ೨೦೨೬ ನೇ ವರ್ಷದ ಕ್ಯಾಲೆಂಡರಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಕುಲಪತಿ ಪ್ರೊ ಬಿ.ಕೆ.ರವಿ, ಕುಲಸಚಿವರಾದ ಸಿ.ಎನ್.ಶ್ರೀಧರ್ ಬಿಡುಗಡೆ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್