ಲಂಚ ಪಡೆಯುವಾಗ ಎಎಸ್ಐ ಲೋಕಾಯುಕ್ತ ಬಲಿಗೆ
ಗದಗ, 25 ಫೆಬ್ರವರಿ (ಹಿ.ಸ.): ಆ್ಯಂಕರ್:ಗದಗ ಶಹರ ಪೊಲೀಸ್ ಠಾಣೆಯ ಎಎಸ್ಐ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಇಂದು ಸಂಜೆ ನಡೆದಿದೆ. ಪಿಟಿಷನ್ ಅರ್ಜಿ ವಿಚಾರಣೆಗೆ ಲಂಚದ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಎಎಸ್ಐ ಚೆನ್ನಬಸಪ್ಪ ಇಂಗಳಳ್ಳಿ ಅವರನ್ನು ಹತ್ತು ಸಾವಿರ ರೂ. ಲಂಚ ಪಡೆಯುವ ವೇಳೆ ಬಲೆಗೆ ಬಿದ್ದಿದಾರೆ.
ಫೋಟೋ


ಗದಗ, 25 ಫೆಬ್ರವರಿ (ಹಿ.ಸ.):

ಆ್ಯಂಕರ್:ಗದಗ ಶಹರ ಪೊಲೀಸ್ ಠಾಣೆಯ ಎಎಸ್ಐ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಇಂದು ಸಂಜೆ ನಡೆದಿದೆ. ಪಿಟಿಷನ್ ಅರ್ಜಿ ವಿಚಾರಣೆಗೆ ಲಂಚದ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಎಎಸ್ಐ ಚೆನ್ನಬಸಪ್ಪ ಇಂಗಳಳ್ಳಿ ಅವರನ್ನು ಹತ್ತು ಸಾವಿರ ರೂ. ಲಂಚ ಪಡೆಯುವ ವೇಳೆ ಬಲೆಗೆ ಬಿದ್ದಿದಾರೆ.

ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ, ಗದಗ ಶಹರ ಪೊಲೀಸ್ ಠಾಣೆಯಲ್ಲೇ ಎಎಸ್ಐ ಹಣ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ.

ವೀರೇಶ ಪೂಜಾರ್ ಎಂಬುವರು ಪಿಟಿಷನ್ ಅರ್ಜಿ ವಿಚಾರಣೆಗೆ ಹಣ ಕೇಳುತ್ತಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ರೂಪಿಸಿದ ಯೋಜನೆಯಂತೆ ಇಂದು ದಾಳಿ ನಡೆಸಲಾಗಿದ್ದು, ಲಂಚದ ಹಣದೊಂದಿಗೆ ಎಎಸ್ಐ ಸಿಕ್ಕಿಬಿದ್ದಿದ್ದಾರೆ.

ದಾಳಿ ಸಂದರ್ಭದಲ್ಲಿ ಲೋಕಾಯುಕ್ತ ಸಿಪಿಐಗಳಾದ ಪಿ ಜಿ ಕವಟಗಿಮಠ, ಎಸ್ ಎಸ್ ತೇಲಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಶೀಲನೆ ನಡೆಸಿದರು. ಲಂಚದ ಹಣವನ್ನು ಜಪ್ತಿ ಮಾಡಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.

ಈ ಪ್ರಕರಣದಿಂದ ಗದಗ ಪೊಲೀಸ್ ವಲಯದಲ್ಲಿ ಸಂಚಲನ ಮೂಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande