ತ್ರೀಗಾಡ್ಸ್ ಕ್ರಿಯೇಶನ್ಸ್ ವತಿಯಿಂದ ಬಳ್ಳಾರಿ ದುರ್ಗಮ್ಮ ದೇವಿ ಆಲ್ಬಮ್ ಬಿಡುಗಡೆ
ಬಳ್ಳಾರಿ, 24 ಫೆಬ್ರವರಿ (ಹಿ.ಸ.) : ಆ್ಯಂಕರ್ : ಜಿಲ್ಲೆಯಲ್ಲಿ ಚಲನಚಿತ್ರ ಸಾಕ್ಷಾ ಚಿತ್ರಗಳನ್ನು ನಿರ್ಮಿಸಲು ಯುವಕರು ಮುಂದಾಗುತ್ತಿಲ್ಲ ಒಳ್ಳೆಯ ಕಥಾ ವಸ್ತುವನ್ನು ಸಿದ್ಧಪಡಿಸಿಕೊಂಡಲ್ಲಿ ನಾನು ಅಂತಹ ಚಲನಚಿತ್ರ ಅಥವಾ ಸಾಕ್ಷಾ ಚಿತ್ರ ನಿರ್ಮಿಸಲು ಸ್ವತಃ ನಾನಾಗಲಿ ಅಥವಾ ಮತ್ತೊಬ್ಬ ನಿರ್ಮಾಪಕನ ಸಹಾಯದಿ
ತ್ರೀಗಾಡ್ಸ್ ಕ್ರಿಯೇಶನ್ಸ್ ವತಿಯಿಂದ ಬಳ್ಳಾರಿ ದುರ್ಗಮ್ಮ ದೇವಿ ಆಲ್ಬಮ್ ಬಿಡುಗಡೆ


ತ್ರೀಗಾಡ್ಸ್ ಕ್ರಿಯೇಶನ್ಸ್ ವತಿಯಿಂದ ಬಳ್ಳಾರಿ ದುರ್ಗಮ್ಮ ದೇವಿ ಆಲ್ಬಮ್ ಬಿಡುಗಡೆ


ಬಳ್ಳಾರಿ, 24 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಜಿಲ್ಲೆಯಲ್ಲಿ ಚಲನಚಿತ್ರ ಸಾಕ್ಷಾ ಚಿತ್ರಗಳನ್ನು ನಿರ್ಮಿಸಲು ಯುವಕರು ಮುಂದಾಗುತ್ತಿಲ್ಲ ಒಳ್ಳೆಯ ಕಥಾ ವಸ್ತುವನ್ನು ಸಿದ್ಧಪಡಿಸಿಕೊಂಡಲ್ಲಿ ನಾನು ಅಂತಹ ಚಲನಚಿತ್ರ ಅಥವಾ ಸಾಕ್ಷಾ ಚಿತ್ರ ನಿರ್ಮಿಸಲು ಸ್ವತಃ ನಾನಾಗಲಿ ಅಥವಾ ಮತ್ತೊಬ್ಬ ನಿರ್ಮಾಪಕನ ಸಹಾಯದಿಂದಾಗಲಿ ಹಣದ ವ್ಯವಸ್ಥೆ ಮಾಡಿಸುವುದಾಗಿ ಜಿಕೆ ಫೌಂಡೇಶನ್ ಸಂಸ್ಥಾಪಕ ಜಿಕೆ ಸ್ವಾಮಿ ಅವರು ಯುವ ಪ್ರತಿಭೆಗಳಿಗೆ ತಿಳಿಸಿದ್ದಾರೆ.

ನಗರದ ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಫಂಕ್ಷನ್ ಹಾಲ್ನಲ್ಲಿ ತ್ರೀ ಗಾಡ್ಸ್ ಕ್ರಿಯೇಶನ್ಸ್ ವತಿಯಿಂದ ಹೊರತರಲಾದ ಬಳ್ಳಾರಿ ದುರ್ಗಮ್ಮ ದೇವಿ ಆಲ್ಬಮ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

ದುರ್ಗಮ್ಮ ದೇವಿಯ ಸಿಡಿ ಬಂಡಿ ರಥೋತ್ಸವ ದಿನದಂದು ಆಲ್ಬಮ್ ಬಿಡುಗಡೆ ಮಾಡುತ್ತಿರುವುದು ಅದು ದೇವಿಗೆ ಸಮರ್ಪಣೆಯಾದಂತೆ ಆಗಿದೆ, ಆ ದೇವಿಯ ಆಶೀರ್ವಾದದ ಕೃಪೆಯಿಂದ ಯಾವುದೇ ಅಡೆತಡೆ ಇಲ್ಲದೆ ನಿಮ್ಮ ಜರ್ನಿ ಈಗೆ ಮುಂದೆ ಸಾಗಲಿ ಎಂದು ಆಶಿಸಿದರು.

ಈ ಆಲ್ಬಮ್ ಸಾಂಗ್ ನ ನಿರ್ದೇಶನವನ್ನು ಅಲಿ ಯಾಸೀನ್ ಮತ್ತು ಅಜಿತ್ ಕುಮಾರ್ ಮಾಡಿದರೆ, ಅನಂತ್ ರೆಡ್ಡಿ ಮತ್ತು ರಘು ಛಾಯಾಗ್ರಹಣವಿದೆ, ಕುಮಾರಿ ಕಾವೇರಿ ರಮೇಶ್ ಪಾಟೀಲ ಅವರ ಗೀತ ರಚನೆಗೆ ನೃತ್ಯ ನಿರ್ದೇಶನವನ್ನು ಬಿಜೇಎನ್ ಎಸ್ ಬಬ್ಬ್ಲು, ನವೀನ್ ಮಾಡಿದ್ದಾರೆ. ಈ ಆಲ್ಬಮ್ ನಲ್ಲಿ ರಾಣಿ, ಪ್ರಶಿತಾ ನಟಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande