ರಂಗಭೂಮಿ ಮೂಲಕ ಸಮಾಜ ಬೆಳಗಬೇಕು : ಮೃತ್ಯುಂಜಯ ಹಿರೇಮಠ
ಗದಗ, 24 ಫೆಬ್ರವರಿ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕೊಡಗಾನೂರ ಗ್ರಾಮದ ವೀರಭದ್ರೇಶ್ವರ ಜಾತ್ರೆಯ ಪ್ರಯುಕ್ತ ವೀರಭದ್ರೇಶ್ವರ ನಾಟ್ಯ ಸಂಘ ಹಮ್ಮಿಕೊಂಡ ‘ಸಾಹುಕಾರನ ಸಂಪತ್ತು–ಬಡವನ ತಾಕತ್ತು’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಮೃತ್ಯುಂಜಯ ಹಿರೇಮಠ ಅವರು, ನಾಟಕಗಳು ಸ
ಫೋಟೋ


ಗದಗ, 24 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕೊಡಗಾನೂರ ಗ್ರಾಮದ ವೀರಭದ್ರೇಶ್ವರ ಜಾತ್ರೆಯ ಪ್ರಯುಕ್ತ ವೀರಭದ್ರೇಶ್ವರ ನಾಟ್ಯ ಸಂಘ ಹಮ್ಮಿಕೊಂಡ ‘ಸಾಹುಕಾರನ ಸಂಪತ್ತು–ಬಡವನ ತಾಕತ್ತು’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಮೃತ್ಯುಂಜಯ ಹಿರೇಮಠ ಅವರು, ನಾಟಕಗಳು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತವೆ; ರಂಗಭೂಮಿ ಮೂಲಕ ಸಮಾಜ ಬೆಳಗಬೇಕಾಗಿದೆ ಎಂದು ಹೇಳಿದರು.

ವೃತ್ತಿ ರಂಗಭೂಮಿ ನಾಟಕಗಳು ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ನಾಟಕಗಳು ಪುನಃ ಜೀವಂತಿಕೆ ಪಡೆದುಕೊಳ್ಳಬೇಕೆಂಬ ಸದುದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಸಂತಸ ತಂದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಹಾಯಕ ತೋಟಗಾರಿಕೆ ಅಧಿಕಾರಿ ಶರಣಯ್ಯ ಅಂಗಡಿ ಮಾತನಾಡಿ, ಇಂದಿನ ದಿನಗಳಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಹಾವಳಿಯಿಂದ ನೈಜ ಅಭಿನಯದ ನಾಟಕ ಪ್ರದರ್ಶನಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ ಕೊಡಗಾನೂರದಲ್ಲಿ ನಿರಂತರವಾಗಿ ನಾಟಕಗಳು ಪ್ರದರ್ಶನಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ನಾಟಕಗಳು ನಮ್ಮ ಕಲೆ–ಸಂಸ್ಕೃತಿಯ ಪ್ರತೀಕವಾಗಿದ್ದು, ರಂಗಭೂಮಿ ಚಟುವಟಿಕೆಗಳಿಗೆ ಸಮಾಜ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ನಿರಂತರ ರಂಗಚಟುವಟಿಕೆಗಳಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದು ಹೇಳಿದರು.

ನಿವೃತ್ತ ಪಿಡಿಓ ವಾಯ್.ಎಚ್. ಕಳ್ಳಿಗುಡಿ ಮಾತನಾಡಿ, ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣಕ್ಕೆ ಸಂಗೀತ, ನಾಟಕ ಮತ್ತು ಸಾಂಸ್ಕೃತಿಕ ಹಬ್ಬಗಳು ಪೂರಕವಾಗುತ್ತವೆ. ಯುವ ಪೀಳಿಗೆಯಿಂದ ನಾವು ಏನನ್ನಾದರೂ ನಿರೀಕ್ಷಿಸಬೇಕಾದರೆ ಮೊದಲು ಅವರನ್ನು ಸುಸಂಸ್ಕೃತರನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಅಕ್ಕಮಹಾದೇವಿ ವಾಲ್ಮೀಕಿ, ನಿರ್ಮಲಾ ಸೊಲಬಗೌಡ, ಭರಮಪ್ಪ ಹುಣಸಿಗಿಡದ, ಸಣ್ಣಪಾರಪ್ಪ ಶಿವಾನಂದ ಹುಯಿಲಗೋಳ, ವೀರಯ್ಯ ಕಪ್ಲಿಮಠ, ವೀರಯ್ಯ ಬಾಳಿಕಾಯಿಮಠ, ಸಂಗಪ್ಪ ನಡಕಟ್ಟಿನ, ರಾಮಪ್ಪ ಹೂಗಾರ, ಲಲಿತಾ ಪೂಜಾರ, ಮಲ್ಲಯ್ಯ ಹಿರೇಮಠ, ಈರಪ್ಪ ನಡಕಟ್ಟಿನ, ಪರಸಪ್ಪ ವಾಲ್ಮೀಕಿ, ಮಾಂತಯ್ಯ ಕಪ್ಪಿಮಠ, ಮಲ್ಲಯ್ಯ ಬಣ್ಣದಮಠ, ಬಾಲಚಂದ್ರ ವಾಲ್ಮೀಕಿ, ಪ್ರಭುಲಿಂಗಯ್ಯ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸೈದುಸಾಬ ನದಾಫ್, ಚಂದ್ರು ಹೂಗಾರ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande