ಡಾ. ಜಿ ರಾಮಕೃಷ್ಣರಿಗೆ ಪ್ರತಿಷ್ಠಿತ ನಾಡೋಜ ಗೌರವ ಪದವಿ
ಹಂಪಿ, 24 ಫೆಬ್ರವರಿ (ಹಿ.ಸ.) : ಆ್ಯಂಕರ್ : ಡಾ.ಜಿ. ರಾಮಕೃಷ್ಣ ಅವರು ಕನ್ನಡದ ಪ್ರಮುಖ ವಿದ್ವಾಂಸರು ಮತ್ತು ಲೇಖಕರು. ಮಾಕ್ರ್ಸ್ವಾದಿ ಚಿಂತಕರು. ಶಿಕ್ಷಣತಜ್ಞರು. ಶ್ರೀಯುತರ ಕನ್ನಡ ಸಾಹಿತ್ಯ, ವೈಚಾರಿಕ ಹಾಗೂ ವೈಜ್ಞಾನಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಇಂಗ್ಲಿಷ್, ಸಂಸ್ಕøತ, ಕನ್ನಡದಲ್ಲ
ಡಾ. ಜಿ ರಾಮಕೃಷ್ಣರಿಗೆ ಪ್ರತಿಷ್ಠಿತ ನಾಡೋಜ ಗೌರವ ಪದವಿ


ಹಂಪಿ, 24 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಡಾ.ಜಿ. ರಾಮಕೃಷ್ಣ ಅವರು ಕನ್ನಡದ ಪ್ರಮುಖ ವಿದ್ವಾಂಸರು ಮತ್ತು ಲೇಖಕರು. ಮಾಕ್ರ್ಸ್ವಾದಿ ಚಿಂತಕರು. ಶಿಕ್ಷಣತಜ್ಞರು. ಶ್ರೀಯುತರ ಕನ್ನಡ ಸಾಹಿತ್ಯ, ವೈಚಾರಿಕ ಹಾಗೂ ವೈಜ್ಞಾನಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಇಂಗ್ಲಿಷ್, ಸಂಸ್ಕøತ, ಕನ್ನಡದಲ್ಲಿ ಪಾಂಡಿತ್ಯವುಳ್ಳವರು.

ಡಾ. ಜಿ. ರಾಮಕೃಷ್ಣ ಅವರು 1939 ಜೂನ್ 17ರಂದು ತುಮಕೂರು ಜಿಲ್ಲೆ ಸಿರಾ ತಾಲ್ಲೂಕಿನ ಹಾಲೇನಹಳ್ಳಿ ಜನಿಸುತ್ತಾರೆ. ತಂದೆ ಜಿ.ಸುಬ್ರಹ್ಮಣ್ಯಂ ತಾಯಿ ನರಸಮ್ಮ. ಬಾಲ್ಯದಿಂದಲೂ ಕಷ್ಟಪಟ್ಟು ಓದಿದ ಜಿ. ರಾಮಕೃಷ್ಣ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಸಂಸ್ಕøತದಲ್ಲಿ ಬಿ.ಎ. ಆನರ್ಸ್(1958), ಎಂ.ಎ.(1959) ಮತ್ತು ಪಿಹೆಚ್.ಡಿ.(1965), ಪೂನಾ ವಿಶ್ವವಿದ್ಯಾಲಯದಿಂದ ಎಂ.ಎ. ಇಂಗ್ಲಿಷ್ (1965), ವೇಲ್ಸ್ ವಿಶ್ವವಿದ್ಯಾಲಯದಿಂದ ಎಂ.ಎ. ಇಂಗ್ಲಿಷ್(1968) ಪದವಿಗಳನ್ನು ಪಡೆಯುತ್ತಾರೆ.

1959ರಿಂದ ಅಕೌಂಟೆಂಟ್ ಜನರಲ್ ಆಫೀಸ್ನಲ್ಲಿ ವೃತ್ತಿ ಆರಂಭಿಸುತ್ತಾರೆ. ನಂತರ ಉಸ್ಮಾನಿಯ ವಿಶ್ವವಿದ್ಯಾಲಯ(1962) ಮತ್ತು ಕೈವಲ್ಯಧಾಮ ಯೋಗ ಕೇಂದ್ರದಲ್ಲಿ(1962 ರಿಂದ 1965) ಸಂಶೋಧಕರಾಗಿ ಸೇವೆ ಮಾಡುತ್ತಾರೆ. ನಂತರ ಮಹಾರಾಷ್ಟ್ರದ ಅಂಬೇಡ್ಕರ್ ಕಾಲೇಜಿನಲ್ಲಿ ಅಧ್ಯಾಪಕರಾಗಿ(1965 ರಿಂದ 1967), ನಂತರ ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ 30 ವರ್ಷಗಳ ಕಾಲ(1967 ರಿಂದ 1993) ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಾರೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ(1994-1996) ಸೇವೆ ಸಲ್ಲಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಮಹತ್ವಾಕಾಂಕ್ಷೆ ಪತ್ರಿಕೆ ವಿಜ್ಞಾನ ಸಂಗಾತಿ ರೂಪಿಕೆಯ ಹಿಂದೆ ಇವರ ವಿದ್ವತ್ಶ್ರಮವೂ ಇದೆ. 1997ರಲ್ಲಿ ಭಾರತೀಯ ವಿಜ್ಞಾನದ ಹಾದಿ ಒಂದು ಅವಲೋಕನ ಎನ್ನುವ ಪುಸ್ತಕ ಬರೆದು ಕೊಡುವ ಮೂಲಕ ನಮ್ಮ ಪ್ರಸಾರಾಂಗದ ಧ್ಯೇಯೋದ್ದೇಶಗಳನ್ನು ವಿಸ್ತರಿಸಿದ್ದಾರೆ.

ಇವರ ವಿಚಾರ ಸಾಹಿತ್ಯ ಬರವಣಿಗೆ ವಿಸ್ತಾರವಾದದ್ದು. ಮುನ್ನೋಟ(1980), ವೈಚಾರಿಕ ಜಾಗೃತಿ(1992), ದೇವಿಪ್ರಸಾದ್ ಮತ್ತು ಲೋಕಾಯತ ದರ್ಶನ(1994), ಭಾರತೀಯ ವಿಜ್ಞಾನದ ಹಾದಿ(1997), ಫೆಡ್ರಿಕ್ ಏಂಗಲ್ಸ್(2003), ಯುಗದರಿವು (2004), ನುಡಿಬಿಂಬ(2005), ಎಂದಿಗೂ ಸಲ್ಲುವ ಮಾಕ್ರ್ಸ್(2014), ಋಗ್ವೇದ ಸಂಹಿತೆ, ಭಗವದ್ಗೀತೆ ಒಂದು ಅವಲೋಕನ(2018), ವರ್ತಮಾನ(2019), ಋಗ್ವೇದ ಪ್ರವೇಶಿಕ ಐತಿಹ್ಯ ಮತ್ತು ವಾಸ್ತವ(2016) ಇವರ ಪ್ರಮುಖ ಕೃತಿಗಳು. ಯುಗಪುರುಷ ಲೆನಿನ್(1979), ಭಗತ್ಸಿಂಗ್(1984), ಭೂಪೇಶ ಗುಪ್ತಾ (1986), ಚೆಗೆವಾರ (1984) ಮುಂತಾದ ವ್ಯಕ್ತಿಚಿತ್ರಗಳನ್ನು ಕನ್ನಡಕ್ಕೆ ಪರಿಚಯಿಸಿ ದ್ದಾರೆ. ಇವರ ಮುನ್ನೋಟ(1980), ಆಯತನ(1995), ಭಾರತೀಯ ವಿಜ್ಞಾನದ ಹಾದಿ (1998) ಈ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇದಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿಗಳು ದೊರೆತಿವೆ. ಜೊತೆಗೆ ಪಾಟೀಲ ಪುಟ್ಟಪ್ಪ ಪತ್ರಿಕೋದ್ಯಮ ಪ್ರಶಸ್ತಿ, ಬೆಟಗೇರಿ ಕೃಷ್ಣಶರ್ಮ ಪತ್ರಿಕೋದ್ಯಮ ಪ್ರಶಸ್ತಿಗಳು ಲಭಿಸಿವೆ.

ಡಾ. ಜಿ. ರಾಮಕೃಷ್ಣ ಅವರು ದೇಶ ಹೊರದೇಶಗಳ ಹಲವು ಸಂಘ ಸಂಸ್ಥೆಗಳು ನಡೆಸಿದ ಸಮ್ಮೇಳನ ಹಾಗೂ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲುದಾರರಾಗಿದ್ದಾರೆ. ಇಂಡೋ-ಸೋವಿಯತ್ ಸಾಂಸ್ಕøತಿಕ ಸಂಘದ ರಾಜ್ಯ ಸಮಿತಿಯ ಕಾರ್ಯದರ್ಶಿ ಯಾಗಿ ವಿವಿಧ ಸಾರ್ವಜನಿಕ ಚಳುವಳಿಗಳಲ್ಲಿ ಪಾಲ್ಗೊಂಡು ಜನಜಾಗೃತಿಗೆ ಕಾರಣ ರಾಗಿದ್ದಾರೆ. ಶ್ರೀಯುತರ ಭಾರತೀಯ ಮೂಲತತ್ತ್ವಗಳ ಜೊತೆಗೆ, ಮಾಕ್ರ್ಸ್ವಾದಿ ಸಿದ್ಧಾಂತದ ಬಗ್ಗೆ ಒಲವು ಹೊಂದಿದ್ದು, ಈ ಎರಡು ಸಿದ್ಧಾಂತಗಳನ್ನು ಕನ್ನಡಕ್ಕೆ ಸಮರ್ಥವಾಗಿ ಪರಿಚಯಿಸಿದ್ದಾರೆ. ನವಕರ್ನಾಟಕ ಪ್ರಕಾಶನ ಬೆಂಗಳೂರಿ ನಿಂದ ಪ್ರಕಟವಾಗುವ ಹೊಸತು ಪತ್ರಿಕೆಯ ಸಂಪಾದಕರಾಗಿ, ಲೇಖಕರಾಗಿ ಆ ಪತ್ರಿಕೆಯ ಸಾಂಸ್ಕøತಿಕ ಮೌಲ್ಯಗಳನ್ನು ಹೆಚ್ಚಿಸಿದ್ದಾರೆ. ಸುವರ್ಣ ಸ್ವಾತಂತ್ರ್ಯ ಮಾಲಿಕೆಯ 14 ಪುಸ್ತಕಗಳು, ನವಕರ್ನಾಟಕ ಪ್ರಕಾಶನದ ಲೋಕತತ್ತ್ವಶಾಸ್ತ್ರ ಪ್ರವೇಶಿಕೆ 8 ಪುಸ್ತಕಗಳ ಸಂಪಾದಕರಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಅನೇಕ ಕಿರುಹೊತ್ತಿಗೆಗಳನ್ನು ಇಂಗ್ಲಿಷ್ ಬರಹಗಳನ್ನು ಹೊರತಂದಿದ್ದಾರೆ. ಚಾರಣ ಇವರ ಪ್ರೀತಿಯ ಹವ್ಯಾಸ.

ವಿಜ್ಞಾನ, ತಂತ್ರಜ್ಞಾನ, ಕನ್ನಡ ಸಾಹಿತ್ಯ ಮತ್ತು ಭಾರತೀಯ ಸಾಹಿತ್ಯ, ಮಾಕ್ರ್ಸ್ವಾದ, ಸಾಂಸ್ಕøತಿಕ ವಿಮರ್ಶೆ, ಸಾಮಾಜಿಕ ಚಳುವಳಿಗಳಲ್ಲಿ ಡಾ. ಜಿ ರಾಮಕೃಷ್ಣ ಅವರು ಸಲ್ಲಿಸಿದ ಮೌಲಿಕ ಸೇವೆಯನ್ನು ಗುರುತಿಸಿ, ಕನ್ನಡ ವಿಶ್ವವಿದ್ಯಾಲಯವು 34ನೇ ನುಡಿಹಬ್ಬದಲ್ಲಿ ನಾಡೋಜ ಗೌರವ ಪ್ರಶಸ್ತಿ ನೀಡಿ ಗೌರವಿಸುತ್ತದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande