ಟ್ರಾಕ್ಟರ್ಗಳಲ್ಲಿ ಜೋರಾಗಿ ಹಾಡುಗಳಿಗೆ ಬ್ರೇಕ್, ಪೊಲೀಸ್ ಕಠಿಣ ಎಚ್ಚರಿಕೆ
ಗದಗ, 24 ಫೆಬ್ರವರಿ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ನರೇಗಲ್ಲ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಟ್ರಾಕ್ಟರ್ಗಳಲ್ಲಿ ಜೋರಾಗಿ ಹಾಡುಗಳನ್ನು ಹಾಕಿಕೊಂಡು ಸಂಚರಿಸುವ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ, ನರೇಗಲ್ಲ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇನ್ನು ಮುಂದೆ ಟ್ರಾಕ್ಟರ್ಗಳಲ್
ಫೋಟೋ


ಗದಗ, 24 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ನರೇಗಲ್ಲ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಟ್ರಾಕ್ಟರ್ಗಳಲ್ಲಿ ಜೋರಾಗಿ ಹಾಡುಗಳನ್ನು ಹಾಕಿಕೊಂಡು ಸಂಚರಿಸುವ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ, ನರೇಗಲ್ಲ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಇನ್ನು ಮುಂದೆ ಟ್ರಾಕ್ಟರ್ಗಳಲ್ಲಿ ಟೇಪ್ ಹಾಕಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಜೋರಾಗಿ ಹಾಡುಗಳನ್ನು ಹಾಕಿಕೊಂಡು ಓಡಾಡಿದರೆ, ಅಂಥವರ ವಿರುದ್ಧ ದಂಡ ವಿಧಿಸುವುದು, ಟೇಪ್ಗಳನ್ನು ವಶಪಡಿಸಿಕೊಳ್ಳುವುದು ಹಾಗೂ ನಿಯಮ ಉಲ್ಲಂಘನೆ ಮುಂದುವರಿದರೆ ಟ್ರಾಕ್ಟರ್ಗಳನ್ನೇ ಸೀಜ್ ಮಾಡುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ನರೇಗಲ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಐಶ್ವರ್ಯ ನಾಗರಾಳ, ಮಾತನಾಡಿ, ಟ್ರಾಕ್ಟರ್ ಚಾಲಕರು ಜೋರಾಗಿ ಹಾಡುಗಳನ್ನು ಹಾಕಿಕೊಂಡು ಸಂಚರಿಸುವುದರಿಂದ ಹಿಂದೆ ಬರುವ ವಾಹನಗಳ ಹಾರ್ನ್ ಕೇಳಿಸದೆ ಅನೇಕ ಅನಾಹುತಗಳು ಹಾಗೂ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುತ್ತಿರುವುದರಿಂದ ಈ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದರು.

ಜೋರಾಗಿ ಹಾಡುಗಳನ್ನು ಹಾಕುವುದರಿಂದ ಹೃದಯ ರೋಗಿಗಳು, ಚಿಕ್ಕ ಮಕ್ಕಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಇದಕ್ಕೆ ಸಂಬಂಧಿಸಿದಂತೆ ಕಳೆದ ಎರಡು–ಮೂರು ದಿನಗಳಿಂದ ತಾವು ಹಾಗೂ ಸಿಬ್ಬಂದಿಯವರು ಇಂತಹ ಟ್ರಾಕ್ಟರ್ ಚಾಲಕರನ್ನು ತಡೆದು ಜಾಗೃತಿ ಮೂಡಿಸುತ್ತಿದ್ದು, ಇನ್ನೂ ಎರಡು–ಮೂರು ದಿನಗಳೊಳಗೆ ಎಲ್ಲಾ ಟ್ರಾಕ್ಟರ್ ಚಾಲಕರು ಹಾಗೂ ಮಾಲೀಕರು ಪಟ್ಟಣದೊಳಗೆ ಟೇಪ್ಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಕೊಳ್ಳಬೇಕು. ಸೂಚನೆ ಪಾಲಿಸದಿದ್ದರೆ ಸಂಬಂಧಿಸಿದವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಜರುಗಿಸಲಾಗುವುದೆಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಪಟ್ಟಣದಲ್ಲಿ ಶಾಂತಿ, ಸುರಕ್ಷತೆ ಮತ್ತು ಸಾರ್ವಜನಿಕರ ನೆಮ್ಮದಿಗಾಗಿ ಪೊಲೀಸ್ ಇಲಾಖೆ ಕೈಗೊಂಡಿರುವ ಈ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಸಹಕಾರ ನಿರೀಕ್ಷಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande