

ಕಾರಟಗಿ, 24 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಶುಭಂ ಕಿಡ್ಸ್ ಶಾಲೆಯ ಯುಕೆಜಿ ವಿದ್ಯಾರ್ಥಿಗಳಿಗೆ ಗ್ರಾಜುಯೇಷನ್ ಡೇ ಕಾರ್ಯಕ್ರಮ ಜರಗಿತು.
ಈ ವೇಳೆ ಡಾ ಜಿತೇಂದ್ರ ಮಾತನಾಡಿ ಗ್ರಾಜುಯೇಷನ್ ಡೇ (KG Graduation Day) ಯುಕೆಜಿ (UKG) ಮುಗಿಸಿ ಪ್ರಾಥಮಿಕ ಶಾಲೆಗೆ ಕಾಲಿಡುತ್ತಿರುವ ಪುಟಾಣಿಗಳ ಕಲಿಕೆಯ ಮೊದಲ ಮೈಲಿಗಲ್ಲನ್ನು ಆಚರಿಸುವ ವಿಶೇಷ ಸಮಾರಂಭವಾಗಿದೆ.
ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರಷ್ಟೇ ಪಾಲಕರ ಪಾತ್ರವೂ ಪ್ರಮುಖ. ಮನೆಯೇ ಮೊದಲ ಪಾಠಶಾಲೆ ಎಂದು ಬಾಯಿಮಾತಿನಿಂದ ಹೇಳದೆ ಪಾಲಕರು ಮನೆಯಲ್ಲಿ ಮಕ್ಕಳಿಗಾಗಿ ಆರೋಗ್ಯಕರ ವಾತಾವರಣ ನಿರ್ಮಿಸಬೇಕು ಎಂದು ತಂದೆ- ತಾಯಿ ಮಕ್ಕಳ ಮುಂದೆ ಧನಾತ್ಮಕ ವಿಚಾರಗಳನ್ನು ಮಾತ್ರ ಮಾತನಾಡಬೇಕು. ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಸಂಸ್ಕಾರ ಕೇಂದ್ರ ಕುಟುಂಬ. ಮಕ್ಕಳ ಜೆತೆ ಹೆಚ್ಚು ಸಮಯ ಕಳೆದು ಅವರನ್ನು ಸ್ನೇಹಿತರಂತೆ ಕಾಣಬೇಕು. ಮಕ್ಕಳಿಗೆ ಮೊಬೈಲ್ ನೀಡಬಾರದು. ಮುಖ್ಯವಾಗಿ ಮಕ್ಕಳ ಮುಂದೆ ಹೆಚ್ಚು ಹೊತ್ತು ಮೊಬೈಲ್ ಬಳಸಬಾರದು. ಮನೆಯಲ್ಲಿ ದೈಹಿಕವಾಗಿ ಶ್ರಮವಾಗುವಂತಹ ಕೆಲಸಗಳನ್ನು ನೀಡಬೇಕು ಎಂದರು.
ನಂತರ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ನಂತರ ಮಕ್ಕಳಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿದವು ಈ ವೇಳೆ ಪಾಲಕರು ಮಕ್ಕಳೊಂದಿಗೆ ಹೆಜ್ಜೆ ಹಾಕಿ
ಸಂತೋಷ ಪಟ್ಟರು.
ಈ ಸಂದರ್ಭದಲ್ಲಿ ಕೊಲ್ಲಾ ಶೇಷಗಿರಿರಾವ್ ಅಧ್ಯಕ್ಷರು, ಮುಖ್ಯೋಪಾಧ್ಯಾಯನಿ ಶ್ರೀದೇವಿ ಕೊಲ್ಲಾ, ಶಿಕ್ಷಕಿಯರು ಅರುಣ, ಸೌಮ್ಯ ಹಿರೇಮಠ,ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್