
ಹಂಪಿ, 24 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಡಾ.ಹೆಚ್.ಸಿ.ಸತ್ಯನ್ ಅವರು ದಕ್ಷ ಆಡಳಿತಗಾರರು. ಸಾಮಾಜಿಕ ಕಳಕಳಿಯುಳ್ಳ ವರು. ಪ್ರಾಮಾಣಿಕ ಹಾಗೂ ಪಾರದರ್ಶಕ ವ್ಯಕ್ತಿತ್ವವುಳ್ಳವರು. ನ್ಯಾಯ ನಿಷ್ಠುರರು. ಶ್ರೀಯುತರು 15.05.1960ರಲ್ಲಿ ತಂದೆ ಹೆಚ್.ವಿ. ಚನ್ನಕೇಶವಯ್ಯ ಹಾಗೂ ತಾಯಿ ಸುಶೀಲಮ್ಮ ಅವರ ಮಗನಾಗಿ ಹಾಸನದಲ್ಲಿ ಜನಿಸಿದರು. ತಂದೆ ಹಾಸನ ನಗರಸಭೆಯ ಚುನಾಯಿತ ಸದಸ್ಯರಾಗಿ, ಹಲವು ಲೋಕೋಪಕಾರಿ ಕೆಲಸ ಮಾಡಿದ್ದರು. ಈ ಗುಣವೇ ಡಾ. ಹೆಚ್.ಸಿ. ಸತ್ಯನ್ ಅವರಲ್ಲಿ ಅರಳಿ, ಅವರನ್ನು ಸಮಾಜಮುಖಿ ಕೆಲಸದಲ್ಲಿ ತೊಡಗಿಸಲು ಪ್ರೇರಣೆಯಾಯಿತು. ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಹಾಸನದಲ್ಲಿ, ಉನ್ನತ ಶಿಕ್ಷಣವನ್ನು ದೇಶದ ಬೇರೆ ಬೇರೆ ವಿಶ್ವವಿದ್ಯಾಲಯಗಳಿಂದ ಪಡೆಯುತ್ತಾರೆ.
ಡಾ. ಹೆಚ್.ಸಿ.ಸತ್ಯನ್ ಅವರು ಮಾಹಿತಿ ಹಕ್ಕು ಕಾಯ್ದೆ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾಗಿ ಹಾಗೂ ಮಾಹಿತಿ ಹಕ್ಕು ಆಯುಕ್ತರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಬುದ್ಧತೆ ಹೊಂದಿದ್ದಾರೆ. ಆಡಳಿತಾನುಭವದಲ್ಲಿ ಪಳಗಿದ ಡಾ.ಎಚ್.ಸಿ.ಸತ್ಯನ್ ಅವರು ತಮ್ಮ ಸೇವಾ ಅವಧಿಯಲ್ಲಿ ಗ್ರಾಮ ಪಂಚಾಯತಿಯಿಂದ ಉಚ್ಚ ನ್ಯಾಯಾಲಯದವರೆಗೆ ಅನೇಕ ವ್ಯಾಜ್ಯಗಳನ್ನು ಸಂವಿಧಾನಾತ್ಮಕವಾಗಿ ಬಗೆಹರಿಸಿದವರು. ವಿಶೇಷವಾಗಿ ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾಗಿದ್ದಾಗ ತಪ್ಪಿತಸ್ಥ ಅಧಿಕಾರಿಗೆ ರೂ. 2.12 ಕೋಟಿ ದಂಡ ವಿಧಿಸುವ ಮೂಲಕ ಇಡಿ ದೇಶದಲ್ಲಿಯೇ ಮಾಹಿತಿ ಆಯೋಗಗಳಲ್ಲಿ ವಿಧಿಸಿದ ಅತ್ಯಧಿಕ ದಂಡ ಪ್ರಕರಣ ಎಂದು ಹೆಸರಾಗಿದೆ. ಯಾವುದೇ ಸಾರ್ವಜನಿಕ ಹಿತಾಸಕ್ತಿಯಿಲ್ಲದ ಒಂಟಿ ವ್ಯಕ್ತಿಗಳು ಸಲ್ಲಿಸಿದ ಮೇಲ್ಮನವಿಗಳನ್ನು ಒಂದೇ ವಿಚಾರಣೆಯಲ್ಲಿ ವಿಲೇವಾರಿ ಮಾಡಿದ್ದಾರೆ. ಅನಗತ್ಯ ಮೇಲ್ಮನವಿಗಳನ್ನು ಸಲ್ಲಿಸುತ್ತಿದ್ದ 26 ಜನರನ್ನು ಕಪ್ಪು ಪಟ್ಟಿಗೆ ಸೇರಿಸಿದ ದಕ್ಷ ಅಧಿಕಾರಿ ಸತ್ಯನ್ ಅವರು. ಇವರ ಈ ಸಾರ್ವಜನಿಕ ಹಿತಾಸಕ್ತಿಯನ್ನು ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ವಿಧಾನ ಸಭೆ ಅಧಿವೇಶನದಲ್ಲಿ ಶ್ರೀಯುತರ ಕಾರ್ಯವೈಖರಿಯನ್ನು ಶ್ಲಾಘಿಸಲಾಗಿದೆ.
ಕರ್ನಾಟಕ ಸರಕಾರದ ನೀತಿಯಂತೆ ಆಡಳಿತದಲ್ಲಿ ಪಾರದರ್ಶಕತೆ ಮತ್ತು ನಮ್ಯತೆಯೊಂದಿಗೆ ಕತರ್ÀವÀ್ಯಗಳನ್ನು ನಿರ್ವಹಿಸುವ ಮೂಲಕ, ಸುಮಾರು 30 ವರ್ಷಗಳ ಕಾಲ ಸಾರಿಗೆ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. 1990ರಲ್ಲಿ ಕರ್ನಾಟಕ ಸರ್ಕಾರದ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಮೋಟಾರ್ ವಾಹನಗಳ ನಿರೀಕ್ಷಕರಾಗಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಅಲ್ಲಿಯೂ ಅಪಾಯ ಹಾಗೂ ಅಪರಾಧಗಳನ್ನು ತಡೆಯಲು ಚಾಲಕರಿಗೆ ಶಿಸ್ತುಬದ್ಧ ತರಬೇತಿ ಶಿಬಿರಗಳನ್ನು ಕಾರ್ಯಾಗಾರಗಳನ್ನು ಆಯೋಜಿಸಿ, ಚಾಲಕರಲ್ಲಿ ಸಾಮಾಜಿಕ ಎಚ್ಚರಿಕೆ ಹಾಗೂ ಸಾಂಸ್ಕøತಿಕ ಪ್ರಜ್ಞೆ ಬೆಳೆಯುವಂತೆ ಮಾಡುತ್ತಾರೆ. ಹಾಸನದ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಉಪನ್ಯಾಸಕರಾಗಿದ್ದಾಗಲೂ ಇಂತಹ ಅನೇಕ ಜನಮುಖಿಯಾದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ, ಸಹೋದ್ಯೋಗಿಗಳಲ್ಲಿ ಸಾಂಸ್ಕøತಿಕ ಅಭಿರುಚಿ ಮೂಡಿಸಿದ್ದಾರೆ
ರಾಷ್ಟ್ರೀಯ ಏಕೀಕರಣ ಮತ್ತು ಸಾಮಾಜಿಕ ಜವಾಬ್ದಾರಿಗಳ ಸಂದೇಶವನ್ನು ಹರಡಲು, ಸ್ಥಳೀಯ ಸಾಂಸ್ಕøತಿಕ ಉತ್ಸವಗಳನ್ನು ಮತ್ತು ನಾಟಕ ಪ್ರದರ್ಶನಗಳನ್ನು ಆಯೋಜಿಸಿದ್ದಾರೆ. ಆರೋಗ್ಯ ಮತ್ತು ಸುರಕ್ಷತೆಯ ಕುರಿತು ಅಭಿಯಾನಗಳನ್ನು ಆಯೋಜಿಸಿದ್ದಾರೆ. ಬೆಂಗಳೂರು ಬಿಬಿಎಂಪಿ ಮೈಸೂರು ಮತ್ತು ಹಾಸನದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಶಾಲಾ ಮತ್ತು ಕಾಲೇಜುಗಳಲ್ಲಿ ರಸ್ತೆ ಸುರಕ್ಷತೆ ಅಭಿಯಾನಗಳನ್ನು ಮತ್ತು ವಿಚಾರ ಸಂಕಿರಣಗಳನ್ನು ನಡೆಸುವುದು, ಬೆಂಗಳೂರು ಬಿಬಿಎಂಪಿ, ಮೈಸೂರು ಮತ್ತು ಹಾಸನ ಪ್ರದೇಶಗಳಲ್ಲಿ ವರ್ಷಕ್ಕೆ ಎರಡು ಬಾರಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸದಸ್ಯರಿಗೆ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಾಗಲು ಅನುವು ಮಾಡಿಕೊಡಲು ಚಾಲನಾ ತರಬೇತಿ ಶಿಬಿರಗಳನ್ನು ನಡೆಸಿದ್ದಾರೆ. ಉದ್ಯೋಗಾವಕಾಶಗಳನ್ನು ಒದಗಿಸಿದ್ದಾರೆ. ವಾಯುಮಾಲಿನ್ಯದ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಜಾಗೃತಿ ಮೂಡಿಸಲು ಅಭಿಯಾನಗಳು ಮತ್ತು ಚಳುವಳಿಗಳು, ಮಕ್ಕಳಿಗೆ ಉಚಿತ ಓದುವಿಕೆ ಮತ್ತು ಅಧ್ಯಯನ ಸಾಮಗ್ರಿಗಳನ್ನು ವಿತರಿಸುವುದು, ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ ಸೌಲಭ್ಯ ಒದಗಿಸಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಉಚಿತವಾಗಿ ಸಂಚಾರ ಸಂಕೇತಗಳ ಚಾರ್ಟ್ಗಳನ್ನು ವಿತರಿಸಿದ್ದಾರೆ. ವೃತಿಪರ ಜ್ಞಾನ ಮತ್ತು ಅನುಭವವನ್ನು ಹೆಚ್ಚಿಸಲು 1996ರಲ್ಲಿ ಕರ್ನಾಟಕ ರಾಜ್ಯ ಮಟ್ಟದ ಪುನರ್ಮನನ ತರಬೇತಿ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಭಾಗವಹಿಸಿದ್ದಾರೆ. ಮಣ್ಣಿನ ಫಲವತ್ತತೆಯ ಮೇಲೆ ರಾಸಾಯನಿಕ ಗೊಬ್ಬರ ಬೀರುವ ಪರಿಣಾಮವನ್ನು ಕಡಿಮೆ ಮಾಡಲು ಸಾವಯವ ಕೃಷಿಯ ಕುರಿತು ಅಧ್ಯಯನ ಮಾಡಿದ್ದಾರೆ. ಇವರ ಈ ಸಾಂಸ್ಕøತಿಕ ಕಳಕಳಿಯನ್ನು ಗುರುತಿಸಿ ನಾಡಿನ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ರೋಟರಿ ಇಂಟರ್ ನ್ಯಾಷಲ್ ರೋಟರಿ ಫೌಂಡೇಶನ್, ಪಾಲ್(Pಚಿuಟ) ಹ್ಯಾರಿಸ್ ಫೆಲೋ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಅಂತರ ರಾಷ್ಟ್ರೀಯ ಸೇವೆಗಾಗಿ ರೋಟರಿ ಮೈಸೂರು ಪೂರ್ವ ಪ್ರಶಸ್ತಿ, ಸೇವಾ ವಿಭೂಷಣ ರಾಷ್ಟ್ರೀಯ ಏಕೀಕರಣ ಪ್ರಶಸ್ತಿ, ಆಡಳಿತ ಸೇವಾರತ್ನ ಪ್ರಶಸ್ತಿ, ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯಿಂದ ವಿಶೇಷ ಕಾರ್ಪೋರೇಟ್ ಕೊಲ್ಯಾಟರಲ್ ಪ್ರಶಸ್ತಿ, ಸಮಾಜ ಸೇವಾರತ್ನ ಪ್ರಶಸ್ತಿ, ಅಂತರ ರಾಷ್ಟ್ರೀಯ ಮಾನವೀಯ ಪ್ರಶಸ್ತಿ, ಆಡಳಿತ ಮತ್ತು ಸಾರ್ವಜನಿಕ ಸೇವೆಗಾಗಿ ಕರ್ನಾಟಕ ವಿಶ್ವಕರ್ಮ ಸಾಮಾಜಿಕ ಹಾಗೂ ರಾಜಕೀಯ ಸಮಿತಿಯಿಂದ ಚಿನ್ನದ ಪದಕ ಪ್ರಶಸ್ತಿ ಪಡೆದಿದ್ದಾರೆ. ಮೈಸೂರು ಮಹಾರಾಜ ಶ್ರೀಕಂಠದತ್ತ ಒಡೆಯರಿಂದ ಗೌರವಿಸಲ್ಪಟ್ಟಿರುತ್ತಾರೆ. ಹೀಗೆ ಹಲವು ಶ್ರೇಷ್ಠ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಡಿ.ಲಿಟ್(2024) ಪದವಿಯನ್ನು ಗೌರವಾನ್ವಿತ ರಾಜ್ಯಪಾಲರಿಂದ ಪಡೆದಿದ್ದಾರೆ.
ಡಾ. ಹೆಚ್.ಸಿ. ಸತ್ಯನ್ ಅವರು ಆಡಳಿತಾತ್ಮಕ ಸಾಮಾಜಿಕ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಮೌಲಿಕ ಸೇವೆಯನ್ನು ಗುರುತಿಸಿ ಕನ್ನಡ ವಿಶ್ವವಿದ್ಯಾಲಯವು ತನ್ನ 34ನೇ ನುಡಿಹಬ್ಬದಲ್ಲಿ ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ನೀಡಿ ಗೌರವಿಸುತ್ತದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್