
ಹುಬ್ಬಳ್ಳಿ, 24 ಫೆಬ್ರವರಿ (ಹಿ.ಸ.):
ಆ್ಯಂಕರ್:
ಬೆಳಸಿದವರನ್ನೇ ಮರೆಯುವ ಹೀನ ಮನಸ್ಥಿತಿಯ ಶಾಸಕ ಅರವಿಂದ ಬೆಲ್ಲದ್ ಅವರು ಸ್ವಘೋಷಿತ ನಾಯಕನಂತೆ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಬಲಿಗರು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಇಂದು ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯಲ್ಲಿ ರಾಜ್ಯದ ಬಿಜೆಪಿ ಹಿರಿಯ ನಾಯಕ ಬಿ. ಎಸ್. ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಫೋಟೋವನ್ನು ಬ್ಯಾನರ್ ನಲ್ಲಿ ಹಾಕದೆ ಹೋರಾಟದ ಕ್ರೆಡಿಟ್ ಪಡೆಯಲು ಹೊರಟಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಮೊಟ್ಟಮೊದಲು ಬೆಂಬಲ ನೀಡಿದ್ದು ವಿಜಯೇಂದ್ರ ಅವರು ಎಂಬುದನ್ನು ಬೆಲ್ಲದ್ ಮರೆತಂತಿದೆ, ಕಾರ್ಯಕರ್ತರು ನಿಮ್ಮ ಆಟಗಳನ್ನೆಲ್ಲಾ ನೋಡುತ್ತಿದ್ದಾರೆ, ಮುಂದೆ ತಕ್ಕ ಪಾಠ ಕಲಿಸುತ್ತಾರೆ. ಬ್ಯಾನರ್ ನಲ್ಲಷ್ಟೇ ನಮ್ಮ ನಾಯಕರ ಫೋಟೋ ತೆಗೆಯಬಹುದು ಅದರೆ ಹುಬ್ಬಳ್ಳಿ -ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಅರವಿಂದ್ ಬೆಲ್ಲದ ಹೆಸರು ತೆಗೆಯುವುದು ನಿಶ್ಚಿತ ಎಂದು ವಿಜಯೇಂದ್ರ ಬೆಂಬಲಿಗರು ಎಚ್ಚರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa